ಸಿಎಂ ಸಿದ್ದರಾಮಯ್ಯ ಕುರ್ಚಿಯಿಂದ ಬಿದ್ದಿದ್ದು ಸೋಲಿನ ಸೂಚನೆ: ಹೆಚ್.ಡಿ.ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಎಲ್ಲಿಂದ ಆರಂಭವಾಗಿತ್ತೋ, ಅಲ್ಲಿಯೇ ಅಂತ್ಯಗೊಳ್ಳುತ್ತದೆ. ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಕೆಳಗೆ ಬಿದ್ದಿರುವುದು ಅವರ ಸೋಲಿನ ಸೂಚನೆ ಎಂದು ಮಾಜಿ...
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಎಲ್ಲಿಂದ ಆರಂಭವಾಗಿತ್ತೋ, ಅಲ್ಲಿಯೇ ಅಂತ್ಯಗೊಳ್ಳುತ್ತದೆ. ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಕೆಳಗೆ ಬಿದ್ದಿರುವುದು ಅವರ ಸೋಲಿನ ಸೂಚನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಬುಧವಾರ ಹೇಳಿದ್ದಾರೆ. 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ತಮ್ಮ ಪುತ್ರನಿಗೆ ಅವಕಾಶ ಕಲ್ಪಿಸಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದಾರೆ. ಅಪ್ಪ, ಮಕ್ಕಳು ಮನೆಗೆ ಹೋಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಎರಡೂ ಕ್ಷೇತ್ರದ ಮತದಾರರು ಸಿದ್ದರಾಮಯ್ಯ ಅವರನ್ನು ಸೋಲಿಸಲು ತೀರ್ಮಾನಿಸಿದ್ದಾರೆಂದು ಹೇಳಿದ್ದಾರೆ. 
ಸಿದ್ದರಾಮಯ್ಯ ಮತ್ತು ಯತೀಂದ್ರ ಅವರನ್ನು ಸೋಲಿಸಲಬೇಕೆಂದು ನಾನಾಗಲೀ ಅಥವಾ ಶಾಸಕ ಜಿ.ಟಿ.ದೇವೇಗೌಡರಾಗಲೀ ಎಲ್ಲಿಯೂ ಹೇಳಿಲ್ಲ. ಜನರೇ ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರವಷ್ಟೇ ನನ್ನ ಗುರಿಯಲ್ಲ. ಈ ಚುನಾವಣೆಯನ್ನು ನಾನು ವೈಯಕ್ತಿಕವಾಗಿಯೂ ತೆಗೆದುಕೊಂಡಿಲ್ಲ. ನಮ್ಮ  ಪಕ್ಷ 113 ಸ್ಥಾನ ದಾಟಬೇಕಷ್ಟೇ. ಚಾಮುಂಡೇಶ್ವರಿ ಸೇರಿ ಯಾವ ಕ್ಷೇತ್ರದಲ್ಲೂ ನಾವು ಬಿಜೆಪಿ ಜೊತೆಗೆ ಕೈ ಜೋಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಬಳಿಕ ಕೆಂಪಯ್ಯ ಅವರ ವಿರುದ್ಧ ಕಿಡಿಕಾರಿರುವ ಅವರು, ಚುನಾವಣಾ ಆಯೋಗಕ್ಕಿಂತ ಸಿದ್ದರಾಮಯ್ಯ ಮತ್ತು ಕೆಂಪಯ್ಯ ಶಕ್ತಿಶಾಲಿ. ಆಯೋಗದ ಯಾವುದೇ ಆದೇಶಕ್ಕೂ ಅವರು ಕ್ಯಾರೆ ಎನ್ನುವುದಿಲ್ಲ. ಸಿದ್ದರಾಮಯ್ಯ ರೆಸಾರ್ಟ್ ರಾಜಕೀಯ ಮಾಡಿ, ಒಕ್ಕಲಿಗ ಮುಖಂಡರನ್ನು ರೆಸಾರ್ಟ್'ಗೆ ಕರೆಸಿ ಹಣ ಕೊಟ್ಟು ಖರೀಸುತ್ತಿದ್ದಾರೆಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com