ಚುನಾವಣೆಗೂ ಮುನ್ನ ರಾಜಕಾರಣಿಗಳು ಪಕ್ಷ ಬೇಧವಿಲ್ಲದೆ ಬರುವ ಏಕೈಕ ಸ್ಥಳ ಸಿದ್ಧಗಂಗಾ ಮಠ!

ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಸೋನಿಯಾಗಾಂಧಿ, ಯಾವುದೇ ರಾಜಕಾರಣಿಯಾದರೂ ನಡೆದಾಡುವ ದೇವರು ಎಂಬ ಖ್ಯಾತಿ ಪಡೆದಿರುವ ...
ಪ್ರಧಾನಿ ಮೋದಿ -ಸಿದ್ದಗಂಗಾ ಶ್ರೀಗಳ ಭೇಟಿ
ಪ್ರಧಾನಿ ಮೋದಿ -ಸಿದ್ದಗಂಗಾ ಶ್ರೀಗಳ ಭೇಟಿ
ತುಮಕೂರು: ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಸೋನಿಯಾಗಾಂಧಿ, ಯಾವುದೇ ರಾಜಕಾರಣಿಯಾದರೂ  ನಡೆದಾಡುವ ದೇವರು ಎಂಬ ಖ್ಯಾತಿ ಪಡೆದಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡುವ ಅವಕಾಶದಿಂದ ವಂಚಿತರಾಗಲು ಇಷ್ಟ ಪಡುವುದಿಲ್ಲ, 
111 ವರ್ಷದ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಎಲ್ಲಾ ಪಕ್ಷದ ರಾಜಕೀಯ ನಾಯಕರು ಸಾಲುಗಟ್ಟಿ ನಿಲ್ಲುತ್ತಾರೆ. 
75 ವರ್ಷದ ಹಿಂದೆ ಮಠದ ಚುಕ್ಕಾಣಿ ಹಿಡಿದ ಶಿವಕುಮಾರ ಸ್ವಾಮೀಜಿಗಳು 40 ವಿದ್ಯಾರ್ಥಿಗಳೊಂದಿಗೆ ಗುರುಕುಲ ಆರಂಭಿಸಿದರು, ಈಗ ಅದೇ ಗುರುಕುಲದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ವಿದ್ಯಾಭ್ಯಾಸ ನೀಡಲಾಗುತ್ತಿದೆ. ರಾಜ್ಯಾದ್ಯಂತ ಮಠಕ್ಕೆ ಸೇರಿದ 124 ವಿದ್ಯಾಸಂಸ್ಥೆಗಳಿವೆ.
ತುಮಕೂರಿನ  ಸುತ್ತಮುತ್ತಲಿನ ಜಿಲ್ಲೆಗಳಾದ ಮಂಡ್ಯ, ರಾಮನಗರ, ಬೆಂಗಳೂರು ಹಾಗೂ ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದ ಸಾವಿರಾರು ಜನರು ಸ್ವಾಮೀಜಿಗಳ ಸಲಹೆ ಪಡೆಯಲು ಬರುತ್ತಾರೆ. ಗೃಹ ಪ್ರವೇಶ, ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಸ್ವಾಮೀಜಿಯವರನ್ನು ಆಮಂತ್ರಿಸಿ ಪಾದಪೂಜೆ ಮಾಡಲಾಗುತ್ತದೆ, 
ರಾಜಕಾರಣಿಗಳು ಇದರಿಂದ ಹೊರತಾಗಿಲ್ಲ, ಚುನಾವಣಾ ಸಮಯದಲ್ಲಿ ಮಠಕ್ಕೆ ಭೇಟಿ ನೀಡುವ ರಾಜಕೀಯ ಪಕ್ಷಗಳ ಮುಖಂಡರು,  ಶತಾಯುಷಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾಗಿ ಜನರಿಗೆ ಸಂದೇಶ ನೀಡುತ್ತಾರೆ.
1980ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಮಠದ ಜೊತೆ ಉತ್ತಮ ಸಂಬಂಧ ಹೊಂದಿದ್ದರು.  ಕಿರಿಯ ಸ್ವಾಮೀಜಿ ಶ್ರೀ ಗೌರಿ ಶಂಕರ ಸ್ವಾಮಿ  ಅವರನ್ನು ಪದಚ್ಯುತಗೊಳಿಸಿದಾಗ ಪ್ರಕರಣ ಶಮನಗೊಳಿಸಲು ಸಹಾಯ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಕುಟುಂಬಸ್ಥರಿಗೆ ಕೂಡ ಮಠದ ಜೊತೆ ಒಡನಾಟ ಇತ್ತು.  ಮುಖ್ಯಮಂತ್ರಿ ಯಾಗುವುದಕ್ಕೂ ಮುನ್ನ ವೀರೇಂದ್ರ ಪಾಟೀಲ್ ಅವರನ್ನು ದೇವೇಗೌಡ ಮಠಕ್ಕೆ ಕರೆತಂದಿದ್ದರು.  ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ದೇವೇಗೌಡ ಕುಟುಂಬದ ಜೊತೆಗಿನ ಬಾಂಧವ್ಯ ಸ್ವಲ್ಪ ಮಟ್ಟಿಗೆ ತಗ್ಗಿತು. 
ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 20 ತಿಂಗಳ ನಂತರ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡದಿದ್ದಾಗ ದೇವೇಗೌಡರ ಕುಟುಂಬಕ್ಕೂ  ಮಠದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ತಗ್ಗಿತು, 2012ರಲ್ಲಿ ಬಿಜೆಪಿ ನಾಯಕರೊಂದಿಗೆ ಸೇರಿಕೊಂಡು ಯಡಿಯೂರಪ್ಪ ಧರ್ಮಯುದ್ಧ ಸಾರಿದರು.ಈ ವೇಳೆ ಬಿಎಸ್ ವೈ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು.
ಕಾಂಗ್ರೆಸ್ ಪಕ್ಷ ಕೂಡ ಶ್ರೀಗಳನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ಳಲಿಲ್ಲ, ಶ್ರೀಗಳ 105ನೇ ಹುಟ್ಟುಹಬ್ಬ ಸಮಾರಂಭಕ್ಕೆ ಸೋನಿಯಾ ಗಾಂಧಿ ಆಗಮಿಸಿದ್ದರು.
2017ರ ಅಕ್ಟೋಬರ್ ನಲ್ಲಿ ದೇವೇಗೌಡರು ತಮ್ಮ ಪಕ್ಷದ  ಮನಮನೆಗೆ ಕುಮಾರಣ್ಣ ಪ್ರಚಾರ ಕಾರ್ಯವನ್ನು ಮಠದ ಆವರಣದಿಂದ ಆರಂಭಿಸಿದರು, ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com