

ನವದೆಹಲಿ : ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ಚುನಾವಣೆಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿರುವ ಬಿಜೆಪಿ ಇಂದು ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಈ ಸಂಬಂಧ ನಿನ್ನೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಸಭೆ ನಡೆಸಿದ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಗಾಲಿ ಜನಾರ್ಧನ್ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರ ಕುಮಾರ ಬಂಗಾರಪ್ಪ ಸೇರಿದಂತೆ 82 ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದ್ದು, ಇಂದು ಪಟ್ಟಿ ಬಿಡುಗಡೆಯಾಗಿದೆ.
ಟಿಕೆಟ್ ಪಡೆದ ಪ್ರಮುಖ ಅಭ್ಯರ್ಥಿಗಳ ಕ್ಷೇತ್ರ- ಹೆಸರು
ಬಳ್ಳಾರಿ ನಗರ - ಜಿ. ಸೋಮಶೇಖರ್ ರೆಡ್ಡಿ
ಸೊರಬ- ಕುಮಾರ್ ಬಂಗಾರಪ್ಪ
ಕೆ. ಆರ್. ಪುರ ನಂದೀಶ್ ರೆಡ್ಡಿ, ಬ್ಯಾಟರಾಯನಪುರ - ಎ. ರವಿ
ಮಹಾಲಕ್ಷ್ಮಿ ಲೇಔಟ್- ಎನ್.ಎಲ್. ನರೇಂದ್ರಬಾಬು
ಶಿವಾಜಿನಗರ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಚಿಕ್ಕೋಡಿ -ಸದಲಗ- ಅಣ್ಣಾ ಸಾಹೇಬ್ ಜೊಲ್ಲೆ,
ಗೋಕಾಕ್, - ಅಶೋಕ್ ಪೂಜಾರಿ
ರಾಮದುರ್ಗ- ಮಹದೇವಪ್ಪ ಎಸ್. ಯಡವಾಡ್
ತೇರದಾಳ - ಸಿದ್ದು ಸವದಿ, ಜಮಖಂಡಿ- ಶ್ರೀಕಾಂತ್ ಕುಲಕರ್ಣೀ,
ಬಿಳಗಿ- ಮುರುಗೇಶ್ ನಿರಾಣಿ, ಬಾಗಲಕೋಟೆ- ವೀರಣ್ಣ ಚರಂತಿಮಠ
ದೇವರ ಹಿಪ್ಪರಗಿ- ಸೋಮಣ್ಣಗೌಡ ಪಾಟೀಲ್ ಸೇರಿದಂತೆ ಮತ್ತಿತರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
Here is the second list of 82 BJP candidates for the upcoming assembly elections.
We wish candidates the very best!
ಈ ಸಲಾ ಸರ್ಕಾರ ನಮ್ದೆ !