ಚಾಮುಂಡೇಶ್ವರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಸಿಎಂ, ಸಿದ್ದರಾಮಯ್ಯ ಆಸ್ತಿ ಎಷ್ಟು ಗೊತ್ತಾ?

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಿಎಂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗೊಂದಲ ಮುಂದುವರಿದ್ದರೂ ಸಹ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ನಾಮಪತ್ರ ಸಲ್ಲಿಸಿದರು.
ಚಾಮುಂಡೇಶ್ವರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಚಾಮುಂಡೇಶ್ವರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಮೈಸೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಿಎಂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗೊಂದಲ ಮುಂದುವರಿದ್ದರೂ ಸಹ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ನಾಮಪತ್ರ ಸಲ್ಲಿಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಂಬಲಿಗರೊಂದಿಗೆ ಭರ್ಜರಿ ಮೆರವಣಿಗೆಯಲ್ಲಿ ತೆರಳಿ ಸಿಎಂ ಸಿದ್ದರಾಮಯ್ಯ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ತಮ್ಮ ಆಸ್ತಿ ವಿವರ ಕೂಡ ಮಾಡಿದರು. ಸಿದ್ದರಾಮಯ್ಯ ಅವರು ನೀಡಿರುವ ಮಾಹಿತಿಯಂತೆ ಸಿದ್ದರಾಮಯ್ಯ ಅವರು, ಎಸ್ ಬಿಐ ಬ್ಯಂಕ್ ನಲ್ಲಿ 14, 92, 001ರೂ ಮತ್ತು ಸಿಂಡಿಕೇಟ್ ಬ್ಯಾಂಕ್ ನಲ್ಲಿ 21, 77, 804 ರೂ ಠೇವಣಿ ಸೇರಿದಂತೆ ಒಟ್ಟು 3 ಬ್ಯಾಂಕ್ ಗಳಲ್ಲಿ ಒಟ್ಟು 41, 76, 149 ಠೇವಣಿ  ಇದೆ. ಸಿದ್ದರಾಮಯ್ಯ ಅವರ ಬಳಿ 2 ಲಕ್ಷ ರೂ ನಗದು ಇದ್ದು, 350 ಗ್ರಾಂ ಚಿನ್ನ ಮತ್ತು 2 ಕೆಜಿ ಬೆಳ್ಳಿ ವಸ್ತುಗಳಿವೆಯಂತೆ. 
ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್ ನಲ್ಲಿ ಸಿದ್ದರಾಮಯ್ಯ ಅವರ ಮನೆ ಇದ್ದು, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸಿಎಂ 5 ಕೋಟಿ ಮೌಲ್ಯದ 2 ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಮೈಸೂರು ತಾಲೂಕಿನ ವರುಣಾ ಹೋಬಳಿಯ ಹೊಸಳ್ಳಿ ಬಳಿ 10 ಲಕ್ಷ ಮೌಲ್ಯದ 4 ಎಕರೆ 4 ಗುಂಟೆ ಭೂಮಿ ಇದ್ದು, ಸಿಎಂ ಬಳಿ 13, 43,420 ಮೌಲ್ಯದ ಇನ್ನೋವಾ ಕಾರು ಕೂಡ ಇದೆ. ಇನ್ನು ಪುತ್ರ ಡಾ.ಯತೀಂದ್ರರ ಲ್ಯಾಬ್ ಇಂಡಿಯಾ ಇನ್ವೆಸ್ಟ್ ಮೆಂಟ್ ಗೆ ಸಿಎಂ ಸಿದ್ದರಾಮಯ್ಯ 92, 25, 000 ಹಣ ಪಾವತಿ ಮಾಡಿದ್ದು, ಪತ್ನಿ ಪಾರ್ವತಿ ಕಂಪನಿ, ಟ್ರಸ್ಟ್ ಇನ್ವೆಸ್ಟ್ ಮೆಂಟ್ 2, 26, 15, 011 ರೂ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com