ಇಂಗ್ಲೀಷ್ ನಲ್ಲಿ ಸಹಿ ಮಾಡಿ ಎಂದ ಅಧಿಕಾರಿಗೆ ಸಿಎಂ ಹೇಳಿದ್ದೇನು ಗೊತ್ತಾ?

ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕನ್ನಡ ಪ್ರೇಮ ಅನಾವರಣಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಉಮೇದುವಾರಿಕೆ ಸಲ್ಲಿಕೆ ವೇಳೆ ಕನ್ನಡದಲ್ಲಿ ಸಹಿ ಮಾಡಿದ ಸಿಎಂ ಸಿದ್ದರಾಮಯ್ಯ
ಉಮೇದುವಾರಿಕೆ ಸಲ್ಲಿಕೆ ವೇಳೆ ಕನ್ನಡದಲ್ಲಿ ಸಹಿ ಮಾಡಿದ ಸಿಎಂ ಸಿದ್ದರಾಮಯ್ಯ
ಮೈಸೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕನ್ನಡ ಪ್ರೇಮ ಅನಾವರಣಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಹೌದು. ಇಂದು ತಮ್ಮ ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.  ಈ ವೇಳೆ ಭಿಫಾರಂ ಸಲ್ಲಿಕೆ ಮಾಡಿದ ಸಿಎಂ ದಾಖಲೆಗಳಿಗೆ ಸಹಿ ಹಾಕಿದರು. ಸಿಎಂ ಸಿದ್ದರಾಮಯ್ಯ ಕನ್ನಡದಲ್ಲಿ ಸಹಿ ಮಾಡುತ್ತಿರುವುದನ್ನು ಕಂಡ ಚುನಾವಣಾ ಅಧಿಕಾರಿಯೊಬ್ಬರು, ಇಂಗ್ಲೀಷ್ ನಲ್ಲಿ ಸಹಿ ಮಾಡುವಂತೆ ಮನವಿ ಮಾಡಿಕೊಂಡರು.
ಆಗ ಚುನಾವಣಾ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕನ್ನಡದಲ್ಲೇ ಸಹಿ ಮಾಡುವುದಾಗಿ ಹೇಳಿದರು. ಅಲ್ಲದೆ ಇಂಗ್ಲೀಷ್ ಬಾರದವರು ಏನು ಮಾಡಬೇಕು. ಇಂಗ್ಲೀಷ್ ನಲ್ಲಿ ಮಾತ್ರ ಸಹಿ ಹಾಕಬೇಕು ಎಂದು ನಿಯಮವೇನಾದರೂ ಇದೆಯೇ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ಕನ್ನಡದಲ್ಲೇ ಸಹಿ ಹಾಕಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. 
ಉಮೇದುವಾರಿಕೆ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ, '1983 ರಲ್ಲಿ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದಾಗ ನನಗೆ ಆತಂಕ ಇತ್ತು. ಈಗ ನನಗೆ ಯಾವುದೇ ಆತಂಕ ಇಲ್ಲ. ತುಂಬಾ ಸಮಾಧಾನದಿಂದ ಇದ್ದೇನೆ. ನನಗೆ ರಾಜಕೀಯದಲ್ಲಿ ಶತ್ರುಗಳು, ಹಿತ ಶತ್ರುಗಳು ಯಾರು ಇಲ್ಲ. ಕೇವಲ ರಾಜಕೀಯ ವಿರೋಧಿಗಳು ಇದ್ದಾರೆ ಅಷ್ಟೇ. ಚಾಮುಂಡೇಶ್ವರಿ ಜನ ನನಗೆ ಆಶೀರ್ವಾದಿಸುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com