
ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೊಯಲ್ ಹಾಗೂ ಪಿರಾಮಾಳ್ ಕಂಪನಿ ಸಂಶಯಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚೌಹ್ಹಾಣ್ ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಇಂಧನ ಕ್ಷೇತ್ರದಲ್ಲಿ ಪಿರಾಮಾಳ್ ಸಮೂಹ ಕಂಪನಿ ಪ್ರಮುಖವಾದ ಪಾತ್ರ ವಹಿಸುತ್ತಿದೆ. ಗೊಯಲ್ ಇಂಧನ ಸಚಿವರಾದ ನಂತರ ಶೇ. 1000 ಪ್ರೀಮಿಯಂಗೆ ತನ್ನ ಕಂಪನಿಯನ್ನು ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.
ಹಿತಾಸಕ್ತಿ ಸಂಘರ್ಘವನ್ನು ಈ ಅಂಶಗಳೆ ಸ್ಪಷ್ಪಪಡಿಸುತ್ತವೆ. ಅಲ್ಲದೇ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಕಂಪನಿ ಮಾರಾಟ ಮಾಡಿರುವ ಬಗ್ಗೆ ಗೊಯಲ್ ಜವಾಬ್ದಾರರಾಗಿರಬೇಕಾಗುತ್ತದೆ. ಆದರೆ, ಏಕೆ ತನ್ನ ಆಸ್ತಿಯ ಬಗ್ಗೆ ಘೋಷಿಸಿಕೊಂಡಿಲ್ಲ ಎಂದು ಪೃಥ್ವೀರಾಜ್ ಚೌಹ್ಹಾಣ್ ಟೀಕಿಸಿದರು.
Advertisement