ಈ ಕುರಿತಂತೆ ಕಲಬುರಗಿಯಲ್ಲಿ ಸ್ಪಷ್ಟನೆ ನೀಡಿರುವ ಅವರು, ರೆಡ್ಡಿಯವರು ತಮ್ಮ ಗೆಳೆಯ ಶ್ರೀ ರಾಮುಲು ಪರವಾಗಿ ಪ್ರಚಾರ ಮಾಡುತ್ತಿದ್ದಾರೆಯೇ ಹೊರತು ಬಿಜೆಪಿ ಪಕ್ಷದ ಪರವಾಗಿ ಅಲ್ಲ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಮೇ.17 ಅಥವಾ 18ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಶೀರ್ವಾದದೊಂದಿಗೆ ರಾಜ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವೆ ಎಂದು ಹೇಳಿದ್ದಾರೆ.