
ಮಂಗಳೂರು: ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯು ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ನಾಥೂರಾಮ್ ಗೋಡ್ಸೆ ನಡುವಿನ ಸೈದ್ದಾಂತಿಕ ಹೋರಾಟ ಆಗಿದೆ ಎಂದು ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಗಾಂಧೀಜಿಯವರ ಸರ್ವಧರ್ಮ ಸಹಬಾಳ್ವೆಯ ಸಿದ್ಧಾಂತ ಮತ್ತು ಗೋಡ್ಸೆಯ ಹಿಂಸೆಯ ಸಿದ್ದಾಂತಗಳು ಮುಖಾಮುಖಿ ಆಗಿವೆ. ಜನರು ಗಾಂಧೀಜಿಯವರ ಸಿದ್ಧಾಂತವನ್ನು ಬೆಂಬಲಿಸುವ ವಿಶ್ವಾಸವಿದೆ' ಎಂದರು.
ಜನರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಸದ ಮೋದಿ ದೇಶದ ಇತಿಹಾಸದಲ್ಲಿ ಕಂಡ ದೊಡ್ದ ಸುಳ್ಳುಗಾರ ಪ್ರಧಾನಿ ಎಂದು ಟೀಕಿಸಿದ ಹರಿಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಕೊಲೆ ಮಾಡಿಸಿದ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಜೊತೆ ಇದ್ದ ಸಂಚುಗಾರರಿಗೂ ಬಿಜೆಪಿ ಟಿಕೆಟ್ ನೀಡಿದೆ.ಬಿಜೆಪಿ ಹಿಂದುಳಿದ ವರ್ಗದ ಜನರನ್ನು ಹಿಂಸೆಗೆ ಬಳಸಿಕೊಳ್ಳುತ್ತದೆ ಎಂದು ಮಾಜಿ ಸಚಿವ ಕೃಷ್ಣ ಪಾಲೇಮಾರ್ ಸತ್ಯವನ್ನೇ ಹೇಳಿದ್ದಾರೆ ಎಂದರು
Advertisement