ಕರ್ಚೀಫ್ ಒದ್ದೆಯಾಗುವವರೆಗೂ ಅಳಬೇಕೆ: ಎಚ್ ಡಿಕೆ ಕಣ್ಣೀರಿನ ಬಗ್ಗೆ ಡಿವಿಎಸ್ ವ್ಯಂಗ್ಯ!

ಅಳುವುದಕ್ಕೂ ಒಂದು ಮಿತಿಯಿದೆ. 2-3 ಕರ್ಚೀಫ್​ ಒದ್ದೆಯಾಗುವವರೆಗೂ ಯಾರಾದ್ರೂ ಕಣ್ಣೀರು ಹಾಕುತ್ತಾರಾ ಎಂದು ಕೇಂದ್ರ ಸಚಿವ ಡಿ.ವಿ ಸದನಾಂದಗೌಡ..
ಕುಮಾರ ಸ್ವಾಮಿ ಮತ್ತು ಡಿ,ವಿ ಸದಾನಂದಗೌಡ
ಕುಮಾರ ಸ್ವಾಮಿ ಮತ್ತು ಡಿ,ವಿ ಸದಾನಂದಗೌಡ
Updated on: 
ಬೆಂಗಳೂರು: ಅಳುವುದಕ್ಕೂ ಒಂದು ಮಿತಿಯಿದೆ. 2-3 ಕರ್ಚೀಫ್​ ಒದ್ದೆಯಾಗುವವರೆಗೂ ಯಾರಾದ್ರೂ ಕಣ್ಣೀರು ಹಾಕುತ್ತಾರಾ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿರುವ ಸದಾನಂದಗೌಡರು, ಸಿಎಂ ಕುಮಾರಸ್ವಾಮಿಯವರಿಗೆ ರಾಜ್ಯದ ಅಭಿವೃದ್ಧಿಯಲ್ಲಿ ಯಾವ ಆಸಕ್ತಿಯೂ ಇಲ್ಲ ಎಂದು ಟೀಕಿಸಿದ್ದಾರೆ. 
ಕುಮಾರಸ್ವಾಮಿ ಅವರು ಕಣ್ಣನ್ನು ಒರೆಸಿಕೊಳ್ಳುತ್ತಿದ್ದ ಕರ್ಚೀಫ್​ನಲ್ಲಿ ಕಣ್ಣೀರು ಬರಿಸುವ ವಸ್ತುಗಳಿತ್ತೋ ಏನೋ ಗೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.
ಮುದ್ರಣ ಮತ್ತು ಎಲೆಕ್ಟ್ರಾನಿಕ್​ ಮಾಧ್ಯಮಗಳಲ್ಲಿ ಮಸಾಲೆ ಸುದ್ದಿಗಳು ಬರುತ್ತಿವೆ. ಇಂಥ ಮಾಧ್ಯಮಗಳು ನಮಗೆ ಬೇಕಾಗಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ನಮಗೆ ಮೀಡಿಯಾಗಳು. ಕಾರ್ಯಕರ್ತರ ಎದುರು ಮತ್ತೊಂದು ಮೀಡಿಯಾ ಬೇಕಾಗಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com