ಲೋಕಸಭೆ ಚುನಾವಣೆ: ಅಮಿತ್ ಶಾ ರಾಜಕೀಯ ತಂತ್ರಗಾರಿಕೆಗೆ ಬೆಂಗಳೂರು 'ಹಾಟ್ ಬೆಡ್'!

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಬೆಂಗಳೂರು ಹಾಟ್ ಬೆಡ್ ಆಗಿದೆ,..
ಅಮಿತ್ ಶಾ
ಅಮಿತ್ ಶಾ
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಅಬ್ಬರ ಮುಗಿದಿದೆ,  ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಬೆಂಗಳೂರು ಹಾಟ್ ಬೆಡ್ ಆಗಿದೆ,. ಕೇವಲ ರಾಜ್ಯ ಲೋಕಸಭೆ ಚುನಾವಣೆಗೆ ಮಾತ್ರವಲ್ಲ, ದಕ್ಷಿಣ ಭಾರತ ರಾಜ್ಯಗಳ ಲೋಕಸಭೆ ಚುನಾವಣೆಗೆ ಬಿಜೆಪಿ ಚಾಣಾಕ್ಯ ಅಮಿತ್ ಶಾ ಇಲ್ಲಿಂದಲೇ ರಣತಂತ್ರ ರೂಪಿಸಲಿದ್ದಾರೆ.
ವಿಧಾನಸಭೆ ಚುನಾವಣೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಅಮಿತ್ ಶಾ ಮತ್ತವರ ವೃತ್ತಿಪರ ಕಾರ್ಯತಂಡ ಇಲ್ಲಿದ್ದುಕೊಂಡೇ ಕಾರ್ಯತಂತ್ರ ಮುಂದುವರಿಸಲಿದೆ, ಹೀಗಾಗಿ ಬೆಂಗಳೂರು ಲೋಕಸಭೆ ಚುನಾವಣೆಯ ಪ್ರಮುಖ ವೇದಿಕೆಯಾಗಲಿದೆ.
ಅಮಿತ್ ಶಾ ತಂಡ ದಕ್ಷಿಣ ಭಾರತದ 5 ರಾಜ್ಯಗಳ ಲೋಕಸಭೆ ಚುನಾವಣೆ ರಣತಂತ್ರ ರೂಪಿಸಲಿದೆ.ಅದರಲ್ಲಿ ಹೆಚ್ಚಾಗಿ ಕರ್ನಾಟಕದ ಕಡೆ ತಮ್ಮ ಗಮನ ಫೋಕಸ್ ಮಾಡಲಿದೆ, ಹೀಗಾಗಿ ಬೆಂಗಳೂರನ್ನು ತಮ್ಮ ಪ್ರಧಾನ ಕಚೇರಿಯನ್ನಾಗಿ ಮಾಡಿಕೊಳ್ಳುತ್ತಿದೆ.
ಬೆಂಗಳೂರನ್ನು ಆರಿಸಿಕೊಳ್ಳಲು ಅಮಿತ್ ಶಾ ತರ್ಕ ಕೆಲಸ ಮಾಡಿದೆ, ಸುಲಭವಾಗಿ ನೇಮಕಾತಿ, ತಾಂತ್ರಿಕ ಸೌಲಭ್ಯ ಮಕ್ಕತು ಮೂಲಭೂತ ಸೌಕರ್ಯ ಪ್ರಮುಖ ಕಾರಣವಾಗಿದೆ, ಅಮಿತ್ ಶಾ ಅವರ ಅಸೋಸಿಯೇಟೆಡ್ ಆಫ್ ಬ್ರಿಲಿಯಂಟ್ ಮೈಂಡ್ಸ್ ತಂಡವನ್ನು ವಾಪಸ್ ಬೆಂಗಳೂರಿಗೆ ಬರುವಂತೆ ಶಾ ಸೂಚಿಸಿದ್ದಾರೆ.
ಮೂರು ಸದಸ್ಯರ ತಂಡ ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದುಪ, ಕೇಂದ್ರದ ನಾಯಕರ ಜೊತೆ ನೇರ ಸಂಪರ್ಕ ಹೊಂದಿದೆ, ಬೆಂಗಳೂರನ್ನು ಕಂಟ್ರೋಲ್ ರೂಂ ಮಾಡಿಕೊಂಡಿರುವ ಯೋಜನೆ ಸರಿಯಾಗಿದೆ, ರಾಜ್ಯಗಳ ಪ್ರವಾಸ, ನಿರ್ಧಿಷ್ಟ ವಿಶ್ಲೇಷಣೆ, ಪ್ರಚಾರ ತಂತ್ರ, ಮತದಾರರ ಪ್ರೊಫೈಲ್ ಮತ್ತು ಸಂಶೋಧನೆಗೆ ನೆರವಾಗುತ್ತದೆ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮ್ಮ ಪಕ್ಷಕ್ಕೆ ಬೆಂಗಳೂರು ಸೂಕ್ತವಾದ ಪ್ರಾದೇಶಿಕ ಕಚೇರಿಯಾಗಿದೆ. ನಾವಿಲ್ಲದಿದ್ದರೂ ನಗರದ ಸಂಪರ್ಕ, ಪ್ರತಿಭೆ ಮತ್ತು ಭಾಷೆಗಳು ತಂತ್ರಕ್ಷಾನ ಕೌಶಲ್ಯತೆ ಇಲ್ಲಿ ಬಹಳ ಸುಲಭವಾಗಿ ಲಭ್ಯವಾಗುತ್ತದೆ ಕರ್ನಾಟಕದಲ್ಲಿ  ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಸುಮಾರು 20-22 ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ, ತಮ್ಮ ವಯಕ್ತಿಕ ಸೇನೆಯನ್ನು ಬಳಸಿಕೊಳ್ಳುವ ಅಮಿತ್ ಶಾ ಪ್ರಚಾರ ತಂತ್ರಗಾರಿಕೆ ರೂಪಿಸಲು ಬೆಂಗಳೂರನ್ನು ದಕ್ಷಿಣ ಭಾರತದ ಪ್ರಧಾನ ಕೇಂದ್ರವಾಗಿರಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com