ಲೋಕಸಭೆ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಇದ್ದರೇ 11 ಸೀಟು; ಬಿದ್ದು ಹೋದರೆ 22 ಖಚಿತ: ಬಿಜೆಪಿ

ನವೆಂಬರ್ ವರೆಗೂ ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಸಮಯ ನೀಡಿದ್ದಾರಂತೆ, ನವೆಂಬರ್ ವರೆಗೂ.
ಕುಮಾರ ಸ್ವಾಮಿ ಮತ್ತು ಪರಮೇಶ್ವರ್
ಕುಮಾರ ಸ್ವಾಮಿ ಮತ್ತು ಪರಮೇಶ್ವರ್
ಬೆಂಗಳೂರು: ನಮ್ಮ ಎಲ್ಲಾ 80 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು  ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಜೋಕ್ ಮಾಡಿದ್ದರು. ಇನ್ನೂ ಕೂಡ ಬಿಜೆಪಿಯವರು ಕಾಂಗ್ರೆಸ್ ನ ಕೆಲ ಶಾಸಕರ ಜೊತೆ ಸಂಪರ್ಕವಿಟ್ಟುಕೊಂಡು ಅವರನ್ನು ಓಲೈಸುವ ಪ್ರಯತ್ನ ಮಾಡುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.
ವಿಧಾನಸಭೆ ಚುನಾವಣೆ ನಡೆದು ಮೂರು ತಿಂಗಳು ಕಳೆದರೂ ಬಿಜೆಪಿ ಇನ್ನೂ ಕಾಂಗ್ರೆಸ್ ಶಾಸಕರ ಓಲೈಕೆಯಲ್ಲಿ ತೊಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ, ಆದರೆ ನಾವು ಶಾಸಕರನ್ನು ಓಲೈಸುವ ಅಗತ್ಯವಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಸರ್ಕಾರ ಬೀಳಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಿಸಿದ್ದಾರೆ.
ನವೆಂಬರ್ ವರೆಗೂ ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ  ಸಮಯ ನೀಡಿದ್ದಾರಂತೆ, ನವೆಂಬರ್ ವರೆಗೂ ಮಾತ್ರ ಕಾಂಗ್ರೆಸ್ ಶಾಸಕರನ್ನು ಕರೆತರಲು ಪ್ರಯತ್ನಿಸಬೇಕು, ಅದಾದ ನಂತರ ಪೂರ್ಣ ಗಮನವನ್ನು ಲೋಕಸಭೆ ಚುನಾವಣೆಗೆ ಮೀಸಲಿಡಬೇಕು ಎಂದು ಹೈಕಮಾಂಡ್ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಒಂದು ವೇಳೆ ನವೆಂಬರ್ ವರೆಗೂ ರಾಜ್ಯ ಸಮ್ಮಿಶ್ರ ಸರ್ಕಾರ ಇದ್ದರೆ ಕಾಂಗ್ರೆಸ್ ಶಾಸಕರನ್ನು ಕರೆ ತರವ ಪ್ರಯತ್ನವನ್ನು ನಿಲ್ಲಿಸಿ ಲೋಕಸಭೆ ಚುನಾವಣೆಗೆ ಎಲ್ಲಾ  ತಂತ್ರಗಳನ್ನು ಅನುಸರಿಸಲು ತಿಳಿಸಿದೆ.ಈ ಸಮ್ಮಿಶ್ರ ಸರ್ಕಾರವನ್ನು ಮುಂದುವರಿಯಲು ಬಿಟ್ಟರೇ ನಮಗೆ ಹೆಚ್ಚು ಅಪಾಯ ಎಂದು ಬಿಜೆಪಿ ಭಾವಿಸಿದೆ.
ಲೋಕಸಭೆ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಇದ್ದರೇ ನಾವು ಕೇವಲ 11 ಸೀಟುಗಳನ್ನು  ಮಾತ್ರ ಪಡೆಯಲು ಸಾಧ್ಯ, ಒಂದು ವೇಳೆ ಸರ್ಕಾರ ಬಿದ್ದು ಹೋದರೇ ನಾವು20-22 ಸೀಟುಗಳಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ನ ಕೆಲ ಶಾಸಕರು ಬಿಜೆಪಿ ಮುಖಂಡರೊಂದಿಗೆ ಸಂಪರ್ತ ಇರಿಸಿಕೊಂಡಿದ್ದಾರೆ. ಇವರೆಲ್ಲಾ ಸಂಪುಟ ವಿಸ್ತರಣೆಗಾಗಿ ಕಾಯುತ್ತಿದ್ದಾರೆ. ಹಲವು ಶಾಸಕರಪ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಒಂದು ವೇಳೆ ಸಂಪುಟದಲ್ಲಿ ಸ್ಥಾನ ಸಿಗದಿದ್ದರೇ ಆಗ ಬಿಜೆಪಿ ಸೇರುವ ಒಲವು ತೋರಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ಕರೆತರುವ ಅಗತ್ಯವಿಲ್ಲ ,ಏಕೆಂದರೇ ಕಾಂಗ್ರೆಸ್ ಶಾಸಕರೇ ಸರ್ಕಾರ ಪತನಗೊಳಿಸುತ್ತಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com