ಭವಾನಿ ಮೊಹ್ರೆ ಹಾಕಿದ್ದ ಪೋಸ್ಟ್
ಭವಾನಿ ಮೊಹ್ರೆ ಹಾಕಿದ್ದ ಪೋಸ್ಟ್

ಕಾಮುಕ ಶಾಸಕನ ಕರ್ಮಕಾಂಡ: ಈಶ್ವರಪ್ಪ ವಿರುದ್ಧ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷನ ಪೋಸ್ಟ್, ವೈರಲ್ !

ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭವಾನಿ ಮೊಹ್ರೆ ಎಂಬುವರು ಫೇಸ್ ಬುಕ್ ನಲ್ಲಿ ಹಾಕಿರುವ ಸ್ಟೇಟಸ್ ...
Published on
ಶಿವಮೊಗ್ಗ: ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭವಾನಿ ಮೊಹ್ರೆ ಎಂಬುವರು ಫೇಸ್ ಬುಕ್ ನಲ್ಲಿ ಹಾಕಿರುವ ಸ್ಟೇಟಸ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಶಾಸಕ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಮನೆ ಮುಂದೆ ಅವರ ಕಾಮಕಾಂಡ ಬಯಲು ಮಾಡಲಾಗುವುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸುವ ಮುನ್ನಾ ದಿನ ಭವಾನಿ ಮೊಹ್ರೆ ಈ ಪೋಸ್ಟ್ ಹಾಕಿದ್ದಾರೆ. ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ದ ಕಾಮಕಾಂಡದ ಆರೋಪ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರವಾಗಿ ಇಬ್ಬರ ಮಧ್ಯೆ ವಾದ-ವಿವಾದ ನಡೆದಿದೆ. ಶಿವಮೊಗ್ಗದ ವಾರ್ಡ್ 18ರಲ್ಲಿ ಸ್ಪರ್ಧಿಸಲು ಭವಾನಿ ಆಕಾಂಕ್ಷಿಯಾಗಿದ್ದರು. ಈ ವಿಷಯವಾಗಿ ನಡೆದ ವಾಗ್ಯುದ್ಧ ಇಷ್ಟೆಲ್ಲಾ ರಂಪಾಟಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. 
ತಮ್ಮ ಬಳಿ ಈಶ್ವರಪ್ಪ ಭಾಗಿಯಾಗಿರುವ ಸೆಕ್ಸ್ ಕಾಮಕಾಂಡದ ಮಾಹಿತಿಯಿದ್ದು ಅದನ್ನು ಶೀಘ್ರವೇ ಅವರ ಮನೆ ಮುಂದೆ ಬಯಲು ಮಾಡುವುದಾಗಿ ಪೋಸ್ಟ್ ಹಾಕಿದ್ದರು. 
ಈ ಪೋಸ್ಟ್ ವೈರಲ್ ಆದ ನಂತರ ಭವಾನಿ ಮೊಹ್ರೆ ಅವರನ್ನು ಸಂಪರ್ಕಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರೆ, ಆದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ, ಖಾಸಗಿಯಾಗಿ ಆತನ ಜೊತೆ ಮಾತನಾಡಿ, ಚರ್ಚಿಚಿ ವಿವಾದಾತ್ಮಕ ಪೋಸ್ಟ್ ಡಿಲೀಟ್ ಮಾಡಿಸಲಾಗಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್ ಸಿ ರುದ್ರಗೌಡ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವುದು ದೊಡ್ಡ ಮಿಸ್ಟೇಕ್,  ಈ ಪೋಸ್ಟ್ ಭವಾನಿ ಹಾಕಿದ್ದಾರೋ ಅಥವಾ ಅವರ ಹೆಸರಲ್ಲಿ ಬೇರೆಯವರು ಹಾಕಿದ್ದಾರೋ  ಎಂಬ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ, ಕೂಡಲೇ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com