ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

'ವಿರೋಧ ಪಕ್ಷಗಳ ಸಂಯುಕ್ತ ರಂಗ' ಪ್ರಧಾನಮಂತ್ರಿ ಅಭ್ಯರ್ಥಿಯನ್ನೇ ಹೊಂದಿಲ್ಲ: ಸಂದರ್ಶನದಲ್ಲಿ ಬಿ.ಎಸ್. ಯಡಿಯೂರಪ್ಪ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಷಡ್ಯಂತ್ರಗಳನ್ನು ನಡೆಯುತ್ತಿರುವ ವಿರೋಧ ಪಕ್ಷಗಳ ಸಂಯುಕ್ತ ರಂಗ ಪ್ರಧಾನಮಂತ್ರಿ ಅಭ್ಯರ್ಥಿಯನ್ನೇ ಹೊಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ...
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಷಡ್ಯಂತ್ರಗಳನ್ನು ನಡೆಯುತ್ತಿರುವ ವಿರೋಧ ಪಕ್ಷಗಳ ಸಂಯುಕ್ತ ರಂಗ ಪ್ರಧಾನಮಂತ್ರಿ ಅಭ್ಯರ್ಥಿಯನ್ನೇ ಹೊಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. 
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡರೂ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಸೋಲಿಸಿಯೇ ತೀರುತ್ತೇವೆಂದು ಹೇಳುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರು, ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 
ಬಹುಮತವಿಲ್ಲದಿದ್ದರೂ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ನಿರ್ಧಾರ ತಪ್ಪೆಂದು ಎನಿಸುವುದಿಲ್ಲವೇ?
ಏಕೈಕ ಅತೀದೊಡ್ಡ ಪಕ್ಷವೊಂದನ್ನು ಸರ್ಕಾರ ರಚನೆ ಮಾಡಲು ಅನುಮತಿ ನೀಡುವುದು ನೈಸರ್ಗಿಕ. 104 ಶಾಸಕರನ್ನು ನಾವು ಹೊಂದಿದ್ದೇವೆ. ಹೀಗಾಗಿ ನಾವು ರಾಜ್ಯಪಾಲರ ಬಳಿ ಹೋಗಿದ್ದೆವು. ರಾಜ್ಯಪಾಲರು ನಮಗೆ ಅವಕಾಶ ನೀಡಿದ್ದರು. ಇದೇ ಮೊದಲ ಬಾರಿಗೆ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸಿತ್ತು. ರಾತ್ರೋರಾತ್ರಿ ಪ್ರಕರಣ ಕುರಿತು ವಿಚಾರಣೆ ನಡೆಸಿ 24 ಗಂಟೆಗಳೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿತು. ಈ ಹಿಂದೆಂದೂ ಈ ರೀತಿ ಆಗಿರಲಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿದ್ದ ಬಹುತೇಕ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲು ಸಿದ್ಧರಿದ್ದರು. ಆದರೆ, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಅವರಿಗೆ ಸಮಯ ದೊರಕಿಲ್ಲ. ಪರಿಸ್ಥಿತಿಗಳು ಬದಲಾದ ಹಿನ್ನಲೆಯಲ್ಲಿ ಬಹುಮತ ಸಾಬೀತಿಗೆ ನಾನೇ ಮುಂದಾಗಲಿಲ್ಲ. ಹೀಗಾಗಿ ಯಾವುದೇ ಆಯ್ಕೆಗಳಿಲ್ಲದೆ ರಾಜೀನಾಮೆ ನೀಡಬೇಕಾಯಿತು. 
ಆಡಳಿತಾರೂಢ ಮೈತ್ರಿ ಸರ್ಕಾರವನ್ನು ಉರುಳಿಸಿ ನಿಜವಾಗಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದೇ? 
ರಾಜಕೀಯ ಪಕ್ಷವಾಗಿ ಮತ್ತೊಂದು ಸರ್ಕಾರವನ್ನು ಉರುಳಿಸುವ ಯತ್ನಗಳನ್ನು ನಾವು ಮಾಡುವುದಿಲ್ಲ. ಪ್ರಸ್ತುತದ ಸರ್ಕಾರದಲ್ಲಿ ಪವಿತ್ರತೆಯಿಲ್ಲ. ಮೈತ್ರಿ ಸರ್ಕಾರವನ್ನು ಜನರು ಬಯಸುತ್ತಿಲ್ಲ. ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕೆಂದು ಜನರು ಬಯಸುತ್ತಿದ್ದಾರೆ. ಸರ್ಕಾರದಲ್ಲಿರುವ ಭಿನ್ನತೆಗಳು ಜನರನ್ನು ಗೊಂದಲಕ್ಕೀಡಾಗುವಂತೆ ಮಾಡುತ್ತಿದೆ. ಇದೇ ರೀತಿಯ ಫಲಿತಾಂಶವನ್ನು ಸರ್ಕಾರ ಪ್ರದರ್ಶಿಸುತ್ತಿದ್ದರೆ, ಅದಕ್ಕೆ ಬಿಜೆಪಿ ಜವಾಬ್ದಾರಿಯಲ್ಲ. ಯಾವುದೇ ಶಾಸಕರೊಂದಿಗೂ ಬಿಜೆಪಿ ಮಾತುಕತೆ ನಡೆಯುವ ಪ್ರಶ್ನೆಯೇ ಇಲ್ಲ. 
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಡವಿದ್ದೆಲ್ಲಿ?
ಮತದಾನ ಎಣಿಕೆ ವೇಳೆ ಬಿಜೆಪಿ ಬಹುಮತದತ್ತ ಇತ್ತು. 128 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಕೆಲವು ಅಂತರಗಳಲ್ಲಿ 28 ಸೀಟುಗಳನ್ನು ಕಳೆದುಕೊಂಡೆವು. 6-8 ಸೀಟುಗಳನ್ನು ಕೇವಲ ನೂರು ಮತಗಳ ಅಂತರದಲ್ಲಿ ಕಳೆದುಕೊಂಡಿದ್ದೆವು. ಹೀಗಾಗಿ ನಮಗೆ ಹಿನ್ನಡೆಯುಂಟಾಗಿತ್ತು. 
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ಬಿಜೆಪಿ ಇಬ್ಭಾಗ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕವೆಂದು ಪ್ರತ್ಯೇಕವಾಗಿ ಎಂದಿಗೂ ನಾನು ಮಾತನಾಡಿಲ್ಲ. ಬೇಜವಾಬ್ದಾರಿತನದ ಹೇಳಿಕೆಗಳ ಮೂಲಕ ಕುಮಾರಸ್ವಾಮಿಯವರೇ ವಿವಾದವನ್ನು ಹುಟ್ಟುಹಾಕಿದ್ದರು. ಉತ್ತರ ಕರ್ನಾಟಕ ಭಾಗದ ಜನರು ಕುಮಾರಸ್ವಾಮಿಯವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕುಮಾರಸ್ವಾಮಿಯವರೇ ಜವಾಬ್ದಾರಿ ಹೊತ್ತಿಕೊಳ್ಳಬೇಕು. ಅಖಂಡ ಕರ್ನಾಟಕದ ಕನಸನ್ನು ನಾವು ಕಾಣುತ್ತಿದ್ದೇವೆ. ಇಂತಹ ಒಡಕುಗಳನ್ನು ಯಾವುದೇ ಪಕ್ಷ ಬಯಸುವುದಿಲ್ಲ. ಇಂತಹ ಸಣ್ಣತನಕ್ಕೆ ನಾವು ಇಳಿಯುವುದಿಲ್ಲ 
ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಸಹಾಯವನ್ನು ಬಿಜೆಪಿ ಕೇಳುತ್ತಿಲ್ಲ ಎಂದು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಆರೋಪ ಮಾಡುತ್ತಿದೆ. ಯಾವುದೇ ರಾಜ್ಯದ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆಯೇ? 
ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಆ ರಾಜ್ಯದಲ್ಲಿಯೂ ಕೂಡ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ಇತರೆ ರಾಜ್ಯಗಳಿಗೆ ಸಹಾಯ ಮಾಡಿ, ಕರ್ನಾಟಕಕ್ಕೆ ಮಾತ್ರವೇ ತಿರಸ್ಕರಿಸಿದ್ದರೆ ಆ ಆರೋಪಗಳನ್ನು ಒಪ್ಪಿಕೊಳ್ಳಬಹುದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬೆರಳು ತೋರಿಸುವಲ್ಲಿ ಅವರು ಅಸಮರ್ಥರಾಗಿದ್ದಾರೆ. 
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುಂದಿರುವ ಸವಾಲುಗಳೇನು? 
ಅಭಿವೃದ್ಧಿ ಕಾರ್ಯಗಳನ್ನು ಚಾಲನೆಗೆ ತಂದಿರುವುದು ಈ ಬಾರಿಯ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಅದು ಕವಚವಾಗಿ ನಿರ್ಮಾಣಗೊಳ್ಳಲಿದೆ. ವಿರೋಧ ಪಕ್ಷಗಳ ಸಂಯುಕ್ತ ರಂಗದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯೇ ಇಲ್ಲ. ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ನಿಲ್ಲಿಸುತ್ತಾರೆ? ರಾಹುಲ್ ಗಾಂಧಿ? ಅಥವಾ ಮಮತಾ ಬ್ಯಾನರ್ಜಿ? ಕರ್ನಾಟಕ ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿಫಲತೆಗಳೇ ನಮಗೆ ಬಲವಾಗಲಿದೆ. ಮಾತು ಉಳಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಸಾಲ ಮನ್ನಾ ಕುರಿತಂತೆ ಅವರಲ್ಲಿಯೇ ಗೊಂದಲಗಳಿವೆ. ಸರ್ಕಾರ ಹಾಗೂ ಸರ್ಕಾರದ ಸಚಿವರ ವಿರುದ್ಧ ಜನರು ಕೆಂಡಾಮಂಡಲಗೊಂಡಿದ್ದಾರೆ. 3-4 ಜಿಲ್ಲೆಗಳಲ್ಲಿ ಮೈತ್ರಿ ಸರ್ಕಾರದಿಂದ ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬಂದಿಲ್ಲ. 
ವಿರೋಧ ಪಕ್ಷಗಳ ಸಂಯುಕ್ತ ರಂಗಗಳ ಕುರಿತು ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲವೇ? 
ಎಲ್ಲಿದೆ ಸಂಯುಕ್ತ ರಂಗ? ಅವಿಶ್ವಾಸ ನಿರ್ಣಯ ಮಂಡನೆ ಅಥವಾ ರಾಜ್ಯಸಭೆ ಉಪ ಸಭಾಪತಿಗಳ ಚುನಾವಣೆಯಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ರಾಜ್ಯಸಭೆಯಲ್ಲಿ ನಮಗೆ ಬಹುಮತವಿಲ್ಲದೇ ಇದ್ದರೂ ನಾವು ಗೆಲವು ಸಾಧಿಸಿದೆವು. ಮೋದಿಯವರ ಪ್ರಾಮುಖ್ಯತೆಯನ್ನು ಜನರು ಅರ್ಥ ಮಾಡಿಕೊಂಡಿದ್ದು, ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿಯೂ ಅದೇ ಆಗುತ್ತದೆ. ಪ್ರಧಾನಮಂತ್ರಿ ಅಭ್ಯರ್ಥಿಯಂದು ಹೇಳಿಕೊಳ್ಳಲು ವಿರೋಧ ಪಕ್ಷಗಳಲ್ಲಿ ಯಾವುದೇ ನಾಯಕರಿಲ್ಲ. ಅವರು ಎಷ್ಟರ ಮಟ್ಟಿಗೆ ಗೊಂದಲದಲ್ಲಿದ್ದಾರೆಂಬುದಕ್ಕೆ ಇದೇ ಸಾಕ್ಷಿ.
ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಗುರಿ ಏನು? 
ಮೋದಿ ಸರ್ಕಾರದ ಸಾಧನೆಗಳು, ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿ ನಮ್ಮ ಪಾತ್ರ, ಅಧಿಕಾರದಲ್ಲಿದ್ದಾಗ ನಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೊಳ್ಳದಿರುವುದಕ್ಕೆ ಜನರಲ್ಲಿರುವ ಪಶ್ಚಾತ್ತಾಪಗಳು ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುವುದಕ್ಕೆ ಸಹಾಯ ಮಾಡುತ್ತದೆ. ಇದೀಗ ನಮ್ಮ ಬಳಿ 17 ಸಂಸದರಿದ್ದಾರೆ. ಈ ಬಾರಿಯ ನಮ್ಮ ಗುರಿ 22-23 ಸೀಟುಗಳು. 23 ಸೀಟುಗಳಲ್ಲಿ ಗೆಲವು ಸಾಧಿಸುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿಸುವುದು ನನ್ನ ಕೊಡುಗೆ. 
ನಗರ ಚುನಾವಣೆ ಬಗ್ಗೆ ನಿಮ್ಮ ದೃಷ್ಟಿ?
ಈಗಾಗಲೇ 10 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಪಕ್ಷದ ಕಾರ್ಯಕರ್ತರೊಂದಿಗಿನ ನನ್ನ ಮಾತುಕತೆ ಹೀಗೆಯೇ ಮುಂದುವರೆಯಲಿದೆ. ಚುನಾವಣೆಯಲ್ಲಿ ಶೇ.60 ರಷ್ಟು ಗೆಲುವು ಸಾಧಿಸುವ ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಕಾರ್ಯಕರ್ತನ್ನು ಚುರುಕುಗೊಳಿಸುವುದರಲ್ಲಿ ಕಾರ್ಯನಿರತನಾಗಿದ್ದೇನೆ. ಸರ್ಕಾರ ರಚನೆ ಮಾಡುವಲ್ಲಿ ವಿಫಲರಾದ ಅಸಮಾಧಾನ ಈಗಲೂ ಇದೆ. ಆದರೂ ಉತ್ಸಾಹ ಕುಗ್ಗಿಲ್ಲ. 
ವಿರೋಧ ಪಕ್ಷದ ನಾಯಕರನಾಗಿ ಸಮ್ಮಿ ಸರ್ಕಾರವನ್ನು ಹೇಗೆ ಮೌಲ್ಯಮಾಪನ ಮಾಡುವಿರಿ? 
ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕರಾಗಲೀ, ಒಬ್ಬ ಸಚಿವರಾಗಲೀ ಮಾತನಾಡುತ್ತಿಲ್ಲ. ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿಯವರು 3 ತಿಂಗಳಿನಿಂದ ಮಾತನಾಡುತ್ತಿದ್ದಾರೆ. ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಶಾಸಕರಿಗೆ ರೂ.2 ಕೋಟಿ ಎಲ್ಎಡಿ ಅನುದಾನಗಳು ದೊರಕಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಣವಿಲ್ಲ. ಸಹಕಾರದ ಕೊರತೆ ಎದ್ದು ಕಾಣುತ್ತಿದೆ. ಬಾದಾಮಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವಂತೆ ಸಿದ್ದರಾಮಯ್ಯ 3-4 ಬಾರಿ ಪತ್ರ ಬರೆದಿದ್ದಾರೆ. 
ಏರೋ ಇಂಡಿಯಾ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಉಳಿಸಿಕೊಳ್ಳಲು ಯಡಿಯೂರಪ್ಪ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಹೇಗೆ ಪ್ರತಿಕ್ರಿಯೆ ನೀಡುವಿರಿ? 
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಆಗಮಿಸಿದ್ದಾಗ, ಏರೋ ಇಂಡಿಯಾ ಕಾರ್ಯಕ್ರಮ ತಮ್ಮ ರಾಜ್ಯಕ್ಕೆ ಸ್ಥಳಾಂತರ ಮಾಡುವಂತೆ ಉತ್ತರ ಪ್ರದೇಶ ಸರ್ಕಾರ ಕೇಳುತ್ತಿದೆ. ಆದರೆ, ಈ ಬಗ್ಗೆ ಈವರೆಗೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ನಮ್ಮ ಸಚಿವರೂ ಕೂಡ ರಕ್ಷಣಾ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಏರೋ ಇಂಡಿಯಾ ಸ್ಥಳಾಂತರಗೊಳ್ಳುತ್ತಿಲ್ಲ ಎಂಬು ನಾವೂ ಕೂಡ ದೃಢೀಕರಿಸಿದ್ದೇವೆ. ಈಗಲೂ ಆ ಭರವಸೆಯನ್ನೇ ನೀಡುತ್ತಿದ್ದೇವೆ. ಏರೋ ಇಂಡಿಯಾ ಸ್ಥಳಾಂತರಗೊಳ್ಳುವುದಿಲ್ಲ. ನಿರ್ಧಾರಗಳನ್ನೇ ಕೈಗೊಳ್ಳದೇ ಇದ್ದರೂ ಈ ವಿಚಾರವನ್ನು ರಾಜಕೀಯ ಮಾಡುವುದರಲ್ಲಿ ಅರ್ಥವೇನು? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com