ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಸಚಿವ ರೇವಣ್ಣ: ಸಹೋದರನ ಬೆನ್ನಿಗೆ ನಿಂತ ಹೆಚ್.ಡಿ. ಕುಮಾರಸ್ವಾಮಿ

ನಿರಾಶ್ರಿತರ ಕೇಂದ್ರಗಳಲ್ಲಿ ನೆರೆಪೀಡಿತರಿಗೆ ಸಚಿವ ರೇವಣ್ಣ ಅವರು ಬಿಸ್ಕೆಟ್ ಎಸೆದಿರುವ ವಿಡಿಯೋ ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿರುವ ಹಿನ್ನಲೆಯಲ್ಲಿ ಸಹೋದರನನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಮರ್ಥಿಸಿಕೊಂಡಿದ್ದಾರೆ...
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣ
ಬೆಂಗಳೂರು: ನಿರಾಶ್ರಿತರ ಕೇಂದ್ರಗಳಲ್ಲಿ ನೆರೆಪೀಡಿತರಿಗೆ ಸಚಿವ ರೇವಣ್ಣ ಅವರು ಬಿಸ್ಕೆಟ್ ಎಸೆದಿರುವ ವಿಡಿಯೋ ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿರುವ ಹಿನ್ನಲೆಯಲ್ಲಿ ಸಹೋದರನನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಮರ್ಥಿಸಿಕೊಂಡಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನೆರೆಪೀಡಿತರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಸಂದರ್ಭದಲ್ಲಿ ಸಚಿವ ರೇವಣ್ಣ ನಡವಳಿಕೆ ಬಗ್ಗೆ ಅನ್ಯಥಾ ಭವಿಸಬಾರದು ಎಂದು ಹೇಳಿದ್ದಾರೆ. 
ನೆರೆ ಸಂತ್ರಸ್ತರಿಗೆ 25 ಸಾವಿರ ಲೀಟರ್ ಹಾಲು ಹಾಗೂ 200 ಕ್ವಿಂಟರ್ ಅಕ್ಕಿಯನ್ನು ರೇವಣ್ಣ ಅವರು ಕಳುಹಿಸಿದ್ದಾರೆ. ಆಹಾರ ಪೊಟ್ಟಣ ವಿತರಿಸುವ ಕೆಲಸವನ್ನು ಸಹಾಯಕರಿಗೆ ನೀಡಿದ್ದರೆ ಅವರು ಅನಗತ್ಯ ವಿವಾದಕ್ಕೆ ಸಿಲುಕ್ಕುತ್ತಿರಲಿಲ್ಲವೇನೋ. ಆಹಾರ ಪೊಟ್ಟಣವನ್ನು ಯಾರು ಎಸೆದಿದ್ದಾರೆ ಎಂದು ಮೊದಲು ಗಮನಹರಿಸಲಿ. ಈ ಕ್ಷುಲ್ಲಕ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವವರು ಎಷ್ಟು ಮಂದಿ ನೆರೆಪೀಡಿತ ಪ್ರದೇಶಕ್ಕೆ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 
ಇದೇ ವೇಳೆ ವೈಮಾನಿಕ ಸಮೀಕ್ಷೆ ವೇಳೆ ಸುದ್ದಿ ಪತ್ರಿಕೆ ಓದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಹೆಲಿಕಾಪ್ಟರ್ ಪ್ರವಾಹ ಪೀಡಿತ ಪ್ರದೇಶಕ್ಕೆ ಇನ್ನೂ ತಲುಪಿರಲಿಲ್ಲ. ಈ ವೇಳೆ ಪತ್ರಿಕೆಯನ್ನು ಓದಲಾಗಿತ್ತು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕಾವೇರಿ ನದಿ ಪ್ರವಾಹದಿಂದಾಗಿ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ತುಂಬಿದ್ದು, ಕೆಲ ಮನೆಗಳು ಕುಸಿದುಬಿದ್ದಿವೆ. ಹೀಗಾಗಿ ಜಿಲ್ಲಾಡಳಿತದಿಂದ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ನೂರಾರು ಮಂದಿ ಅಲ್ಲಿ ರಕ್ಷಣೆ ಪಡೆದಿದ್ದಾರೆ. 
ಶನಿವಾರ ಈ ಪುನರ್ವಸತಿ ಕೇಂದ್ರಕ್ಕೆ ಸಚಿವ ರೇವಣ್ಣ ಅವರು ಶಾಸಕ ಎ.ಟಿ.ರಾಮಸ್ವಾಮಿ ತ್ತು ಬೆಂಬಲಿಗರು ಜೊತೆ ಭೇಟಿ ನೀಡಿದ್ದರು. 
ಈ ಸಂದರ್ಭದಲ್ಲಿ ರೇವಣ್ಣ ಅವರು ಬ್ಯಾಕ್ಸ್ ವೊಂದರಿಂದ ಒಂದೊಂದೇ ಬಿಸ್ಕೆಟ್ ಪ್ಯಾಕ್ ತೆಗೆದು ಸಂತ್ರಸ್ತರ ಕೈಗ ಎಸೆದಿದ್ದರು. ಈ ವೇಳೆ ಅವರ ಜೊತೆಗೆ ಬೆಂಬಲಿಗರೂ ಇದ್ದರು. 
ರೇವಣ್ಣ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರಿಗೆ ಬಿಸ್ಕೆಟ್ ಎಸೆಯುತ್ತಿದ್ದ ದೃಶ್ಯವಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮನೆ ಕಳೆದುಕೊಂಡು ಬೀದಿಗೆ ಬಂದವರ ಜೊತೆಗೆ ಸಚಿವರು ಈ ರೀತಿ ವರ್ತಿಸಿದ್ದು ಅಕ್ಷ್ಯಮ್ಯ, ಅಮಾನವೀಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com