ಸಾಲಮನ್ನಾ ಐತಿಹಾಸಿಕ ಪ್ರಯತ್ನ; ಸಮ್ಮಿಶ್ರ ಸರ್ಕಾರ ಸೇಫ್: ಪರಮೇಶ್ವರ್

: ಕಾಂಗ್ರೆಸ್ -ಜೆಡಿಎಸ್ ಸಮ್ಮಿಸ್ರ ಸರ್ಕಾರ ಸುಭದ್ರವಾಗಿದ್ದು, ಸರ್ಕಾರ ಉರುಳಿಸುವ ಯಾವುದೇ ಬೆದರಿಕೆಗಳಿಲ್ಲ ಎಂದು ಡಿಸಿಎಂ ಡಿ ಪರಮೇಶ್ವರ್ ಸ್ವಷ್ಟ
ಜಿ. ಪರಮೇಶ್ವರ್
ಜಿ. ಪರಮೇಶ್ವರ್
ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಸಮ್ಮಿಸ್ರ ಸರ್ಕಾರ ಸುಭದ್ರವಾಗಿದ್ದು, ಸರ್ಕಾರ ಉರುಳಿಸುವ ಯಾವುದೇ ಬೆದರಿಕೆಗಳಿಲ್ಲ ಎಂದು ಡಿಸಿಎಂ ಡಿ ಪರಮೇಶ್ವರ್ ಸ್ವಷ್ಟ ಪಡಿಸಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ದಿನ ಅಥವಾ ತಿಂಗಳೊಳಗೆ ಸರ್ಕಾರ ಬೀಳುತ್ತದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರ ಹೇಳಿಕೆಗೆ ಪ್ರತಿಕ್ರಿಸಿದ ಪರಮೇಶ್ವರ್  ನಾವು ಸರ್ಕಾರದ ಪೂರ್ಣಾವಧಿ ಪೂರೈಸುತ್ತೇವೆ,  ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಸಾಲ ಮನ್ನಾ ಒಂದು ಐತಿಹಾಸಿಕ ಪ್ರಯತ್ನವಾಗಿದೆ, ಪ್ರವಾಹ ಪೀಡಿತ ಕೊಡಗಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ, ಹಿಂದಿನ ಸರ್ಕಾರದ ಹಲವು ಯೋಜನೆಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸುತ್ತಿದೆ.  ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂದು ತಿಳಿಸಿದ್ದಾರೆ.
 ರಾಷ್ಟ್ರೀಕೃತ ಬ್ಯಾಂಕ್ ಗಳ 31 ಸಾವಿರ ಕೋಟಿ ರು ಸಾಲಮನ್ನಾ ಗೆ ಪ್ರಯತ್ನಿಸುತ್ತಿರುವುದು ಐತಿಹಾಸಿಕ ವಿಷ್ಯ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com