ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ
ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ

ನೋಟು ನಿಷೇಧ, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಪ್ರಮಾದ ಹಾಗೂ ಲೂಟಿ: ಕಾಂಗ್ರೆಸ್

ನೋಟು ನಿಷೇಧ ಹಾಗೂ ರಫೇಲ್ ಒಪ್ಪಂದ ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರು ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ಗುರುವಾರ...
ಬೆಂಗಳೂರು: ನೋಟು ನಿಷೇಧ ಹಾಗೂ ರಫೇಲ್ ಒಪ್ಪಂದ ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರು ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಸುದ್ದಿಗಾರರೊಂದಿಕೆ ಮಾತನಾಡಿದ ಅವರು, ನೋಟು ನಿಷೇಧ ಅತೀ ದೊಡ್ಡ ಪ್ರಮಾದವಾಗಿದ್ದು, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಲೂಟಿಯಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಳ್ಳುತ್ತಿರುವ ಮೋದಿ ಸರ್ಕಾರ ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ ತನಿಖೆ ನಡೆಸಲಿ. ಉದ್ಯಮಿ ಅನಿಲ್ ಅಂಬಾನಿ ಮೋದಿ ಹಾಗೂ ವಿಮಾನಯಾನ ನಡುವಿನ ದಲ್ಲಾಳಿಯಾಗಿದ್ದಾರೆಂದು ಹೇಳಿದ್ದಾರೆ. 
ಅಂಬಾನಿಗೆ ಲಾಭ ಮಾಡುವ ಸಲುವಾಗಿ ಹೆಚ್ಎಎಲ್ ನಿಂದ 10,000 ಉದ್ಯೋಗಗಳನ್ನು ಕೇಂದ್ರ ಕಸಿದುಕೊಂಡಿದೆ. ಅನಿಲ್ ಅಂಬಾನಿ ದಲ್ಲಾಳಿ ಇದ್ದಂತೆ. ನೋಟು ನಿಷೇಧ ಸರ್ಕಾರದ ಮಾಡಿದ ದೊಡ್ಡ ಪ್ರಮಾದ. ರಫೇಲ್ ಒಪ್ಪಂದ ಅತೀ ದೊಡ್ಡ ಲೂಟಿಯಾಗಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾನ್ ಕುರಿತಂತೆ ಮಾತನಾಡಿದ ಅವರು, ವಿಮಾನಗಳನ್ನು ಖರೀದಿ ಮಾಡಿದ್ದರ ಕುರಿತಂತೆ ಅವುಗಳ ಬೆಲೆಗಳನ್ನು ಬಹಿರಂಗಪಡಿಸಲು ಸಚಿವೆ ಸಿದ್ಧರಾಗಿದ್ದಾರೆ. ಅದರೆ, ಪ್ರಧಾನಮಂತ್ರಿ ಮೋದಿ ಬಿಡುತ್ತಿಲ್ಲ. ಮೋದಿಯವರು ಸರ್ಕಾರ ಹಾಗೂ ಸಂವಿಧಾನಕ್ಕಿಂತಲೂ ತಾವೇ ದೊಡ್ಡವರೆಂದು ನಂಬಿದ್ದಾರೆ. ರಾಹುಲ್ ಗಾಂಧಿಯವರು ಯಾವುದೇ ಪ್ರಶ್ನೆ ಎತ್ತಿದರೂ ಅದಕ್ಕೆ ಉತ್ತರ ನೀಡುವುದಿಲ್ಲ ಎಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com