ಕೃಷಿ ಸಚಿವ ಶಿವಶಂಕರ ರೆಡ್ಡಿ
ರಾಜಕೀಯ
ಬಿಜೆಪಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ, ಯಾರೂ ಆ ಪಕ್ಷದತ್ತ ತಿರುಗಿ ನೋಡುತ್ತಿಲ್ಲ: ಶಿವಶಂಕರ ರೆಡ್ಡಿ
ನಮ್ಮ ಬಂಡಾಯ ಶಾಸಕರಿಗೆ ಆಮಿಷವೊಡ್ಡುವ ಪ್ರಯತ್ನಗಳನ್ನು ಬಿಜೆಪಿ ಮಾಡಿದ್ದು, ಅದರಲ್ಲಿ ವಿಫಲಗೊಂಡಿದೆ. ಬಿಜೆಪಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದು, ಅದರತ್ತ ಇದೀಗ ಯಾರೂ ತಿರುಗಿ ನೋಡುತ್ತಿಲ್ಲ ಎಂದು...
ಹಗರಿಬೊಮ್ಮನಹಳ್ಳಿ: ನಮ್ಮ ಬಂಡಾಯ ಶಾಸಕರಿಗೆ ಆಮಿಷವೊಡ್ಡುವ ಪ್ರಯತ್ನಗಳನ್ನು ಬಿಜೆಪಿ ಮಾಡಿದ್ದು, ಅದರಲ್ಲಿ ವಿಫಲಗೊಂಡಿದೆ. ಬಿಜೆಪಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದು, ಅದರತ್ತ ಇದೀಗ ಯಾರೂ ತಿರುಗಿ ನೋಡುತ್ತಿಲ್ಲ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿಯವರು ಶನಿವಾರ ಹೇಳಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಕೃಷಿ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯ ಶಾಸಕರಿಗೆ ಆಮಿಷವೊಡ್ಡಲು ಯತ್ನ ನಡೆಸಿತ್ತು. ಆದರೆ, ದೇಶದಾದ್ಯಂತ ಬಿಜೆಪಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವುದರಿಂದ ಬಂಡಾಯ ಶಾಸಕರು ಇದೀಗ ಆ ಪಕ್ಷದತ್ತ ತಿರುಗಿ ನೋಡಲು ಹಿಂಜರಿಯುತ್ತಿದ್ದಾರೆಂದು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿಯೂ ಸೋಲು ಕಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಶಾಸಕರು ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯಕ್ ಅವರ ಹೆಸರು ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಪಟ್ಟಿಯಲ್ಲಿತ್ತು. ಆದರೆ, ಕೊನೆಯ ಸಮಯದಲ್ಲಿ ಹೆಸರನ್ನು ಕೈಬಿಡಲಾಗಿತ್ತು. ಮೈತ್ರಿ ಪಕ್ಷದ ಅಭ್ಯರ್ಥಿಗಳಾಗಲು ಶಸಾಕರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಸಚಿವ ಸ್ಥಾನಕ್ಕೆ ಅವರು ಅರ್ಹರಾಗಿದ್ದಾರೆ.
ಇಸ್ರೇಲ್ ಮಾದರಿಯ ಕೃಷಿ ಶೀಘ್ರದಲ್ಲಿಯೇ ವಾಸ್ತವಿಕತೆಗೆ ಬರಲಿದೆ. ಪೈಲೆಟ್ ಯೋಜನೆಗೆ ಬಳ್ಳಾರಿ ಹಾಗೂ ಇತರೆ ಜಿಲ್ಲೆಗಳು ಆಯ್ಕೆಗೊಂಡಿವೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ