ಸಂಪುಟ ವಿಸ್ತರಣೆ : ಸ್ವಲ್ಪ ದಿನಗಳ ಬಳಿಕ ಅತೃಪ್ತಿ ಶಮನಗೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು

ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕೆಲ ಹಿರಿಯ ಶಾಸಕರ ಅತೃಪ್ತಿ ಕೆಲ ದಿನಗಳ ಬಳಿಕ ಶಮನಗೊಳ್ಳಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಡಿ. ಕೆ. ಶಿವಕುಮಾರ್, ಎಚ್. ಡಿ. ರೇವಣ್ಣ
ಡಿ. ಕೆ. ಶಿವಕುಮಾರ್, ಎಚ್. ಡಿ. ರೇವಣ್ಣ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದೆ  ಅಸಮಾಧಾನಗೊಂಡಿರುವ  ಕೆಲ ಹಿರಿಯ ಶಾಸಕರ ಅತೃಪ್ತಿ  ಕೆಲ ದಿನಗಳ ಬಳಿಕ ಶಮನಗೊಳ್ಳಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಡಜನ್ ಗೂ ಹೆಚ್ಚಿನ ಮಂದಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ. ಎಲ್ಲರಿಗೂ ಸಚಿವ ಸ್ಥಾನ ನೀಡುವುದು ಕಷ್ಟವಾಗಿದ್ದರಿಂದ  9 ಸಂಪುಟ ಕಾರ್ಯದರ್ಶಿಗಳು ಹಾಗೂ ಮೂರು ವಿಶೇಷ ನೇಮಕಾತಿ ಜೊತೆಗೆ  19 ನಿಗಮ , ಮಂಡಳಿ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಸ್ವಲ್ಪ ಮಟ್ಟಿನ ಅತೃಪ್ತಿಯನ್ನು ಕಡಿಮೆಗೊಳಿಸಲಾಗಿದೆ.

80 ಕಾಂಗ್ರೆಸ್ ಶಾಸಕರ ಪೈಕಿ 48ಕ್ಕೂ ಹೆಚ್ಚು ಶಾಸಕರು ಸ್ಥಾನಮಾನ ದೊರೆತ ಖುಷಿಯಲ್ಲಿದ್ದಾರೆ. ಐವರು ವಿಧಾನಪರಿಷತ್ ಸದಸ್ಯರು ಕೂಡಾ ಪ್ರಮುಖ ಸ್ಥಾನ ಹೊಂದುವಲ್ಲಿ  ಯಶಸ್ವಿಯಾಗಿದ್ದಾರೆ.

ಪ್ರಾಂತೀಯ ಹಾಗೂ ಜಾತಿ ಸಮೀಕರಣದೊಂದಿಗೆ ಬಹಳ ಎಚ್ಚರಿಕೆಯಿಂದ  ಈ ಹುದ್ದೆಗಳಿಗೆ ನಾಯಕರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಪ್ರಭಾವಿ ನಾಯಕರಾದ ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಮತ್ತು ಹೆಚ್. ಕೆ. ಪಾಟೀಲ್ ಅಂತಹವರಿಗೆ  ಸರ್ಕಾರ ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ.  ಎಂ. ಟಿ. ಬಿ. ನಾಗರಾಜ್. ಪಿ. ಟಿ. ಪರಮೇಶ್ವರ್ ನಾಯಕ್,  ಸಿ. ಎಸ್. ಶಿವಳ್ಳಿ.  ರಹೀಮ್ ಖಾನ್, ಆರ್ ಬಿ ತಿಮ್ಮಾಪುರ್ ಮತ್ತು ಈ. ತುಕಾರಾಂ ಅವರಿಗೆ  ಸಂಪುಟದಲ್ಲಿ ಅವಕಾಶ ನೀಡಲಾಗಿದೆ.

ಈ ಮಧ್ಯೆ ರಾಮಲಿಂಗಾರೆಡ್ಡಿ, ಬಿ. ಸಿ. ಪಾಟೀಲ್, ಎಸ್ . ಆರ್. ಪಾಟೀಲ್ ಮತ್ತು ರೋಷನ್ ಬೇಗ್ ಅವರಂತಹವರು ಸಚಿವ ಸ್ಥಾನ ಸಿಗದೆ ಅತೃಪ್ತಿಗೊಂಡಿದ್ದಾರೆ. ಅವರ ಬೆಂಬಲಿಗರೂ ಕೂಡಾ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ. ಸ್ವಲ್ಪ ದಿನಗಳ ಬಳಿಕ ಅವೆಲ್ಲವೂ ಶಮನಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com