ಹಿಂದೂ ಕಾರ್ಯಕರ್ತರ ಹತ್ಯೆ: ಬಿಜೆಪಿ ರಾಜ್ಯದ ಜನರನ್ನು ದಾರಿತಪ್ಪಿಸುತ್ತಿದೆ- ಕಾಂಗ್ರೆಸ್

ರಾಜ್ಯಾದ್ಯಂತ 23 ಆರ್ ಎಸ್ ಎಸ್, ಬಿಜೆಪಿ ಬೆಂಬಲಿತ ಕಾರ್ಯಕರ್ತರ ಹತ್ಯೆ ನಡೆದಿದೆ ಎನ್ನುವ ಬಿಜೆಪಿ ಆರೋಪಕ್ಕೆ...
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
Updated on: 
ಬೆಂಗಳೂರು: ರಾಜ್ಯಾದ್ಯಂತ 23 ಆರ್ ಎಸ್ ಎಸ್, ಬಿಜೆಪಿ ಬೆಂಬಲಿತ ಕಾರ್ಯಕರ್ತರ ಹತ್ಯೆ ನಡೆದಿದೆ.ಎನ್ನುವ ಬಿಜೆಪಿ ಆರೋಪಕ್ಕೆ ಇಂದು ಕಾಂಗ್ರೆಸ್ ತಿರುಗೇಟು ನೀಡಿದೆ.ಬಿಜೆಪಿ ಹೇಳಿರುವ ಆ 23 ಜನರ ಪಟ್ಟಿಯಲ್ಲಿ ಬದುಕಿರುವವರನ್ನೂ ಸೇರಿಸಿಕೊಳ್ಳಲಾಗಿದೆ. ಈ ರೀತಿ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಜನರಿಗೆ ಸತ್ಯ ತಿಳಿಸುವ ಉದ್ದೇಶದಿಂಡ ಕರಪತ್ರ ವಿತರಣೆಗೆ ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು 23 ಜನರ ಪೈಕಿ ಕೇವಲ ಒಂಭತ್ತು ಮಂದಿ ಮಾತ್ರ ಕೋಮುಗಲಭೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿರುವುದಲ್ಲದೆ ಇದಕ್ಕೆ ಸಂಬಂಧಿತ ದಾಖಲೆಗಳನ್ನು ಸಹ ಬಿಡುಗಡೆಗೊಳಿಸಿದರು. 
"23 ಜನರ ಪೈಕಿ ಒಬ್ಬರಾದ ಅಶೋಕ್ ಪೂಜಾರಿ ಇನ್ನೂ ಜೀವಂತವಿದ್ದಾರೆ,  ಇನ್ನು ಭೂ ವಿವಾದದ ಕಾರಣದಿಂದಾಗಿ ಒಬ್ಬರ ಹತ್ಯೆಯಾಗಿದ್ದರೆ  ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು 10 ಜನ ವೈಯಕ್ತಿಕ ದ್ವೇಷದಿಂದ ಹತ್ಯೆಗೀಡಾಗಿದ್ದಾರೆ. ಕೋಮುಗಲಭೆ ಕಾರಣದಿಂದ ಕೇವಲ ಒಂಭತ್ತು ಜನ ಕೊಲ್ಲಲ್ಪಟ್ಟಿದ್ದಾರೆ" ರಾಮಲಿಂಗಾ ರೆಡ್ಡಿ ಹೇಳಿದರು.
ಆರು ಕೊಲೆಗಳನ್ನು ಹಿಂದೂ ಉಗ್ರಗಾಮಿ ಸಂಘಟನೆಗಳು ಮಾಡಿರುವುದು ಸಾಬೀತಾಗಿದ್ದು ಅದರಲ್ಲಿ ಹತ್ಯೆಯಾದವರ ಪೈಕಿ ಮೂವರು ಹಿಂದೂಗಳಾಗಿದ್ದರು. "ಇತ್ತೀಚೆಗೆ, ಇಂತಹ ತಪ್ಪು ಮಾಹಿತಿಯನ್ನು  ಪ್ರಚಾರ ಮಾಡಿದ್ದಕ್ಕಾಗಿ ನಾವು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ವಿರುದ್ಧ ದೂರು ಸಲ್ಲಿಸಿದ್ದೆವು, ಬಿಜೆಪಿ ರ್ಯಾಲಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಸುಳ್ಳು ಪ್ರಚಾರಗಳನ್ನು ಮುಂದುವರೆಸುತ್ತಿದ್ದರೆ ನಾವು ಅವರ ವಿರುದ್ಧ ಪ್ರಕರಣ ದಾಖಲಿಸುವುದು ಖಚಿತ" ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳನ್ನು ಜನರಿಂದ ಮರೆ ಮಾಚಲು ಬಿಜೆಪಿ ಇಂತಹಾ ಸುಳ್ಳು ಮಾಹಿತಿಯಿಂದ ಜನರ ದಾರಿ ತಪ್ಪಿಸುತ್ತಿದೆ.  "ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳನ್ನು ಜನರಿಂದ ಮರೆ ಮಾಚಲು ಬಿಜೆಪಿ ಇಂತಹಾ ಸುಳ್ಳು ಮಾಹಿತಿಯಿಂದ ಜನರ ದಾರಿ ತಪ್ಪಿಸುತ್ತಿದೆ." ಅವರು ಹೇಳಿದರು. ಬಿಜೆಪಿ ನಾಯಕ ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಅವರು ಮಾಡಿದ್ದ ಆರೋಪಗಳನ್ನು ಖಂಡಿಸಿದ ಗುಂಡೂರಾವ್ ದ್ವೇಷ ರಾಜಕೀಯದ ಆಟಕ್ಕಾಗಿ ಬಿಜೆಪಿ ಕರ್ನಾಟಕವನ್ನು ತನ್ನ ಪ್ರಯೋಗಾಲಯವನ್ನಾಗಿಸಿಕೊಳ್ಳುತ್ತಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com