ಪ್ರಸ್ತುತ ಅಂತಹ ಯಾವುದೇ ಬದಲಾವಣೆಗಳಿಲ್ಲ. ಈಶ್ವರ್ ಖಂಡ್ರೆಯವರು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬದಲಾವಣೆಗಳ ಕುರಿತಂತೆ ಸಿಎಲ್'ಪಿ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಸಿ ವೇಣುಗೋಪಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ನಾಯಕರೊಂದಿಗೆ ಚರ್ಚೆ ನಡೆಸುವ ಅಗತ್ಯಿದೆ. ಮೈತ್ರಿ ಸರ್ಕಾರವಿರುವ ಕಾರಣ ಪಕ್ಷಕ್ಕಿದು ಸವಾಲಿನ ಸಮಯವಾಗಿದೆ. ಚುನಾವಣೆ ವೇಳೆ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಫಲಿತಾಂಶ ಬಾರದೆ ಇದ್ದರಿಂದ ಮೈತ್ರಿ ಸರ್ಕಾರ ರಚಿಸಬೇಕಾಗಿ ಬಂತು. ಒಂದೆಡೆ ಮೈತ್ರಿ ಸರ್ಕಾರ ರಚನೆಯಾಗಿದ್ದರೆ, ಮತ್ತೊಂದೆಡೆ ಅತೃಪ್ತಿ ಸ್ಫೋಟಗೊಂಡಿತ್ತು. ಯುವ ಹಾಗೂ ಹೊಸ ನಾಯಕರಿಗೆ ಮಾರ್ಗದರ್ಶನಗಳನ್ನು ನೀಡಿ ಹಿರಿಯ ನಾಯಕರೊಂದಿಗೆ ಕೆಲಸ ಮಾಡುವಂತೆ ಮಾಡಬೇಕು.