ಬಿಜೆಪಿ ಪಾದಯಾತ್ರೆಗೆ ಸ್ವಾಗತ, ರೈತರ ಸಾಲಮನ್ನಾ ಆಗುತ್ತಿದೆ, ಅವರು ನನ್ನನ್ನು ಮೆಚ್ಚಬೇಕು: ಸಿಎಂ

ರೈತರ ಸಾಲಮನ್ನಾ ಮಾಡುವಂತ ಒತ್ತಾಯಿಸಿ ಬಿಜೆಪಿ ಕೈಗೊಂಡಿರುವ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿಎಂ ಎಚ್.ಡಿ ಕುಮಾರ ಸ್ವಾಮಿ ...
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
Updated on: 
ಬೆಂಗಳೂರು: ರೈತರ ಸಾಲಮನ್ನಾ ಮಾಡುವಂತ ಒತ್ತಾಯಿಸಿ ಬಿಜೆಪಿ ಕೈಗೊಂಡಿರುವ ಪಾದಯಾತ್ರೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿಎಂ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕೊನೆ ಪತ್ರ ಬಿಜೆಪಿಯವರು ರೈತರಿಗಾಗಿ ಹೋರಾಟ ನಡೆಸುತ್ತಿದ್ದಾರಲ್ಲ ಎಂದ ಕುಮಾರ ಸ್ವಾಮಿ, ನಾನು ರೈತರ ಸಾಲ ಮನ್ನಾ ಮಾಡುತ್ತಿದ್ದೇನೆ, ಬಿಜೆಪಿಯವರು ಇದಕ್ಕಾಗಿ ನನ್ನನ್ನು ಮೆಚ್ಚಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದ್ದು, ಇಂದಿನಿಂದ ಇದಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರದಿಂದ ಬೆಂಗಳೂರಿನವರೆಗೆ ಜು 27ರಿಂದ 28ರವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com