ಜಿ. ಪರಮೇಶ್ವರ್
ರಾಜಕೀಯ
ಪರಮೇಶ್ವರ್ ನಮ್ಮ ಹೆಂಡತಿ-ಮಕ್ಕಳನ್ನು ಮಾರಲು ಹೊರಟಿದ್ದಾರೆ: ಸಿಎಂ ಲಿಂಗಪ್ಪ
ರಾಮನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಮಾರಲು ಹೊರಟಿರುವ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕಾಂಗ್ರೆಸ್ ಪಕ್ಷವನ್ನು ಅಧೋಗತಿಗೆ ತರುತ್ತಿದ್ದಾರೆ...
ರಾಮನಗರ: ರಾಮನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಮಾರಲು ಹೊರಟಿರುವ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕಾಂಗ್ರೆಸ್ ಪಕ್ಷವನ್ನು ಅಧೋಗತಿಗೆ ತರುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಆರೋಪಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಲಿಂಗಪ್ಪ, ಪರಮೇಶ್ವರ್ ಅವರಿಗೆ, ಉಪಮುಖ್ಯಮಂತ್ರಿ ಆಗಿದ್ದೇ ಹೆಚ್ಚು ಎಂಬಂತೆ ಆಗಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಗುರಿ ಇಲ್ಲ. ರಾಮನಗರ ಜೊತೆಗೆ ನಮ್ಮ ಹೆಂಡತಿ ಮಕ್ಕಳನ್ನು ಮಾರಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಡಿ.ಕೆ. ಶಿವಕುಮಾರ್‌ಗೆ ಮಂತ್ರಿ ಸ್ಥಾನ ಕೊಡಬೇಡಿ ಎಂದು ಹೇಳುವಷ್ಟು ಧೈರ್ಯ ಯಾವ ರಾಜಕಾರಣಿಗೂ ಇಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ಪಕ್ಷದೊಳಗೇ ಸಂಚು ನಡೆದಿರುವುದು ನಿಜ ಎಂದು ದೂರಿದ್ದಾರೆ.

