ನಿರಾಸೆಯಾಗಿದೆ, ಆದರೆ ಕಾಂಗ್ರೆಸ್ ತೊರೆಯುವುದಿಲ್ಲ: ಅಜಯ್ ಸಿಂಗ್

: ಸಚಿವ ಹುದ್ದೆಗೆ ನನ್ನನ್ನು ಪರಿಗಣಿಸದಿರುವುದಕ್ಕೆ ನನಗೆ ತೀವ್ರ ಬೇಸರವಾಗಿದೆ, ಆದರೆ ನಾನು ಯಾರನ್ನೂ ದೂರುವುದಿಲ್ಲ, ನನ್ನ ತಂದೆ ಧರಂ ಸಿಂಗ್ ರಂತೆ ...
ಡಾ. ಅಜಯ್ ಸಿಂಗ್
ಡಾ. ಅಜಯ್ ಸಿಂಗ್
ಕಲಬುರಗಿ: ಸಚಿವ ಹುದ್ದೆಗೆ ನನ್ನನ್ನು ಪರಿಗಣಿಸದಿರುವುದಕ್ಕೆ ನನಗೆ ತೀವ್ರ ಬೇಸರವಾಗಿದೆ, ಆದರೆ ನಾನು ಯಾರನ್ನೂ ದೂರುವುದಿಲ್ಲ, ನನ್ನ ತಂದೆ ಧರಂ ಸಿಂಗ್ ರಂತೆ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1972 ರಿಂದ 2008 ರ ವರೆಗೂ ನನ್ನ ತಂದೆ ಸತತವಾಗಿ ಜೇವರ್ಗಿಯಿಂದ ಜಯ ಸಾಧಿಸಿದ್ದಾರೆ, 2008 ರಲ್ಲಿ ಮಾತ್ರ ಅವರು ಸೋಲುಂಡಿದ್ದರು. ನಾನು 2013 ಮತ್ತು 2018ರ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ, ಇದನ್ನು ಪರಿಗಣಿಸಿ ಹೈಕಮಾಂಡ್ ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕಿತ್ತು, ಕೆಲವು ಜಿಲ್ಲೆಗಳಲ್ಲಿ ಸರದಿ ವ್ಯವಸ್ಥೆ ಇದೆ, ಆಧರೆ ಕಲಬುರಗಿಯಲ್ಲಿ ಮಾತ್ರ ಇದು ಜಾರಿಯಲ್ಲಿಲ್ಲ.
2013-18 ರವರೆಗೂ ನಾನು ಶಾಸಕನಾಗಿದ್ದೆ, ಆದರೆ ನಾನು ಯಾವತ್ತೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ತಾಳ್ಮೆಯಿಂದ ಕಾದರೆ ಉತ್ತಮ ಫಲ ದೊರಕುತ್ತದೆ ಎಂದು ನನ್ನ ತಂದೆ ಹೇಳುತ್ತಿದ್ದರು, ಇದು ವರಗೊ ಯಾವುದೇ ಹಿರಿಯ ಮುಖಂಡರನ್ನು ನಾನು ಭೇಟಿ ಮಾಡಿಲ್ಲ, ಲೋಕಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ನನ್ನ ತಂದೆಯ ಆಪ್ತ ಸ್ನೇಹಿತರಾಗಿದ್ದು, ಅವರನ್ನು ನನ್ನ ತಂದೆಯಂತೆ ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಹೆಸರನ್ನು ಏಕೆ ಪರಿಗಣಿಸಲಿಲ್ಲ ಎಂಬುದು ನನಗೆ ತಿಳಿದಿಲ್ಲ, ನಾನು ಅತೃಪ್ತರ ಯಾವುದೇ ಗುಂಪಿಗೆ ಸೇರಿಲ್ಲ, ನಾನು ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com