ಯಾರಿಗೂ ಬೇಡವಾದ 'ಉನ್ನತ ಶಿಕ್ಷಣ': ತಮ್ಮ ಬಳಿಯೇ ಇರಿಸಿಕೊಂಡ ಸಿಎಂ ಕುಮಾರಸ್ವಾಮಿ

ತಮ್ಮ ಪಕ್ಷದ ಶಾಸಕ ಜಿ.ಟಿ ದೇವೇಗೌಡ ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಎಂ ಕುಮಾರ ಸ್ವಾಮಿ ...
ಎಚ್.ಡಿ ಕುಮಾರ ಸ್ವಾಮಿ
ಎಚ್.ಡಿ ಕುಮಾರ ಸ್ವಾಮಿ
ಬೆಂಗಳೂರು: ತಮ್ಮ ಪಕ್ಷದ ಶಾಸಕ ಜಿ.ಟಿ ದೇವೇಗೌಡ ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಎಂ ಕುಮಾರ ಸ್ವಾಮಿ ಆ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸಿಎಂ ಭಾಗಿಯಾಗಿದ್ದರು, ಗೌಡ ಗೈರಾಗಿದ್ದರು.
ಉನ್ನತ ಶಿಕ್ಷಣ ಖಾತೆಯನ್ನು ನನ್ನ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿದ್ದೇನೆ, ಅದನ್ನು ಯಾರಿಗೂ ವರ್ಗಾಯಿಸುವುದಿಲ್ಲ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ, 
ಈ ಮೊದಲು ಉನ್ನತ ಶಿಕ್ಷಣವನ್ನು ಜಿ.ಟಿ ದೇವೇಗೌಡ ಅವರಿಗೆ ನೀಡಲಾಗಿತ್ತು, ಮುಖ್ಯಮಂತ್ರಿ ಅವರ ಮನವೂಲಿಸಿದರೂ ಆ ಖಾತೆ ಹೊಂದಲು ಜಿಟಿಡಿ ನಿರಾಕರಿಸಿದ್ದರು. ಹೀಗಾಗಿ ತಮ್ಮ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿರುವ ಸಿಎಂ, ಜಿ.ಟಿ ದೇವೇಗೌಡ ಅವರಿಗೆ ಅಬಕಾರಿ ಹೊಣೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅಬಕಾರಿ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಸಹಕಾರ ಖಾತೆಯನ್ನು ಬಂಡೆಪ್ಪ ಕಾಶೆಂಪೂರ್ ಗೆ ನೀಡಿದ್ದು, ಅವರು ಈಗಾಗಲೇ ಇಲಾಖೆಯಲ್ಲಿ ಹಲವು ನಿಯಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಉನ್ನತ ಶಿಕ್ಷಣ ಬಹಳ ದೊಡ್ಡ ಖಾತೆ, ಅದಕ್ಕೆ ಹೆಚ್ಚಿನ ಗಮನ ನೀಡುವ ಅವಶ್ಯಕತೆಯಿದೆ, ಇದರ ಬಗ್ಗೆ ನನಗೆ ಜ್ಞಾನವಿದ್ದು, ಅದನ್ನು ನಾನು ಹ್ಯಾಂಡಲ್ ಮಾಡುವೆ ಎಂದು ಸಿಎಂ ತಿಳಿಸಿದ್ದಾರೆ. ಈಗಾಗಲೇಹಣಕಾಸು, ಅಬಕಾರಿ ಸೇರಿದಂತೆ ಹಲವು ಖಾತೆಗಳು  ಸಿಎಂ ಕುಮಾರ ಸ್ವಾಮಿ ಬಳಿ ಇವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com