ಕಾಂಗ್ರೆಸ್ ಹೈಕಮಾಂಡ್ ಗೆ ಸಚಿವ ಡಿಕೆಶಿ ಹಣ ಸಂದಾಯ: ಐಟಿ ಅಧಿಕಾರಿಗಳ ಆರೋಪ

ಹವಾಲಾ ಮೂಲಕ ಹಣವನ್ನು ಸರಬರಾಜು ಮಾಡುತ್ತಿದ್ದಾರೆ ಮತ್ತು ಅಘೋಷಿತ ಹಣವನ್ನು ಸಂಗ್ರಹಿಸಲು ...
ಸಚಿವ ಡಿ ಕೆ ಶಿವಕುಮಾರ್
ಸಚಿವ ಡಿ ಕೆ ಶಿವಕುಮಾರ್

ಬೆಂಗಳೂರು: ಹವಾಲಾ ಮೂಲಕ ಹಣವನ್ನು ಸರಬರಾಜು ಮಾಡುತ್ತಿದ್ದಾರೆ ಮತ್ತು ಅಘೋಷಿತ ಹಣವನ್ನು ಸಂಗ್ರಹಿಸಲು ದೆಹಲಿಯಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಮತ್ತು ಗಂಭೀರ ಆರೋಪ ಇದೀಗ ಕಾಂಗ್ರೆಸ್ ನ ಪ್ರಭಾವಿ ನಾಯಕ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಕೇಳಿಬರುತ್ತಿದೆ.

ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮುಂದೆ ದೂರು ಸಲ್ಲಿಸಿದ್ದು ಡಿಕೆಶಿ ಕಾಂಗ್ರೆಸ್ ಹೈಕಮಾಂಡ್ ಗೆ ಹಣವನ್ನು ಕಳುಹಿಸಿದೆ ಎಂದು ದೂರು ನೀಡಿದೆ.

ಐಟಿ ಇಲಾಖೆ ಅಧಿಕಾರಿಗಳ ದೂರಿನ ಮೇಲೆ ನ್ಯಾಯಾಲಯ ಸಚಿವ ಡಿಕೆಶಿ ಮತ್ತು ಇತರ ನಾಲ್ವರಿಗೆ ಸಮನ್ಸ್ ಜಾರಿ ಮಾಡಿ ಆಗಸ್ಟ್ 2ರೊಳಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಹೇಳಿದೆ. ಈ ಮುನ್ನ ಡಿಕೆಶಿ ನಿವಾಸಕ್ಕೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳಿಂದ ಒಮ್ಮೆ 5 ಕೋಟಿ ರೂಪಾಯಿ, ಮತ್ತೊಮ್ಮೆ 3 ಕೋಟಿ ಹಾಗೂ ಇನ್ನೊಮ್ಮೆ 2 ಕೋಟಿ ರೂಪಾಯಿ ಹಣ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಡಿಕೆ ಶಿವಕುಮಾರ್ ಕಡೆಯಿಂದ ಮುಲ್ಗುಂದ್ ಎಂಬುವವರ ಮೂಲಕ ಸಂದಾಯವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com