ಸಮ್ಮಿಶ್ರ ಸರ್ಕಾರದ ಸಿಎಂಪಿ ಮಾರ್ಗಸೂಚಿ ಶುಕ್ರವಾರ ಅಂತಿಮ: ಮೊಯ್ಲಿ

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳ ಪ್ರಣಾಳಿಕೆಯಲ್ಲಿನ ಅಂಶಗಳ ಅನುಷ್ಠಾನಕ್ಕಾಗಿ ರಚಿಸಲಾಗಿರುವ ...
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ
ಬೆಂಗಳೂರು:  ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳ ಪ್ರಣಾಳಿಕೆಯಲ್ಲಿನ ಅಂಶಗಳ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಸಾಮಾನ್ಯ ಕನಿಷ್ಠ  ಕಾರ್ಯಕ್ರಮ ಮಾರ್ಗಸೂಚಿ ಶುಕ್ರವಾರ ಅಂತಿಮಗೊಳ್ಳಲಿದೆ.
ಸೋಮವಾರ ಸಭೆ ಬಳಿಕ ಹೇಳಿಕೆ ನೀಡಿದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಎರಡನೇ ಕರಡು ಬಗ್ಗೆ ಇಂದು ಚರ್ಚೆಯಾಗಿದೆ. ಎರಡೂ ಪಕ್ಷಗಳ ಪ್ರಣಾಳಿಕೆಗಳ ಸಾಮಾನ್ಯವಾದ ಕಾರ್ಯಕ್ರಮಗಳ ಚರ್ಚೆಯಾಗಿದೆ. ಇದೇ 29ರಂದು ಅಂತಿಮ ಸಭೆ ಮಾಡುತ್ತೇವೆ. ಸಭೆ ಮಾಡಿ ಸಮನ್ವಯ ಸಮಿತಿಗೆ ನಮ್ಮ ವರದಿ ನೀಡುತ್ತೇವೆ ಎಂದಿದ್ದಾರೆ. 
ಐದು ವರ್ಷ ಕಾರ್ಯಕ್ರಮಕ್ಕಾಗಿ ನಾವು ವರದಿ ನೀಡುತ್ತಿದ್ದು, ರೈತರ ಸಾಲಮನ್ನಾಗೆ ನಮ್ಮ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಜೂನ್ 29ಕ್ಕೆ ಅಂತಿಮ ಮಾಡುತ್ತೇವೆ. ಅದರ ಬಳಿಕ ಪ್ರಣಾಳಿಕೆ ಅಂಶಗಳ ಜಾರಿಗೆ ನಿರ್ಧರಿಸಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com