ಲಿಂಗಾಯತ ವಿಚಾರ; ಕಾಂಗ್ರೆಸ್ ಸರ್ಕಾರ ಸಮಾಜವನ್ನು ವಿಭಜಿಸುತ್ತಿದೆ- ಬಿಜೆಪಿ, ಜೆಡಿಎಸ್
ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ರಾಜ್ಯ ಸಚಿವ ಸಂಪುಟ ತೆಗೆುದೊಂಡಿರುವ ನಿರ್ಧಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಟೀಕೆಗಳನ್ನು ವ್ಯಕ್ತಪಡಿಸುತ್ತಿವೆ...
ಬೆಂಗಳೂರು: ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ರಾಜ್ಯ ಸಚಿವ ಸಂಪುಟ ತೆಗೆುದೊಂಡಿರುವ ನಿರ್ಧಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಟೀಕೆಗಳನ್ನು ವ್ಯಕ್ತಪಡಿಸುತ್ತಿವೆ.
ಸರ್ಕಾರದ ನಿರ್ಧಾರ ಕುರಿತಂತೆ ಜಂಟಿಯಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರರಾದ ಮೋಹನ್ ಲಿಂಬಿಕೈ ಮತ್ತು ಸಾಶಿಲ್ ನಮೋಶಿಯವರು, ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರ ಸಮಾಜವನ್ನು ವಿಭಜಿಸುವ ಕೆಲಸಗಳನ್ನು ಮಾಡುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಮುದಾಯಗಳನ್ನು ವಿಭಜಿಸುವ ನಿರ್ಧಾರಗಳನ್ನು ಕೈಗೊಂಡಿದೆ. ಧಾರ್ಮಿದ ಆಧಾರದ ಜನರನ್ನು ವಿಭಜಿಸುತ್ತಿದೆ. ಇದರಿಂದ ಎಲ್ಲಾ ಸಮುದಾಯಗಳು ಸಂಕಷ್ಟ ಸ್ಥಿತಿಯಲ್ಲಿ ನಿಲ್ಲುವಂತೆ ಮಾಡಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಧಾರ್ಮಿಕ ಬಣ್ಣ ನೀಡುವ ಮೂಲಕ ಬಸವ ತತ್ತ್ವವನ್ನು ನಾಶ ಮಾಡಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಇದರಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದು, ವೀರಶೈವ-ಲಿಂಗಾಯತ ಪ್ರತ್ಯೇತ ಧರ್ಮ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರವಾಗಿದೆ ಎಂದು ಹೇಳಿದ್ದಾರೆ.