ಇನ್ನೂ ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ್, ಸತ್ಯವನ್ನ ಪರಿಶೀಲಿಸದ ಯಡಿಯೂರಪ್ಪ ತರಾತುರಿಯಲ್ಲಿ ಮೂರ್ಖರಾಗಿದ್ದಾರೆ, ವಿಶ್ವೇಶ್ವರಯ್ಯ ಜಲ ನಿಗಮ ಟೆಂಡರ್ ಪರಿಶೀಲನಾ ಸಮಿತಿ ಮಾರ್ಚ್ 19 ರಂದು ನ್ಯಾಷನಲ್ ಪ್ರಾಜೆಕ್ಟ್ ಕನ್ ಸ್ಟ್ರಕ್ಷನ್ ಕಂಪನಿಯ ಟೆಂಡರ್ ಕ್ಯಾನ್ಸಲ್ ಮಾಡಿದೆ. ಜೊತೆಗೆ ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ ಕೂಡ ಮಾಡಲಾಗಿದೆ ಎಂದು ಹೇಳಿದ್ದಾರೆ, ಯಡಿಯೂರಪ್ಪ ಅವರ ಈ ಆರೋಪ ಅವರನ್ನು ಜೋಕರ್ ಆಗಿಸಿದೆ ಎಂದು ಹೇಳಿದ್ದಾರೆ.