ವಿಧಾನಸಭೆ ಚುನಾವಣೆ: ಈ ಬಾರಿ ಕರಾವಳಿ ಕರ್ನಾಟಕ ಮತದಾರರ ಮನಸ್ಸು ಯಾರ ಕಡೆಗೆ?

ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸಿದ ನಂತರ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮಂಗಳೂರು: ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಿಸಿದ ನಂತರ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ತಮ್ಮ ಕಸರತ್ತು ಆರಂಭಿಸಿವೆ.
ಆದರೆ ಬಂದರು ನಗರಿ ಮಂಗಳೂರಿನಲ್ಲಿ ಮಾತ್ರ ಚುನಾವಣೆ ವಿಶೇಷವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅಂಗಡಿ ಮಾಲೀಕರೊಬ್ಬರ ಪ್ರಕಾರ, ಚುನಾವಣೆ ಎಂದರೇ ಹಿಂಸಾಚಾರ, ಕೊಲೆ, ಸಮುದಾಯಗಳ ನಡುವಿನ ಸಂಘರ್ಷವಾಗಿದೆ, ಆದರೆ ಅವರ ಅಭಿಪ್ರಾಯ ತಪ್ಪು ಎಂದೂ ಹೇಳಲಾಗದು.
ಇರುವ ನೈಜ ಸಮಸ್ಯೆಗಳನ್ನು ಬದಿಗಿರಿಸಿರುವ ಈ ಬಾಗದ ರಾಜಕಾರಣಿಗಳು ಕೊಲೆ, ಪಾದಯಾತ್ರೆ ಮುಂತಾದ ಅನಾವಶ್ಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.  ಕಳೆದ ಬಾರಿಯ ಚುನಾವಣೆಗಳಂತೆ ಈ ಬಾರಿಯೂ ಇರುತ್ತದೆ. ಯಾವುದೇ ಮಹತ್ತರವಾದ ಬದಲಾವಣೆಗಳಿಲ್ಲ ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ.
ನೈಜ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಬೇಡದ ಕಾರಣಗಳಿಗಾಗಿ ಇಲ್ಲಿ ಕೊಲೆ, ಸಂಘರ್ಷ ನಡೆಯುತ್ತಿದೆ. ಕೋಮು ಸೌಹಾರ್ದತೆ, ಹಾಗೂ ಧಾರ್ಮಿಕ ಸಾಮರಸ್ಯ.ದಿಂದ ಜೊತೆಗಿರಬೇಕಾದ  ಜನ ಅಪ ನಂಬಿಕೆ, ಕೋಮು ದಳ್ಳುರಿಯಲ್ಲಿ ದಿನ ನಿತ್ಯವೂ ಬೇಯುತ್ತಿದ್ದಾರೆ.
ಈ ಮೊದಲು ಮಂಗಳೂರು ನಗರ ಹೀಗಿರಲಿಲ್ಲ, ಬಾಬ್ರಿ ಮಸೀದಿ ಧ್ವಂಸದ ನಂತರ ಇಲ್ಲಿನ ಸಂಪೂರ್ಣ ಚಿತ್ರವೇ ಬದಲಾಗಿ ಹೋಗಿದೆ, 1968 ರಲ್ಲಿ ಮೊದಲ ಬಾರಿಗೆ ಉಡುಪಿ ಮುನ್ಸಿಪಲ್ ಕೌನ್ಸಿಲ್ ಜನಸಂಘ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಿತು, ಅದಾದ ನಂತರ 2 ದಶಕಗಳ ಕಾಲ ಜನಸಂಘ ಪಕ್ಷಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ, 19190 ರಲ್ಲಿ ಲೋಕಸಭೆ ಚುನಾವಣೆಯಲ್ಲಿ  ಜನಸಂಘದ ಅಭ್ಯರ್ಥಿ ಗೆಲುವಿನ ನಂತರ ಪಕ್ಷ ಈ ಭಾಗದಲ್ಲಿ ಪ್ರಬಲವಾಗಿ ಬೆಳೆಯುತ್ತಾ ಬಂದಿತು.
ಇತ್ತಿಚೆಗೆ ನಡೆದ ಪರೇಶ್ ಮೆಸ್ತಾ ಹತ್ಯೆ ಪ್ರಕರಣ, ಹಾಗೂಬ ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಭಾಷಣ ಶಾಂತಿಯುತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಕಿಡಿ ಹೊತ್ತಿಸಿದೆ, 
ಕಳೆದ 25 ವರ್ಷದಿಂದ ಕೋಮು ಸಂಬಂಧಿತ ವಿಷಯಗಳಿಗಾಗಿ ಚುನಾವಣೆ ನಡೆಯುತ್ತಿತ್ತು, ಆದರೆ ಈ ಬಾರಿ  ವಿಭಿನ್ನವಾದ ಸಮಸ್ಯೆಗಳಿವೆ,  ಆದಾಯ ಕಡಿಮೆಯಾಗುತ್ತಿರುವುದು,  ಗಲ್ಫ್ ದೇಶಗಳಲ್ಲಿ ಕೆಲಸಕ್ಕೆ ಕತ್ತರಿ, ಆರೋಗ್ಯ ಸೇವೆಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಟ್ಟಿಪಾಲ್ ಹೇಳಿದ್ದಾರೆ.
ಕೋಮು ಗಲಭೆಗಳನ್ನು ಹೊರತಾಗಿಯೂ ಕಾಂಗ್ರೆಸ್ ಹಲವು ಭಾಗ್ಯಗಳನ್ನು ಈ ಭಾಗದ ಜನರಿಗೆ ನೀಡಿದೆ, ಈ ಭಾಗದ ಮೇಲೆ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಳ್ಳುತ್ತಿದ್ದು, ಬಿಜೆಪಿ ಬಿಗಿ ಹಿಡಿತ ಸಾಧಿಸಲು ಯತ್ನಿಸುತ್ತಿದೆ. 2013ರಲ್ಲಿ ನಡದೆ ವಿಧಾನಸಭೆ ಚುನಾವಣೆಯಲ್ಲಿ 19 ಸೀಟುಗಳಿಗೆ ಕೇವಲ 13ಕ್ಕೆ ಕಾಂಗ್ರೆಸ್ ತೃಪ್ತವಾಗಬೇಕಾಯಿತು.
ಅಡಿಕೆ ಹಾಗೂ ಮೆಣಸು ಬೆಳೆಗಳಿಗೆ ಬೆಲೆ ಇಳಿಯುತ್ತಿರುವುದರಂದ ಈ ಭಾಗದ ಕೃಷಿಕ ಸಮುದಾಯ ಆತಂಕಕ್ಕೊಳಗಾಗಿದೆ. ಅಡಿಕೆ ಬೆಳೆ ಈ ಬಾಗದ ಜನರ ಪ್ರಮುಖ ಬೆಳೆಯಾಗಿದ್ದು, ಗುಟ್ಕಾ ನಿಷೇಧ ಹಿನ್ನೆಲೆಯಲ್ಲಿ ಇಲ್ಲಿನ ಬೆಳೆಗಾರರಿಗೆ ತೊಂದರೆ ಎದುರಾಗಿದೆ.
ಇನ್ನೂ ಮರಳಿನ ಕೊರೆತೆ ಇರುವುದರಿಂದ ಪಕ್ಕದ ಕೇರಳ ರಾಜ್ಯದಿಂದ ಮರಳು ತರಿಸಿಕೊಳ್ಳಲಾಗುತ್ತಿದೆ, ಹೀಗಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ಕಾನಾನು ತರಬೇಕು ಎಂಬುದು ಇಲ್ಲಿನ ಜನಗಳ ಆಶಯ.
ನೇತ್ರಾವತಿ ನದಿ ನೀರಿನ ತಿರುವು ಯೋಜನೆಯಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ಸೇರಿದಂತೆ ಹಲವು ತಾಲೂಕುಗಳಿಗೆ ನೀರು ಹರಿಸಲು ಪ್ರಯತ್ನಿಲಾಗುಸುತ್ತಿದೆ ಆದರೆ ಇದಕ್ಕೆ ಎನ್ ಜಿಟಿ ಇನ್ನೂ ಅನುಮೋದನೆ ನಿಡಿಲ್ಲ, ಹೀಗಾಗಿ ರಾಜಕೀಯ ಪಕ್ಷಗಳಿಗೆ ಬುದ್ದಿ ಕಲಿಸುವ ದೃಷ್ಟಿಯಿಂದ ಮತದಾನದ ವೇಳೆ ನೋಟಾ ಬಟನ್ ಒತ್ತಲು ಜನರಿಗೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ.
ಹಿಂದಿನಚುನಾವಣೆಗಳಲ್ಲಿ ಯಾವುದೇ ದೊಡ್ಜ ಹಗರಣಗಳಿರಲಿಲ್ಲ,  ಈಗಲೂ ಕೂಡ ಇಲ್ಲಿ ಅಂತಹ ದೊಡ್ಡ ಮಟ್ಟದ ಹಗರಣಗಳಿಲ್ಲ, ಬಿಜೆಪಿ ಯವರು ಮೋದಿ ಅಲೆಯ ಮೇಲೆ ಪ್ರಚಾರ ನಡೆಸಿದರೇ, ಕಾಂಗ್ರೆಸ್ ನವರು ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯಗಳ ಆಧಾರದ ಮೇಲೆ ಮತಯಾಚನೆ ನಡೆಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ರಾಮನಾಯಕ್ ತಿಳಿಸಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೇ ಈ ಭಾಗದಲ್ಲಿ ಈ ಬಾರಿಯ ರಾಜಕೀಯ ಸಮೀಕರಣಗಳು ಬದಲಾಗಿವೆ,  ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ  ಹಾಗೂ ಹಿರಿಯ ರಾಜಕಾರಣಿ ಜಯಪ್ರಕಾಶ್ ಹೆಗಡೆ ಬಿಜೆಪಿ ಸೇರಿರುವುದರಿಂದ ಈ ಬಾಗದಲ್ಲಿ ಪಕ್ಷಕ್ಕೆ ಬಲ ಬಂದಂತಾಗಿದೆ. 
ಇನ್ನೂ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ ಕೂಡ ವಿಧಾನಸಭೆ ಚುನಾವಣೆಗೆ ಸ್ಪರ್ದಿಸಲು ಮುಂದಾಗಿದ್ದಾರೆ, ಯಾವುದೇ ಪಕ್ಷ ಟಿಕೆಟ್ ನೀಡದಿದ್ದ ಪಕ್ಷದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧರಿಸಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಜನಾರ್ಧನ ಪೂಜಾರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮಾಧಾನ ಪಡಿಸಿದ್ದರು. ಬಿಲ್ಲವ ಸಮಾಜದ ಮತಗಳನ್ನು ಪಡೆಯಲು ಕಾಂಗ್ರೆಸ್ ಮತಾದಾರರ ಓಲೈಕೆಗೆ ಮುಂದಾಗಿದೆ.
ಮೂರು ಜಿಲ್ಲೆಗಳ ಒಟ್ಟು 19 ಕ್ಷೇತ್ರಗಳಲ್ಲಿ 13 ರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಈ ಭಾಗದಲ್ಲಿ, ಬಿಜೆಪಿಯ ಕೆಲ ಹೊಸ ಮುಖಗಳು ಈ ಬಾರಿ ಜಯಗಳಿಸುವ ಸಾಧ್ಯತೆಯಿದೆ,  ಜೆಡಿಎಸ್ ಸಿಪಿಐ(ಎಂ) ಪಕ್ಷಗಳು ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ,  ಬಲ ಪಂಥೀಯ ಹಿಂದೂ ಸಂಘಟನೆಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಲಿಸಲು ಉತ್ಸಾಹ ತೋರಿವೆ. ಈ ಬಾರಿ ಮತದಾರ ಯಾವ ಪಕ್ಷದ ಅಭ್ಯರ್ಥಿಗೆ ವಿಜಯ ಮಾಲೆ ಹಾಕುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com