ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ನಟ ಪ್ರಕಾಶ್ ರಾಜ್ ಹಾಗೂ ಗುಜರಾತ್ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಬಹಿರಂಗ ಸಭೆಗಳಲ್ಲಿ ನಿಂದನೀಯ ಪದ ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಮಾರಂಭಗಳಲ್ಲಿ ಮಾತನಾಡುತ್ತಿರುವ ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ರಾಜ್ ಮಾನನಷ್ಟ ಮತ್ತು ನಿಂದನೀಯ ಪದಗಳನ್ನು ಬಳಸುತ್ತಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಹಿಂದೆ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೆ ಅವರನ್ನು ಹಿಂದಕ್ಕೆ ಹೋಗಿ ಎಂದು ಹೇಳಿ ಎಂದು ಹೇಳಿದ್ದರು. ಇನ್ನು ರಾಜ್ಯದಲ್ಲಿ ಪ್ರಕಾಶ್ ರಾಜ್ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
Karnataka BJP filed a complaint with Chief Electoral Officer, Karnataka against Jignesh Mevani, Prakash Raj and others for 'having used defamatory & abusive language' against PM Modi, BS Yeddyurappa and Shobha Karandlaje at an event on April 29 in Bengaluru. (file pics) pic.twitter.com/8jflPEkudU