ತೆಂಗಿನಕಾಯಿ ಚಿಹ್ನೆ ಪಡೆಯುವಲ್ಲಿ ವಿಫಲರಾದ ಪಕ್ಷೇತರ ಅಭ್ಯರ್ಥಿಗೆ ಟ್ರಾಕ್ಟರ್ ಗುರುತು

ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್ ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.
ತೆಂಗಿನ ಕಾಯಿ ಚಿಹ್ನೆ
ತೆಂಗಿನ ಕಾಯಿ ಚಿಹ್ನೆ

ರಾಯಚೂರು : ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ  ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್  ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ  ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.

ಈ ಬಾರಿಯ ಚುನಾವಣೆಗಾಗಿ ತೆಂಗಿನಕಾಯಿಯನ್ನು ಪಕ್ಷದ ಚಿಹ್ನೆಯಾಗಿ ಬಳಸಿಕೊಳ್ಳಲು  ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್  ನಿರ್ಧರಿಸಿದ್ದು, ಚುನಾವಣಾಧಿಕಾರಿ ದೇವದುರ್ಗ ಕೂಡಾ ಸಮ್ಮತಿ ನೀಡಿದ್ದರು. ಆದರೆ, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಅದನ್ನು ಹಿಂಪಡೆಯಲಾಗಿದೆ.

ಆ ಚಿಹ್ನೆ ಕೆಜೆಪಿಗೆ ಸೇರಿದ್ದು ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜನಪ್ರಿಯವಾದ ಚಿಹ್ನೆ ಪಡೆಯುವಲ್ಲಿ ವಿಫಲವಾಗಿರುವುದಾಗಿ  ಎಂದು ಕರೇಮ್ಮ ಹೇಳಿದ್ದಾರೆ.

ಚಿಹ್ನೆಗಳಿದ್ದ ಪುಸ್ತಕದಲ್ಲಿದ್ದ ತೆಂಗಿನ ಕಾಯಿಯನ್ನು ಪಡೆಯಲು ನಿರ್ಧರಿಸಿ ಚುನಾವಣಾಧಿಕಾರಿ ಮೊಹಮ್ಮದ್ ಇರ್ಪಾನ್ ಅವರಿಗೆ  ಹೇಳಿದ ನಂತರ ಅವರು ಆ ಚಿಹ್ನೆಯನ್ನೇ ನೀಡಿದ್ಜರು. ಆ ಪ್ರಕ್ರಿಯೆ ಮುಗಿದ ನಂತರ ಅವರ ಬೆಂಬಲಿಗರು  ಆ ಚಿಹ್ನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯಗೊಳಿಸಿದ್ದಾರೆ.

 ಈ ವಿಷಯ ತಿಳಿದ ಬಿಜೆಪಿ ಆಕ್ಷೇಪಣೆ ಸಲ್ಲಿಸಿದ್ದು, ಆ ಚಿಹ್ನೆಯನ್ನು ಕರೇಮ್ಮ ಅವರಿಗೆ ನೀಡದಂತೆ ಚುನಾವಣಾದಿಕಾರಿಗಳಿಗೆ ತಿಳಿಸಿದ್ದಾರೆ.  ಇದರಿಂದಾಗಿ ಕರೇಮ್ಮ ಈಗ ಟ್ರಾಕ್ಟರ್ ಚಿಹ್ನೆ ಆಯ್ಕೆ ಮಾಡಿದ್ದಾರೆ, ಆದರೂ , ಚುನಾವಣಾಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ ಎಂದು ಕರೇಮ್ಮ ಹೇಳಿದ್ದಾರೆ.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಚುನಾವಣಾಧಿಕಾರಿ , ತೆಂಗಿನಕಾಯಿ ಚಿಹ್ನೆ ಕೆಜೆಪಿಯದ್ದು ಎಂಬುದು ಗೊತ್ತಿರಲಿಲ್ಲ. ಕರೇಮ್ಮ ಅವರಿಗೆ ಟ್ರಾಕ್ಟರ್ ಸಿಹ್ನೆ ನೀಡುವುದಾಗಿ ಹೇಳಿದ್ದಾರೆ.

ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ ಗೆದ್ದು ಬರುವುದಾಗಿ ಕರೇಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com