ಮಾನಸ ಸರೋವರಕ್ಕೆ ಭೇಟಿ ನೀಡುವಂತೆ 'ಕೇಂಬ್ರಿಜ್ ಅನಾಲಿಟಿಕಾ' ರಾಹುಲ್'ಗೆ ಸಲಹೆ ನೀಡಿರಬೇಕು; ರಾಜೀವ್ ಚಂದ್ರಶೇಖರ್

ರಾಹುಲ್ ಗಾಂಧಿ ಏನನ್ನು ಮಾಡುತ್ತಿದ್ದಾರೆಯೇ ಎಲ್ಲವೂ ತಂತ್ರವಷ್ಟೇ. ಮಾನಸ ಸರೋವರಕ್ಕೆ ಭೇಟಿ ನೀಡಿದರೆ, ಹಿಂದುಗಳು ಮತಹಾಕಬಹುದೆಂದು ಕೇಂಬ್ರಿಜ್ ಅನಾಲಿಟಿಕಾ ಸಲಹೆ ನೀಡಿರಬೇಕು...
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್
ಬೆಂಗಳೂರು; ರಾಹುಲ್ ಗಾಂಧಿ ಏನನ್ನು ಮಾಡುತ್ತಿದ್ದಾರೆಯೇ ಎಲ್ಲವೂ ತಂತ್ರವಷ್ಟೇ. ಮಾನಸ ಸರೋವರಕ್ಕೆ ಭೇಟಿ ನೀಡಿದರೆ, ಹಿಂದುಗಳು ಮತಹಾಕಬಹುದೆಂದು ಕೇಂಬ್ರಿಜ್ ಅನಾಲಿಟಿಕಾ ಸಲಹೆ ನೀಡಿರಬೇಕು. ಹೀಗಾಗಿ ರಾಹುಲ್ ಮಾನ ಸರೋವರಕ್ಕೆ ಹೋಗುವುದಾಗಿ ಹೇಳಿದ್ದಾರೆಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಸೋಮವಾರ ಹೇಳಿದ್ದಾರೆ. 
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ವಂದೇ ಮಾತರಂ ಗೀತೆಗೆ ಗೌರವ ಸೂಚಿಸಲಾಗದ ವ್ಯಕ್ತಿ ಧರ್ಮಕ್ಕೆ ಹೇಗೆ ಗೌರವ ಸೂಚಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಜೀವನದಲ್ಲಿಯೇ ರಾಹುಲ್ ಅವರು ಹಿಂದುಗಳಿಗಾಗಿ ಏನನ್ನೂ ಮಾಡಿಲ್ಲ. ಯಾವುದನ್ನೂ ಅಳತೆ ಮಾಡಿ ನಾನು ಹೇಳುತ್ತಿಲ್ಲ. ಆದರೆ, ಚುನಾವಣೆಯನ್ನು ಮುಂದಿಟ್ಟುಕೊಂಡು ರಾಹುಲ್ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆಂಬುದನ್ನು ನಾನು ಹೇಳಬಲ್ಲೆ. ಗುಜರಾತ್ ರಾಜ್ಯ ಚುನಾವಣೆಯಲ್ಲಿಯೂ ಇದನ್ನೇ ಅವರು ಮಾಡಿದ್ದರು. ಇದೀಗ ಕರ್ನಾಟಕದಲ್ಲೂ ಹಾಗೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ. 
ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಮಧಿಯವರು ಕರ್ನಾಟಕ ವಿಧಾನಸಭಾ ಚುನಾವಣೆ ಅಂತ್ಯಗೊಂಡ ಬಳಿಕ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. 
ಉತ್ತಮ ಕೆಲಸಗಳನ್ನು ಮಾಡದೆಯೇ ಚುನಾವಣೆಯಲ್ಲಿ ಗೆಲವು ಸಾಧಿಸಲು ಸಾಧ್ಯವೇ ಇಲ್ಲ ಎಂಬುದು ಇಂದಿನ ರಾಜಕೀಯದಲ್ಲಿ ಸ್ಪಷ್ಟವಾಗಿದೆ. ಒಬ್ಬರ ಮೇಲೆ ದಾಳಿ ನಡೆಸುವುದರಿಂದ ಏನೂ ಸಾಧ್ಯವಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com