ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿಗೆ ಸೇರಿದ 64 ಲಕ್ಷ ರು ಜಪ್ತಿ

ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಅವರ ಕಾರಿನಲ್ಲಿದ್ದ 64 ರು. ಲಕ್ಷವನ್ನು ಚುನಾವಣಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಅವರ ಕಾರಿನಲ್ಲಿದ್ದ 64 ರು. ಲಕ್ಷವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಪೊಲೀಸರು, ಕೆಎ 53 ಜಡ್ 9949 ನೋಂದಣಿ ಸಂಖ್ಯೆಯ ಕಾರನ್ನು ಜಪ್ತಿ ಮಾಡಿದ್ದಾರೆ. ಚಾಲಕ ಹರೀಶ್ ಎಂಬುವರನ್ನು ಬಂಧಿಸಿದ್ದಾರೆ.
ನಿಸರ್ಗ ಬಡಾವಣೆಯ ‘ನಿಸರ್ಗ ಕ್ಯಾಪಿಟಲ್’ ವಸತಿ ಸಮುಚ್ಚಯದಲ್ಲಿ ನಿಲ್ಲಿಸಿದ್ದ ಕಾರನ್ನು ತಪಾಸಣೆ ನಡೆಸಿತು. ಕಾರಿನ ಸೀಟಿನ ಕೆಳಗೆ ₹2 ಸಾವಿರ ಮುಖಬೆಲೆಯ ₹47.96 ಲಕ್ಷ ಮತ್ತು ₹500 ಮುಖಬೆಲೆಯ ₹16 ಲಕ್ಷ ಬಚ್ಚಿಡಲಾಗಿತ್ತು.
‘ರಾಜಣ್ಣ ಎಂಬುವರು ಎಂ.ವಿ. ಬಡಾವಣೆಯ ಟೌನ್‌ ಕೋ–ಆಪರೇಟಿವ್ ಬ್ಯಾಂಕಿನಿಂದ ಹಣ ಪಡೆದು, ಅದನ್ನು ನಿಸರ್ಗ ನಾರಾಯಣಸ್ವಾಮಿ ಅವರಿಗೆ ಕೊಡುವಂತೆ ಹೇಳಿದ್ದರು ಎಂದು ಹರೀಶ್‌ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.  ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಮತದಾರರಿಗೆ ಹಂಚಲು ತಂದಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com