ತೆಲುಗು ಭಾಷಿಕರ ಬೆಂಬಲ ಕೋರಿ ಸಿದ್ದರಾಮಯ್ಯ ಪತ್ರ, ಕೆಪಿಸಿಸಿ ನಿರಾಕರಣೆ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕರ್ನಾಟಕದಲ್ಲಿರುವ ತೆಲುಗು ಭಾಷಿಕರು ಬಿಜೆಪಿಯ ವಿರುದ್ಧ ಮತ ಹಾಕುವಂತೆ ಕರೆ ನೀಡಿದ ಒಂದು ದಿನದ ಬಳಿಕ....
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 
ವಿಜಯವಾಡ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಕರ್ನಾಟಕದಲ್ಲಿರುವ ತೆಲುಗು ಭಾಷಿಕರು ಬಿಜೆಪಿಯ ವಿರುದ್ಧ ಮತ ಹಾಕುವಂತೆ ಕರೆ ನೀಡಿದ ಒಂದು ದಿನದ ಬಳಿಕ ಆಂಧ್ರ ಪ್ರದೇಶ ರಾಜ್ಯ ಕಾಂಗ್ರೆಸ್ ಪಕ್ಷವು ’ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕೊಡದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿನ ತೆಲುಗು ಭಾಷಿಕರಲ್ಲಿ ವಿನಮ್ರವಾಗಿ ಮನವಿ ಮಾಡಿದ್ದಾರೆಂಬ ಅರ್ಥದ ಪತ್ರವೊಂದನ್ನು ಬಿಡುಗಡೆಗೊಳಿಸಿದೆ. 
ಈ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಕ್ತಾರರನ್ನು ಸಂಪರ್ಕಿಸಿದ ಎಕ್ಸ್ ಪ್ರೆಸ್ ಗೆ ಬೇರೆಯದೇ ಉತ್ತರ ಸಿಕ್ಕಿದೆ. ಸಿದ್ಧರಾಮಯ್ಯ ಅವರಾಗಲಿ, ಕೆಪಿಸಿಸಿ ಆಗಲಿ ಇಂತಹಾ ಯಾವ ಪತ್ರವನ್ನೂ ಬರೆದಿಲ್ಲ ಎಂದು ಮೂಲಗಳು ಹೇಳಿದೆ.ಆಂಧ್ರ ಕಾಂಗ್ರೆಸ್ ಬಿಡುಗಡೆಗೊಳಿಸಿದ ಪತ್ರವು ಸಿದ್ದರಾಮಯ್ಯ ಅಥವಾ ಕೆಪಿಸಿಸಿ ಬರೆದದ್ದಲ್ಲ ಎಂದು  ಕೆಪಿಸಿಸಿ ಮುಖಂಡರು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಎನ್. ರಘುವೀರ ರೆಡ್ಡಿ ಅವರನ್ನು ಈ ಸಂಬಂಧ ಕೇಳಲಾಗಿ ಅವರು ಇದಕ್ಕೆ ಯಾವ ಪ್ರತಿಕ್ರಿಯೆ ನಿಡಲು ನಿರಾಕರಿಸಿದ್ದಾರೆ. ಅದಾಗ್ಯೂ ಸಿದ್ದರಾಮಯ್ಯ ತಾವು ತೆಲುಗು ಮತದಾರರನ್ನು ತಮ್ಮತ್ತ ಸೆಳೆಯಲು ರೆಡ್ಡಿ  ಸಲಹೆಯಂತೆ ಪತ್ರ ಬರೆದಿದ್ದರೆಂದು ಆಂಧ್ರ ಕಾಂಗ್ರೆಸ್ ಕಛೇರಿಯ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ಕೆಪಿಸಿಸಿ ಏಕೆ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದಾಗ ಅವರು ಉತ್ತರಿಸಲು ನಿರಾಕರಿಸಿದ್ದಾರೆ.
ಸಿದ್ದರಾಮಯ್ಯ ಬರೆದರೆನ್ನಲಾಗುವ ಪತ್ರದ ಸಾರಾಂಶ ಹೀಗಿದೆ- "ನಾನು ನಿಮಗೆ ವಿಶೇಷವಾಗಿ ನೆನಪಿಸಬೇಕಾಗಿಲ್ಲ ಎಂದು ನನಗೆ ಗೊತ್ತು. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಣೆಯು ನಿಮಗೆ ಎದೆಯಲ್ಲಿ ಚೂರಿನೆಟ್ಟಂತೆ ನೋವುಂಟು ಮಾಡಿದೆ ಎನ್ನುವುದನ್ನು ನಾನು ಬಲ್ಲೆ. ಪ್ರಧಾನಿಗಳು ಸಂಸತ್ತಿನಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಸಂಸತ್ತುಅಂಗೀಕರಿಸುವ ಕಾಯ್ದೆಗೆ ಗೌರವ ತೋರಲಿಲ್ಲ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಅವಮಾನ ಮಾಡಿದೆ."
ಪ್ರಧಾನಿಗಳು ಹಿಂದೊಮ್ಮೆ ಪವಿತ್ರ ತಾಣ ತಿರುಪತಿಗೆ ಭೇಟಿ ನೀಡಿದ್ದಾಗ ತಾವು ರಾಜ್ಯದ ವಿಶೇಷ ಸ್ಥಾನಮಾನದ ಸಂಬಂಧ ನೀಡಿದ್ದ ಭರವಸೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿಶೇಷವೆಂದರೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರ ತಿರುಪತಿಯಲ್ಲಿ ಸಭೆ ನಡೆಸಿದಾಗ ಅವರು ಸಹ  ಇದೇ ಉದ್ಘಾರ ತೆಗೆದಿದ್ದರು.
ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಜೂನ್ 9, 2016 ರಂದು ನಡೆದಿದ್ದ ಒಂಭತ್ತು ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆಯಲ್ಲಿ ಸಹ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು ಎನ್ನುವುದನ್ನು ಪತ್ರ ಉಲ್ಲೇಖಿಸಿದೆ.
ಮೈನಿಂಗ್ ಮಾಫಿಯಾದಲ್ಲಿ ತೊಡಗಿರುವ ಗಾಲಿ ಜನಾರ್ಧನ ರೆಡ್ಡಿಯನ್ನು ಪುನಃ ವಿಧಾನಸಭೆಗೆ ಕರೆಸಲು ಬಿಕೆಪಿ ಹಾಗೂ ಜೆಡಿಎಸ್ ಕೂಡಿ ತಂತ್ರೆಅ ಹೆಣೆದಿದೆ. ಹೀಗಾಗಿ ಆಂಧ್ರ ಹಾಗೂ ತೆಲಂಗಾಣ ಮೂಲದ ತೆಲುಗು ಭಾಷಿಕರು ಯಾರೇ ಕರ್ನಾಟಕದಲ್ಲಿ ವಾಸವಿರಲಿ ಅವರು ಬಿಜೆಪಿಗೆ ಮರೆಯಲಾಗದ ಪಾಠ ಕಲಿಸಬೇಕು ಎನ್ನುವ ಸಂದೇಶದೊಡನೆ ಪತ್ರ ಕೊನೆಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com