ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ: ಸೋಲಿಲ್ಲದ ಸರದಾರ ರಾಮಲಿಂಗಾ ರೆಡ್ಡಿಗೆ ಹ್ಯಾಟ್ರಿಕ್ ಸಾಧಿಸುವ ಗುರಿ

ರಾಜಧಾನಿಯ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದಾಗಿರುವ ಬಿಟಿಎಂ ಬಡಾವಣೆಯಲ್ಲಿ ‘ಕೈ’ ಮತ್ತು ‘ಕಮಲ’ದ ಅಭ್ಯರ್ಥಿಗಳ ನಡುವಿನ ಹಣಾಹಣಿಯು ತೀವ್ರ...
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
Updated on: 
ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದಾಗಿರುವ ಬಿಟಿಎಂ ಬಡಾವಣೆಯಲ್ಲಿ ‘ಕೈ’ ಮತ್ತು ‘ಕಮಲ’ದ ಅಭ್ಯರ್ಥಿಗಳ ನಡುವಿನ ಹಣಾಹಣಿಯು ತೀವ್ರ ಕುತೂಹಲ ಮೂಡಿಸಿದೆ. ರಾಜಕೀಯ ಗರಡಿಯಲ್ಲಿ ಪಳಗಿರುವ ಪ್ರಭಾವಿ ಎದುರು ಈಗಷ್ಟೇ ತಾಲೀಮು ಶುರು ಮಾಡಿರುವವರು ಕಣಕ್ಕಿಳಿದಿದ್ದಾರೆ. 
ಬಿಟಿಎಂ ಎಂದರೇ ಬನ್ನೇರುಘಟ್ಟ, ತಾವರೆಕೆರೆ, ಮಡಿವಾಳ ಎಂದರ್ಥ, ಬೇರೇ ಪ್ರದೇಶಗಳಂತೆ ಇಲ್ಲಿಯ ಕಿರಿದಾದ ರಸ್ತೆ ಹಾಗೂ ಕೊಳಚೆ ಪ್ರದೇಶಗಳ ಸಮಸ್ಯೆ ಇದೆ, ಕೋರಮಂಗಲದಲ್ಲಿರುವ ಐಷಾರಾಮಿ ಸ್ಥಳ, ಕಮರ್ಷಿಯಲ್ ಹಬ್ ಗಳಿಂದಾಗಿ ಸಂಚಾರ ದಟ್ಟಣೆ ತೀವ್ರವಾಗಿದೆ.
ನಗರದ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ಸ್ಥಳವೆಂದರೇ ಸಿಲ್ಕ್ ಬೋರ್ಡ್ ಜಂಕ್ಷನ್,  ಟ್ರಾಫಿಕ್ ಸಮಸ್ಯೆ ಜೊತೆಗೆ  ಮಳೆ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ.
2017ರ ರಲ್ಲಿ ಈಜೀಪುರ ಅತಿ ಹೆಚ್ಚು ಪ್ರವಾಹಕ್ಕೊಳಗಾದ ವಾರ್ಡ್ ಆಗಿತ್ತು ರಾಜಕಾಲುವೆ ಒತ್ತುವರಿ ಯಾಗಿದೆ. ಹೀಗಿದ್ದರೂ ರಾಮಲಿಂಗಾ ರೆಡ್ಡಿ ಅವರ ರಾಜಕಾರಣಕ್ಕೆ ನೆಚ್ಚಿನ ಸ್ಥಳವಾಗಿದೆ ಇದು, 
2017 ರಲ್ಲಿ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ, ನಂತರ ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರ ಸಂಬಂಧಿ ಲಲ್ಲೇಶ್‌ ರೆಡ್ಡಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಲಲ್ಲೇಶ್‌ ರೆಡ್ಡಿ ಅವರು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. 
ಬಿಟಿಎಂ ಲೇಔಟ್‌ ವಾರ್ಡ್‌ ಕಾರ್ಪೋರೇಟರ್‌ ಕೆ.ದೇವದಾಸ್‌ ಜೆಡಿಎಸ್‌ನ ಹುರಿಯಾಳು. ಆದರೆ, ಕ್ಷೇತ್ರದಲ್ಲಿ ತೆನೆ ಪಕ್ಷಕ್ಕೆ ನಿರೀಕ್ಷಿತ ಬೆಂಬಲ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಯನಗರ ವಿಧಾನಸಭಾ ಕ್ಷೇತ್ರದಲ್ಲಿ 1989ರಿಂದ ಸತತವಾಗಿ ನಾಲ್ಕು ಗೆಲುವಿನ ಗೋಲ್‌ ಬಾರಿಸಿದ್ದ ರಾಮಲಿಂಗಾರೆಡ್ಡಿ ಅವರು ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬಿಟಿಎಂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಇಲ್ಲಿಯೂ ಎರಡು ಬಾರಿ ಜಯ ಗಳಿಸಿದ ಅವರು, ಮತ್ತೊಂದು ಗೆಲುವಿನ ಉಮೇದಿನಲ್ಲಿದ್ದು ಒಮ್ಮೆಯೂ ಸೋತಿಲ್ಲ ಎಂಬುದು ವಿಶೇಷ. 
ಕ್ಷೇತ್ರದಲ್ಲಿ ಒಟ್ಟು 2,70,493 ಮತದಾರರಿದ್ದು, ರೆಡ್ಡಿ ಮತ್ತು ತಿಗಳ ಸಮುದಾಯದ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಪರಿಶಿಷ್ಟ ಜಾತಿ, ಪಂಗಡ, ಕ್ರೈಸ್ತ, ಮುಸ್ಲಿಂ ಮತ್ತು ಇತರೆ ಹಿಂದುಳಿದ ಜನಾಂಗವೂ ಗಣನೀಯ ಸಂಖ್ಯೆಯಲ್ಲಿದೆ. ಈಶಾನ್ಯ ಭಾರತೀಯರು, ಕೇರಳಿಗರು ಸಹ ನೆಲೆ ಕಂಡುಕೊಂಡಿದ್ದಾರೆ. 
ಟಿಎಂ ಬಡಾವಣೆಯಲ್ಲಿನ ಹಲವು ಪ್ರದೇಶಗಳಲ್ಲಿನ ಜನರು ಮಳೆಗಾಲ ಶುರುವಾಯಿತೆಂದರೆ ಬೆಚ್ಚಿ ಬೀಳುತ್ತಾರೆ. ಪ್ರತಿಷ್ಠಿತ ಕೋರಮಂಗಲ 4ನೇ ಬ್ಲಾಕ್‌, ಎಸ್‌ಟಿ ಬೆಡ್‌, ಮಡಿವಾಳ ಆಜುಬಾಜಿನ ಜನವಸತಿ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತಿದೆ. ಮಳೆ ಅನಾಹುತದಿಂದ ಕೋಟ್ಯಂತರ ರೂ. ಆಸ್ತಿ-ಪಾಸ್ತಿಗೆ ನಷ್ಟವಾಗಿತ್ತು. ರಾಜಕಾಲುವೆಗಳ ಒತ್ತುವರಿಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.
ಟಿಎಂ ಲೇಔಟ್‌ ಕ್ಷೇತ್ರದಲ್ಲಿ 7 ವಾರ್ಡ್‌ಗಳಿದ್ದು, ಈ ಪೈಕಿ 5ರಲ್ಲಿ ಕಾಂಗ್ರೆಸ್‌ ಕಾರ್ಪೋರೇಟರ್‌ಗಳಿದ್ದಾರೆ. ಇನ್ನೆರಡು ಕಡೆ ಬಿಜೆಪಿ, ಜೆಡಿಎಸ್‌ ಸದಸ್ಯರಿದ್ದಾರೆ. ಆದರೆ ಈ ಬಾರಿ ರೆಡ್ಡಿ ಗೆಲುವು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com