ಚಾಮರಾಜಪೇಟೆ: ಯಾವುದೇ ರೀತಿಯಿಂದಾದರೂ ಜಮೀರ್ ಖಾನ್ ಸೋಲಿಸಲು ಮಾಜಿ ಪ್ರಧಾನಿ ಪ್ರತಿಜ್ಞೆ

ರಾಜಕಾರಣದಲ್ಲಿ ಗೆಳೆತನ ಎಂಬುದು ಎಂದಿಗೂ ಶಾಶ್ವತವಾಗಿರುವುದಿಲ್ಲ ಎಂಬುದಕ್ಕೆ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರೇ ಸ್ಪಷ್ಟ ನಿದರ್ಶನ ಎಂಬಂತಿದ್ದಾರೆ.
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್
Updated on: 

ಬೆಂಗಳೂರು : ರಾಜಕಾರಣದಲ್ಲಿ ಗೆಳೆತನ ಎಂಬುದು ಎಂದಿಗೂ ಶಾಶ್ವತವಾಗಿರುವುದಿಲ್ಲ ಎಂಬುದಕ್ಕೆ ಚಾಮರಾಜಪೇಟೆಯ  ಶಾಸಕ ಜಮೀರ್ ಅಹ್ಮದ್  ಖಾನ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರೇ ಸ್ಪಷ್ಟ ನಿದರ್ಶನ ಎಂಬಂತಿದ್ದಾರೆ.

 2006ರಲ್ಲಿ ಅವರಿಬ್ಬರ ನಡುವೆ ಬಾಂಧವ್ಯ ಏರ್ಪಟ್ಟಿತ್ತು. ಹೆಚ್. ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗುವಲ್ಲಿಯೂ  ಜಮೀರ್ ಅಹ್ಮದ್  ಖಾನ್  ಮಹತ್ವದ ಪಾತ್ರ ವಹಿಸಿದ್ದರು.

ಆದರೆ,  ರಾಜ್ಯಸಭಾ ಚುನಾವಣೆಯಲ್ಲಿ   ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸಿದ್ದ ನಂತರ ಕುಮಾರಸ್ವಾಮಿ ಅವರ ತಂದೆ ಹೆಚ್. ಡಿ. ದೇವೇಗೌಡರು, ಹಿಂದಿನಿಂದ ಚೂರಿ ಇರಿಯುವವನು ಎಂದು ಜಮೀರ್ ಅಹ್ಮದ್  ಖಾನ್ ಅವರನ್ನು ಕರೆಯುತ್ತಿದ್ದರು.

 ಈ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷವನ್ನು ಎದುರಿಸಲಾಗಿದ್ದಾರೆ.  ಜಮೀರ್ ಅವರನ್ನು ಸೋಲಿಸಲು ಮಾಜಪ್ರಧಾನಿ ಹೆಚ್. ಡಿ. ದೇವೇಗೌಡರು ಶಪಥ ತೊಟ್ಟಿದ್ದಾರೆ.

ಒಂದು ವೇಳೆ ತಾನೂ ಸೋತರೆ ರುಂಡವನ್ನು ಕತ್ತರಿಸಿಕೊಳ್ಳುವುದಾಗಿ ಜಮೀರ್ ಹೇಳಿಕೆ ನೀಡಿದ್ದು, ಚುನಾವಣಾ ಅಖಾಡ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.2005ರ ಉಪ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ ಜಮೀರ್ ಅಂದಿನಿಂದ ಇಂದಿನವರೆಗೂ ತಿರುಗಿ ನೋಡಿಲ್ಲ.  ಕೋಟ್ಯಾಧೀಶ  ಅಭ್ಯರ್ಥಿಗಳಲ್ಲಿ ಜಮೀರ್ ಕೂಡಾ ಒಬ್ಬರಾಗಿದ್ದಾರೆ.

 ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದವರಲ್ಲಿ ಇವರು ಕೂಡಾ ಒಬ್ಬರಾಗಿದ್ದು, ಕಾಂಗ್ರೆಸ್ ಪಕ್ಷ ಸೇರಿ ಚುನಾವಣೆ ಎದುರಿಸುತ್ತಿದ್ದಾರೆ.

ಬಹುಸಂಖ್ಯಾತ ಮುಸ್ಲಿಂರು ಈ ಕ್ಷೇತ್ರದಲ್ಲಿದ್ದು, ಜೆಡಿಎಸ್ ನಿಂದ ಬಿ. ಕೆ. ಅಲ್ತಾಪ್ ಖಾನ್ ಸ್ಪರ್ಧಿಸಿದ್ದಾರೆ. ಇದರಿಂದಾಗಿ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. ಆದಾಗ್ಯೂ,  ಜಮೀರ್ ಅವರನ್ನು  ಸೋಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕ್ಷೇತ್ರದಲ್ಲಿನ ಹಲವು ಕೊಳಚೆ ಪ್ರದೇಶಗಳಲ್ಲಿ ಜಮೀರ್ ಪರ  ಒಲವು ಹೆಚ್ಚಿದೆ.

ದೇವೇಗೌಡರ ಸವಾಲು ಒಪ್ಪಿರುವ ಜಮೀರ್ ಅಹ್ಮದ್ ಖಾನ್, ದೇವೇಗೌಡರು ಯಾವ ಮುಸ್ಲಿಂ ಮುಖಂಡರನ್ನೇ  ಕರೆದು ತರಲಿ, ಯಾವುದೇ ಭಯ ಪಡುವುದಿಲ್ಲ. ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ ನಿಂತಲೂ  ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜಮೀರ್ ಹೇಳುತ್ತಾರೆ.

ಬಿಜೆಪಿಯಿಂದ ಮಾಜಿ ಮೇಯರ್  ಎಂ, ಲಕ್ಷ್ಮೀನಾರಾಯಣ ಸ್ಪರ್ಧಿಸಿದ್ದಾರೆ. ಗೌಡರು ಮುಸ್ಲಿಂರ ಮತ ವಿಭಜನೆಯಾಗಿ ಬಿಜೆಪಿಗೆ ಲಾಭವಾಗಲಿ ಎಂಬ ನಡೆ ಹೊಂದಿದ್ದು, ಜಮೀರ್ ಸೋಲಿಸಲು ಇನ್ನಿಲ್ಲದಂತಹ ಯೋಜನೆ ರೂಪಿಸಿದ್ದಾರೆ.  ಎಂದು ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

ಕಾಂಗ್ರೆಸ್ ಪಕ್ಷದ ಮುಖಂಡನೇ ತಮ್ಮ ವಿರುದ್ಧ ಸ್ಪರ್ಧಿಸಿರುವುದು  ಜಮೀರ್ ಅಹ್ಮದ್ ಖಾನ್  ಆತಂಕಕ್ಕೆ ಕಾರಣವಾಗಿದೆ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬೆಂಬಲದೊಂದಿಗೆ ತಾವೂ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com