ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ಪಿಪಿಪಿ ಎಂದರೆ ಪಕೋಡಾ, ಪ್ರೈಸ್ ಹೈಕ್, ಪ್ರಿಸನ್; ಪ್ರಧಾನಿ ಮೋದಿಗೆ ಸಿಎಂ ತಿರುಗೇಟು

ಕಾಂಗ್ರೆಸ್ ಬರೀ ಪಿಪಿಪಿ (ಪಂಜಾಬ್, ಪುದುಚೇರಿ, ಪರಿವಾರ) ಪಕ್ಷವಾಗಿ ಉಳಿಯಲಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಿರುಗೇಟು ನೀಡಿದ್ದಾರೆ...
ಬೆಂಗಳೂರು: ಕಾಂಗ್ರೆಸ್ ಬರೀ ಪಿಪಿಪಿ (ಪಂಜಾಬ್, ಪುದುಚೇರಿ, ಪರಿವಾರ) ಪಕ್ಷವಾಗಿ ಉಳಿಯಲಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಿರುಗೇಟು ನೀಡಿದ್ದಾರೆ. 
ಪ್ರಧಾನಿ ಮೋದಿಯವರ ಟೀಕೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಿರುಗೇಟು ನೀಡಿರುವ ಅವರು, ಪಿಪಿಪಿ ಎಂದರೆ ಪ್ರಿಸನ್ (ಜೈಲು) ಪ್ರೈಸ್ ಹೈಕ್ (ಬೆಲೆ ಏರಿಕೆ), ಪಕೋಡಾ ಈ ವಿಚಾರದಲ್ಲಿ ಬಿಜೆಪಿ ಚಾಂಪಿಯನ್ ಎಂದು ಟೀಕಿಸಿದ್ದಾರೆ.
ಆತ್ಮೀಯ ಮೋದಿಯವರೇ, ನೀವು ಪಿಪಿಪಿ ಎಂಬ ಹೊಸ ವ್ಯಾಖ್ಯೆ ನೀಡಿದ್ದೀರಿ ಎಂದು ಕೇಳಿದೆ. ಸರ್, ನಾವು ಪ್ರಜಾಪ್ರಭೂತ್ವದಲ್ಲಿ ಮೂರು 'ಪಿ'ಗಳ ವಿಷಯದಲ್ಲಿ ಚಾಂಪಿಯನ್ ಗಳು -'ಆಫ್ ದಿ ಪೀಪಲ್, ಬೈದಿ ಪೀಪಲ್, ಫಾರ್ ದಿ ಪೀಪಲ್' (ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ), ಆದರೆ, ನಿಮ್ಮ ಪಕ್ಷವು 'ಪ್ರಿಸನ್ (ಜೈಲು), ಪ್ರೈಸ್ ಹೈಕ್ (ಬೆಲೆ ಏರಿಕೆ), ಪಕೋಡಾ' ವಿಚಾರದಲ್ಲಿ ಚಾಂಪಿಯನ್, ನಾನು ಹೇಳಿದ್ದು ಸರಿಯಿದೆ ಅಲ್ಲವೇ ಸರ್? ಎಂದು ವ್ಯಂಗ್ಯವಾಡಿದ್ದಾರೆ. 

ನಿನ್ನೆ ಗದಗದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಿಪಿಪಿ (ಪುದಿಚೇರಿ, ಪಂಜಾಬ್ ಹಾಗೂ ಪರಿವಾರ ಕಾಂಗ್ರೆಸ್) ಆಗಿ ಉಳಿಯುತ್ತದೆ ಎಂದು ಹೇಳಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com