ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗಣಿ ದಣಿಗಳಿಗೆ ಹಾಗೂ ಅವರ ಆಪ್ತರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಮರ್ಥನೆ ನೀಡಿದ್ದಾರೆ
ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲುವುದು ನಮಗೆ ಮಹತ್ವವಾಗಿದೆ ಹೀಗಾಗಿ , ದಾವಣಗೆರೆಯ ಹರಪ್ಪನಹಳ್ಳಿಯಿಂದ ಕರುಣಾಕರ ರೆಡ್ಜಿಗೆ. ಬಳ್ಳಾರಿ ನಗರದಿಂದ ಸೋಮಶೇಖರ ರೆಡ್ಜಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಶ್ರೀರಾಮುಲು ಸೇರಿದಂತೆ ಬಳ್ಳಾರಿಯ ಮಾಜಿ ಮತ್ತು ಹಾಲಿ ಶಾಸಕರು ನಮ್ಮೊಂದಿಗಿದ್ದಾರೆ, ಅದರಲ್ಲಿ ಇಬ್ಬರು ಪಕ್ಷ ತೊರೆದಿದ್ದಾರೆ, ಉಳಿದವರಿಗೆ ಟಿಕೆಟ್ ನೀಡಲಾಗಿದೆ. ಅವರೆಲ್ಲಾ ಖಚಿವಾಗಿ ಗೆಲ್ಲುತ್ತಾರೆ, ನಮಗೆ ಗೆಲ್ಲುವುದಷ್ಟೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ಕೋರ್ಟ್ ತಡೆ ನೀಡಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಯಡಿಯೂರಪ್ಪ ಹಿಂದಿನದನ್ನು ನಾನು ಮರೆತಿಲ್ಲ ಎಂದಿದ್ದಾರೆ,ರೆಡ್ಡಿ ಸಹೋದರರ ಹಿಂದಿವ ಘಟನೆಗಳನ್ನು ನಾನು ಮರೆಯುವುದಿಲ್ಲ, ಭವಿಷ್ಯದಲ್ಲಿ ಎಚ್ಚರಿಕೆಯಿಂದಿರುತ್ತೇನೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ನಡೆದದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಬೇಲ್ ಗಾಗಿ ಲಂಚ ಪ್ರಕರಣದಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ಜಡ್ಜ್ ಗೆ ಲಂಚ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬೇಲ್ ಡೀಲ್ ಪ್ರಕರಣದಲ್ಲಿ ನಾನು ವಿರುದ್ಧದ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಸೋಮಶೇಖರ್ ರೆಡ್ಡಿ ಸದ್ಯ ಜಾಮೀನನ ಮೇಲೆ ಹೊರಗಿದ್ದಾರೆ,
ಈ ಸಂಬಂಧ ಸಿಎಂ ಅವರನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ ಆನಂದ್ ಸಿಂಗ್ ಅವರ ವಿರುದ್ಧವೂ ಕೇಸ್ ಗಳಿವೆ, ಹಾಗಿದ್ದರೂ ಸಿಎಂ ಏಕೆ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ,
ಸಾರ್ವಜನಿಕವಾಗಿ ಬಿಜೆಪಿ ಜನಾರ್ದನ ರೆಡ್ಡಿಯೊಂದಿಗೆ ಅಂತರ ಕಾಯ್ದುಕೊಂಡಿದ್ದೇವೆ, ಜನಾರ್ದನ ರೆಡ್ಡಿ ಅವರ ಜೊತೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಹೇಳಿಕೆಗೂ ಮುನ್ನ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದರು.
ರೆಡ್ಡಿ ಸಹೋದರರ ವಿರುದ್ಧ ಇದ್ದ ಆರೋಪಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ ಎಂದು ಹೇಳಿದ್ದಾರೆ.