ಅಮಿತ್ ಷಾ
ರಾಜಕೀಯ
ಯಡಿಯೂರಪ್ಪ ಸಿಎಂ ಆಗುತ್ತೇನೆ ಎಂದು ಹೇಳುತ್ತಿರುವುದು ಅತೀ ವಿಶ್ವಾಸವಲ್ಲ, ಆತ್ಮ ವಿಶ್ವಾಸ: ಅಮಿತ್ ಶಾ
ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮೇ 12 ರಂದು ಮತದಾನ ನಡೆಯಲಿದ್ದು ಎಲ್ಲಾ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಷ್ಟು ದಿನ ಪ್ರಚಾರ...
ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮೇ 12 ರಂದು ಮತದಾನ ನಡೆಯಲಿದ್ದು ಎಲ್ಲಾ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇಷ್ಟು ದಿನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಬಿಜೆಪಿ ಚಾಣಾಕ್ಯ ಅಮಿತ್ ಶಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರಚಾರ ಕಾರ್ಯ ಮುಗಿದಿದೆ,.ಬಿಜೆಪಿಗೆ ಇರುವ ಅವಕಾಶಗಳು ಏನು?
ಇಲ್ಲಿಯವರೆಗೂ ಸುಮಾರು 400 ರ್ಯಾಲಿ ಹಾಗೂ ರೋಡ್ ಶೋ ನಡೆಸಿದ್ದೇವೆ, ನಮ್ಮ ಬೆಂಬಲಿಗರು 56 ಸಾವಿರ ಬೂತ್ ಗಳಲ್ಲಿ ತಳ ಮಟ್ಟದ ಸಮೀಕ್ಷೆ ನಡೆಸಿದ್ದಾರೆ, ನಾವು 130 ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುತ್ತೇವೆ.
ಕನ್ನಡ ಮತ್ತು ಸಂಸ್ಕೃತಿ ಈ ಚುನಾವಣಾ ಪ್ರಚಾರದಲ್ಲಿ ಮಹತ್ವ ವಹಿಸಿತ್ತು?
ಇಂದು ಕಾಂಗ್ರೆಸ್ ನಾಯಕರು ಕನ್ನಡ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತನಾಡುತ್ತಾರೆ, ಕಳೆದ ಐದು ವರ್ಷಗಳಿಂದ ಅವರ ಕನ್ನಡ ಪ್ರೇಮ ಮತ್ತು ಇತಿಹಾಸ ಎಲ್ಲಿ ಹೋಗಿತ್ತು? ಕರ್ನಾಟಕ ಪರಂಪರೆಯ ತವರು, ಕೆಂಪೇಗೌಡ, ಕೃಷ್ಣ ದೇವರಾಯ, ಮದಕರಿ ನಾಯಕ, ಕಿತ್ತೂರು ರಾಣಿ ಚೆನ್ನಮ್ಮ ವಿಶ್ವೇಶ್ವರಯ್ಯ ಅವರಂತ ನಾಯಕರನ್ನು ಹಾಗೂ ಕುವೆಂಪು. ದ.ರಾ ಬೇಂದ್ರೆ ಅವರಂತ ಕವಿಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ನವರು ಕೇವಲ ಟಿಪ್ಪು ಜಯಂತಿ ಮತ್ತು ಬಹಮನಿ ಸುಲ್ತಾನನ ಹುಟ್ಟುಹಬ್ಬ ಆಚರಿಸಲು ಬಯಸುತ್ತದೆ. ಅವರಿಗೆ ಕನ್ನಡ ಸಂಸ್ಕೃತಿಯ ಮೇಲೆ ಆಸಕ್ತಿಯಿಲ್ಲ, ಈ ವಿಚಾರ ಜನರಿಗೆ ಗೊತ್ತು.
ಸರ್ಕಾರ ರಚಿಸಲು ಶಾಸಕರ ಸಂಖ್ಯೆ ಕಡಿಮೆಯಾದಲ್ಲಿ ಜೆಡಿಎಸ್ ಸಹಾಯ ತೆಗೆದುಕೊಳ್ಳುವಿರಾ?
ನಾವು 130 ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ, ಹೀಗಾಗಿ ಯಾರೊಂದಿಗೂ ಮೈತ್ರಿ ಅಗತ್ಯವಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದರೇ ನಿಮ್ಮ ಮೊದಲ ಆದ್ಯತೆ ಏನು?
ಎಲ್ಲಾ ರೀತಿಯ ರೈತರ ಸಾಲ ಮನ್ನಾ ಮಾಡುತ್ತೇವೆ. ರೈತರ ಒಣಭೂಮಿಗೆ 10 ಸಾವಿರ ರು. ಧನ ಸಹಾಯ ನೀಡುತ್ತೇವೆ, ಎಲ್ಲಾ ಧರ್ಮ ಹಾಗೂ ಸಮುದಾಯದ ಹೆಣ್ಣು ಮಕ್ಕಳಿಗೆ ಮಂಗಳ ಸೂತ್ರ ಮತ್ತು 25 ಸಾವಿರ ರು ನಗದು ಹಣನೀಡುತ್ತೇವೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಿ, ನಾವು ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ.
ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ 3 ಸಿಎಂಗಳನ್ನು ನೀಡಿತ್ತು. ಈ ಭಾರಿಯೂ ಯಡಿಯೂರಪ್ಪ ಕಡಿಮೆ ಅವಧಿಗೆ ಸಿಎಂ ಆಗಲಿದ್ದಾರಾ?
ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ, ಅವರು 5 ವರ್ಷ ಅಧಿಕಾರ ಪೂರ್ಣಗೊಳಿಸುತ್ತಾರೆ, ಆ ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ.
ಈ ಭಾರಿ ನಾನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೋದಲೆಲ್ಲಾ ಹೇಳುತ್ತಿದ್ದಾರೆ ಇದು ಅತಿ ವಿಶ್ವಾಸವಲ್ಲವೇ?
ಅದು ಆತೀ ವಿಶ್ವಾಸವಲ್ಲ, ಆತ್ಮ ವಿಶ್ವಾಸ.
ರೈತಲ ಸಾಲಮನ್ನಾ ಮಾಡುವವರು ಯಾರು? ಕೇಂದ್ರ ಅಥವಾ ರಾಜ್ಯ?
ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ರಾಜ್ಯ ಸರ್ಕಾರವೇ ರೈತರ ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 10 ದಿನದಲ್ಲಿ ಸಾಲಮನ್ನಾ ಮಾಡುತ್ತೇವೆ.
ಪ್ರಚಾರದ ವೇಳೆ ತೀರಾ ವಯಕ್ತಿಕವಾಗಿ ವಾಗ್ದಾಳಿ ನಡೆಸಲಾಯಿತಲ್ಲ?
ಚುನಾವಣಾ ಪ್ರಚಾರದ ವೇಳೆ ಗಂಟೆಗಟ್ಟಲೇ ಭಾಷಣ ಮಾಡಿದ್ದೇವೆ, ಕೆಲವೊಮ್ಮೆ ವಯಕ್ತಿಕವಾಗಿ ವಾಗ್ದಾಳಿ ನಡೆಸಿರಬಹುದು, ಆದರೆ ಅದನ್ನು ಮಾಧ್ಯಮಗಳು ಮತ್ತೆ ಮತ್ತೆ ಪ್ರಸಾರ ಮಾಡಿದವು.
ಆರ್ ಆರ್ ನಗರ ವೋಟರ್ ಐಡಿ ಪ್ರಕರಣ ಎಲ್ಲಾ ಕ್ಷೇತ್ರಗಳಲ್ಲಿಯೂ ಆಗಿದೆಯೇ?
ಇದೇ ರೀತಿ ಹೋಲಿಕೆಯಾಗುವ ಪ್ರಕರಣಗಳು ಬೇರೆ ಕ್ಷೇತ್ರಗದಲ್ಲಿ ನಡೆದಿರಬಹುದು, ಆದರೆ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ,
224 ಕ್ಷೇತ್ರಗಳಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲ?
ನಾವು ಧರ್ಮದ ಆಧಾರದ ಮೇಲೆ ಟಿಕೆಟ್ ನೀಡಿಲ್ಲ, ನಿಮ್ಮ ಹಾಗೆ ನಾವು ವಿಮರ್ಶೆ ಮಾಡುವುದಿಲ್ಲ, ಆ ರೀತಿ ಯೋಚನೆ ಮಾಡುವುದು ತಪ್ಪು.
ನಾನೇ ಡಿಸಿಎಂ ಎಂದು ಶ್ರೀರಾಮುಲು ಹೇಳುತ್ತಿದ್ದಾರಲ್ಲ?
ಇದು ಚರ್ಚೆ ಮಾಡುವ ಸಮಯವಲ್ಲ, ನಮ್ಮ ಗಮನವೇನಿದ್ದರೂ ಗೆಲ್ಲುವ ಕಡೆ ಮಾತ್ರ,.
ಜನಾರ್ದನ ರೆಡ್ಡಿ ಜೊತೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದ್ರೀರಿ?
ಅದೇ ವಾಕ್ಯಕ್ಕೆ ನಾನು ಬದ್ದನಾಗಿದ್ದೇನೆ,ಜನಾರ್ಧನ ರೆಡ್ಡಿ ಜೊತೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ,
ಎನ್ ಡಿ ಎ ಸರ್ಕಾರ ಕರ್ನಾಟಕಕ್ಕಾಗಿ ಚೂರು ಎನು ಸಹಾಯ ಮಾಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ?
ಕಳೆದ 4 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ 88 ಸಾವಿರ ಕೋಟಿ ಯಲ್ಲಿ ಕರ್ನಾಟಕ ಸರ್ಕಾರಕ್ಕೆ 3 ಲಕ್ಷ ಕೋಟಿ ರು ಅನುದಾನವನ್ನು ಪ್ರಧಾನಿ ನೀಡಿದ್ದಾರೆ..

