ನಾವು ದೇಗುಲ ನಿರ್ಮಾಣ ಮಾಡಿದರೆ, ಬಿಜೆಪಿ ದೇವರನ್ನೇ ಹೈಜಾಕ್ ಮಾಡಿತು; ಸಚಿವ ರಾಮಲಿಂಗಾ ರೆಡ್ಡಿ

ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದ್ದು, ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳ ನಾಯಕರು ತಲೆ ಬಿಸಿಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಮಾತ್ರ ಕೂಲ್ ಆಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ...
ಗೃಹ ಸಚಿವ ರಾಮಲಿಂಗಾ ರೆಡ್ಡಿ
ಗೃಹ ಸಚಿವ ರಾಮಲಿಂಗಾ ರೆಡ್ಡಿ
Updated on: 
ಬೆಂಗಳೂರು; ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದ್ದು, ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳ ನಾಯಕರು ತಲೆ ಬಿಸಿಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಮಾತ್ರ ಕೂಲ್ ಆಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 
ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶದನಲ್ಲಿ ಮಾತನಾಡಿರುವ ಅವರು, 6 ಶಾಸಕರು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿರುವ ಸಾಕಷ್ಟು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸುವುದು ಖಚಿತ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಖಚಿತ ಎಂದು ಹೇಳಿದ್ದಾರೆ. 
ನಿಮ್ಮ ಸರ್ಕಾರ ಮತ್ತೆ ಏಕೆ ಅಧಿಕಾರಕ್ಕೆ ಬರಬೇಕು... ಈ ಬಗ್ಗೆ ಮೂರು ಅಂಶಗಳನ್ನು ಹೇಳುವಿರಾ? 
ಮೊದಲನೆಯದಾಗಿ ಹೇಳುವುದಾದರೆ, 2013ರ ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ್ದ ಎಲ್ಲಾ ಭರವಸೆಗಳನ್ನೂ ಪೂರ್ಣಗೊಳಿಸಿದ್ದೇವೆ. ಎರಡನೆಯದಾಗಿ ಅಭಿವೃದ್ಧಿ, ಬಂಡವಾಳ, ಕೈಗಾರಿಗೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಭ್ರಷ್ಟಾಚಾರ ಮುಕ್ತ ಸರ್ಕಾರ ನಡೆಸುವಲ್ಲಿ ಈ ಹಿಂದಿದ್ದ ಬಿಜೆಪಿ ಸರ್ಕಾರಕ್ಕಿಂತಲೂ ಉತ್ತಮವಾಗಿ ಸರ್ಕಾರ ನಡೆಸಿದ್ದೇವೆ. ಮೂರನೆಯದು ನಮ್ಮ ಸರ್ಕಾರ ಜಾರಿಗೆ ತಂದ ಕಲ್ಯಾಣ ಯೋಜನೆಗಳು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು ಮತ್ತು ಬಡವರಿಗೆ ಲಾಭ ತಂದಿದೆ. 
ಬೆಂಗಳೂರಿನಲ್ಲಿ ಗೆಲವು ಸಾಧಿಸಲು ಕಾಂಗ್ರೆಸ್ ಮಾಡುತ್ತಿರುವ ಯೋಜನೆಗಳೇನು?
ಮೂಲಭೂತ ಸೌಕರ್ಯ ನಮ್ಮ ಪ್ರಮುಖ ಕಾಳಜಿಯಾಗಿದೆ. ಪ್ರಮುಖವಾಗಿ ಉಪನಗರಗಳಲ್ಲಿ. ಸಂಚಾರ ಕಾಳಜಿ ಹೇಗೆ ಎಂಬುದು ನಮಗೆ ಗೊತ್ತಿದೆ. ಮತ್ತು ಎಸ್.ಎಂ.ಕೃಷ್ಣ ಆಡಳಿತದ ಬಳಿಕ ರಸ್ತೆ ಅಗಲೀಕರಣ ಕಾರ್ಯಗಳು ಸ್ಥಗಿತಗೊಂಡಿದ್ದವು. ಇದೀಗ ನಾವು ಮೆಟ್ರೋವನ್ನು ಅವಲಂಬಿಸಿದ್ದು, ಸಂಚಾರ ಸಗಮಕ್ಕಾಗಿ ದೊಡ್ಡ ದೊಡ್ಡ ಮೇಲ್ಸೇತುವೆಗಳನ್ನು ನಿರ್ಮಿಸಿದ್ದೇವೆ. ಚರಂಡಿ ನೀರು, ಕೆರೆಗಳು ಮತ್ತು ಮಳೆ ನೀರು ಕೊಯ್ಲು ನಮ್ಮ ಪ್ರಮುಖ ಅಜೆಂಡಾವಾಗಿದೆ. ಈಗಾಗಲೇ ಹಲವು ಕಾನೂನುಗಳಿದ್ದು, ಅವುಗಳು ಕಾರ್ಯರೂಪಕ್ಕೆ ಬರಬೇಕಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದು ಸಂಘಟನೆ ನಾಯಕರನ ಬಂಧನ ರಾಜಕೀಯ ಪ್ರೇರಿತವೇ? 
ಪ್ರಕರಣ ಸಂಬಂಧ ಯಾವುದೇ ಪಕ್ಷಗಳೊಂದಿಗೆ ನಂಟು ಹೊಂದಿರದ ಎಸ್ಐಟಿ ತಂಡವನ್ನು ನಾವು ರಚನೆ ಮಾಡಿದ್ದೇವೆ. ಹಿಂದಿದ್ದ ಸರ್ಕಾರದ ಸಂದರ್ಭದಲ್ಲಿಯೂ ಅಧಿಕಾರದಲ್ಲಿದ್ದ ಅಧಿಕಾರಿಗಳೊಂದಿಗೆ ಎಸ್ಐಟಿ ತಂಡವನ್ನು ರಚನೆ ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರವನ್ನು ಬರೆಯಲಾಗಿತ್ತು. ಎಸ್ಐಟಿ ತನಿಖೆಯಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ.
ಚುನಾವಣೆಯಲ್ಲಿ ಹಿಂದುತ್ವವೇ ಪ್ರಮುಖ ಅಜೆಂಡಾವಾಗಿದ್ದು, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ನಾವೂ ಕೂಡ ಹಿಂದುಗಳೇ. ಸಂಘ ಪರಿವಾರಗಳೇನು ಹಿಂದೂಗಳ ಗುತ್ತಿಗೆ ಪಡೆದಿಲ್ಲ. ಅವರಿಗಿಂತಲೂ ನಾವು ಹೆಚ್ಚು ಹಿಂದುಗಳು. ನಾನು ದೇಗುಲಗಳನ್ನು ನಿರ್ಮಾಣ ಮಾಡಿದ್ದರೆ, ಬಿಜೆಪಿಯವರು ದೇವರನ್ನೇ ಹೈಜಾಕ್ ಮಾಡಿದರು. ದೇಶದ ಸ್ವಾತಂತ್ರ್ಯ, ಕಳೆದ 60 ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಪಕ್ಷ ಪಟ್ಟಿದ್ದ ಶ್ರಮದ ಬಗ್ಗೆ ಕಾಂಗ್ರೆಸ್ ಮಾತನಾಡಬಹುದು. ಆದರೆ, ಬಿಜೆಪಿ ಇದರಲ್ಲಿ ಯಾವುದೇ ಪಾತ್ರವನ್ನೂ ಹೊಂದಿಲ್ಲ. ಆದರೂ, ದೇಗುಲ, ಗೋವು ಹಾಗೂ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. 
ಸಿದ್ದರಾಮಯ್ಯ ಅವರ ಕನ್ನಡದ ಮೇಲಿನ ಪ್ರೀತಿ ಕನ್ನಡೇತರ ಮತದಾರರಿಗೆ ನೋವುಂಟು ಮಾಡಲಿದೆಯೇ? 
ನಾನು ಕನ್ನಡೇತರ ಗುಂಪಿಗೆ ಸೇರಿದ ವ್ಯಕ್ತಿ. ಆದರೂ ನಾನು ಕನ್ನಡಿಗ. ನಮ್ಮ ತಾಯಿ ಭಾಷೆ ಭಿನ್ನವಿರಬಹುದು. ಆದರೆ, ಶತಮಾನಗಳಿಂದಲೂ ನಾವು ಕರ್ನಾಟಕದಲ್ಲಿದ್ದೇವೆ. ತೆಲುಗು ಭಾಷೆ ಮಾತನಾಡಿರುವ ಕುಟುಂಬಗಳು ಕಳೆದ 700-800 ವರ್ಷಗಳಿಂದರೂ ರಾಜ್ಯದಲ್ಲಿ ನೆಲೆಯೂರಿದೆ. ವಲಸೆ ಬಂದಿರುವವವರಿಗೆ ನೋವಾಗಬಹುದು. ಆದರೆ, ಎಲ್ಲರಿಗೂ ಅಲ್ಲ. 
ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಸಂಪುಟದಲ್ಲಿರುವ ಐವರು ಸಂಕಷ್ಟವನ್ನು ಎದುರಿಸಲಿದ್ದಾರೆಂದು ನಿಮ್ಮ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ಹೇಳಿಕೊಂಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಇತರೆ ಜಿಲ್ಲೆಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಾಗಿಯೇ ಇದೆ. 
ಬಿಜೆಪಿ ನಿಮ್ಮ ಫೋನ್'ನ್ನು ಕದ್ದಾಲಿಕೆ ಮಾಡುತ್ತಿದೆ ಎಂದು ನೀವು ಆರೋಪ ಮಾಡಿದ್ದಿರಿ. ನಿಮ್ಮ ಆರೋಪಕ್ಕೆ ನೀವು ಬದ್ಧರಾಗಿದ್ದೀರಾ? 
ಕೇಂದ್ರ ನಮ್ಮ ಫೋನ್'ಗಳನ್ನು ಕದ್ದಾಲಿಕೆ ಮಾಡುತ್ತಿದೆ. ಕ್ರಿಮಿನಲ್ ಗಳ ಫೋನ್'ಗಳನ್ನು ಕದ್ದಾಲಿಕೆ ಮಾಡುವುದನ್ನು ಒಪ್ಪಿಕೊಳ್ಳಬಹುದು. ಆದರೆ, ರಾಜಕೀಯ ದುರುದ್ದೇಶಗಳಿಗೆ ಇಂದು ಕದ್ದಾಲಿಕೆ ಮಾಡಲಾಗುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ರಾಮಲಿಂಗಾ ರೆಡ್ಡಿಯವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com