ಪಕ್ಷಗಳು, ಅಭ್ಯರ್ಥಿಗಳ ವೆಚ್ಚದಲ್ಲಿ ಕರ್ನಾಟಕ ಚುನಾವಣೆ ಹೆಚ್ಚು ದುಬಾರಿ: ಸಮೀಕ್ಷೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ಮಾಡಿದ್ದ ವೆಚ್ಚದ ಆಧಾರದಲ್ಲಿ ದೇಶದಲ್ಲೇ "ಅತೀ ದುಬಾರಿ" ಚುನಾವಣೆಯಾಗಿದೆ ಎಂದು ಸಂಶೋಧನಾ ಸಂಸ್ಥೆಯ ವಿಶ್ಲೇಷಣೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ :ಕರ್ನಾಟಕ  ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ಮಾಡಿದ್ದ  ವೆಚ್ಚದ ಆಧಾರದಲ್ಲಿ ದೇಶದಲ್ಲೇ   "ಅತೀ ದುಬಾರಿ" ಚುನಾವಣೆಯಾಗಿದೆ ಎಂದು ಸಂಶೋಧನಾ ಸಂಸ್ಥೆಯ ವಿಶ್ಲೇಷಣೆ ತಿಳಿಸಿದೆ.

ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ  ಹಣದ ಹೊಳೆಯೇ ಹರಿದಿದ್ದು,  ಬಹು ಶಿಸ್ತಿನ ಅಭಿವೃದ್ಧಿ, ಸಂಶೋಧನೆ,  ಚಿಂತನೆಗೆ  ಯಾವುದೇ ಲಾಭವಾಗಿಲ್ಲ ಎಂದು  ಸೆಂಟರ್ ಫಾರ್ ಮಿಡಿಯಾ ಸ್ಟಡೀಸ್ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.

 ಸಿಎಂಎಸ್  ಪ್ರಕಾರ ಕರ್ನಾಟಕ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಮತ್ತು ಅಭ್ಯರ್ಥಿಗಳು ವೆಚ್ಚ ಮಾಡಿದ ಮೊತ್ತ 9. 500 ರಿಂದ 10, 500 ಕೋಟಿ ರೂ. ತಲುಪಿದೆ.  ಕಳೆದ ಚುನಾವಣೆಗಿಂತ ಈ ಬಾರಿ ಮೂರುಪಟ್ಟು ಹೆಚ್ಚು ವೆಚ್ಚ ಮಾಡಲಾಗಿದೆ. ಪ್ರಧಾನಮಂತ್ರಿ ಚುನಾವಣೆಯ ಖರ್ಚು ವೆಚ್ಚವನ್ನು ಇದರಲ್ಲಿ ಸೇರಿಸಿಲ್ಲ ಎಂದು ಸರ್ವೆ ತಿಳಿಸಿದೆ.

 ಈ ಹಿಂದಿನ 20 ವರ್ಷದ  ಚುನಾವಣೆ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಇತರ ರಾಜ್ಯಗಳ ಚುನಾವಣೆಗಿಂತಲೂ ಕರ್ನಾಟಕದ ಚುನಾವಣೆಯಲ್ಲಿ ಅತಿ ಹೆಚ್ಚು ವೆಚ್ಚ ಮಾಡಲಾಗಿದೆ. ಕರ್ನಾಟಕ,  ಆಂಧ್ರಪ್ರದೇಶ, ಹಾಗೂ ತಮಿಳುನಾಡು ಚುನಾವಣೆಗಾಗಿ ದೇಶದಲ್ಲಿಯೇ ಅತಿ ಹೆಚ್ಚು ವೆಚ್ಚ ಮಾಡುವ ರಾಜ್ಯಗಳಾಗಿವೆ.

ಈ ವೆಚ್ಚದ  ಆಧಾರದಲ್ಲಿ 2019 ರ ಲೋಕಸಭಾ ಚುನಾವಣೆಯ ಅಂದಾಜು ವೆಚ್ಚ 50 ಸಾವಿರದಿಂದ 60 ಸಾವಿರ ಕೋಟಿ ರೂ ಆಗುವ ಸಾಧ್ಯತೆ ಇದೆ. ಕಳೆದ 2014 ರ ಚುನಾವಣೆಯಲ್ಲಿ 30 ಸಾವಿರ ಕೋಟಿ ರೂ ವೆಚ್ಚ ಮಾಡಲಾಗಿತ್ತು ಎಂದು ಸಿಎಂಎಸ್ ನ ಎನ್  ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮೇ 2 ರಂದು ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿತ್ತು, ಮೇ 12 ರಂದು ಚುನಾವಣೆ ನಡೆದಿದ್ದು, ನಾಳಿನ ಫಲಿತಾಂಶಕ್ಕಾಗಿ ರಾಜ್ಯಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.ಈ ಅಸೆಂಬ್ಲಿ  ಚುನಾವಣೆಯಲ್ಲಿ  ಒಟ್ಟು ಅಭ್ಯರ್ಥಿಗಳ ಖರ್ಚು ಶೇ. 75 ರಷ್ಟು ಹೆಚ್ಚಿದೆ ಎಂದು  ಸಮೀಕ್ಷೆ ಕಂಡುಕೊಂಡಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಶೇ.55 ರಿಂದ 60 ರಷ್ಟು ರಾಜಕೀಯ ಪಕ್ಷಗಳು ಶೇ. 29 ರಿಂದ 30 ರಷ್ಟು  12 ಸಾವಿರದಿಂದ 20 ಸಾವಿರ ಕೋಟಿ  ರೂ ಅಂದಾಜು ವೆಚ್ಚ ಮಾಡುವ ಸಾಧ್ಯತೆ ಇದೆ ಎಂದು  ಹೇಳಲಾಗಿದೆ.

 ಈ ಚುನಾವಣೆಯಲ್ಲಿ ಚುನಾವಣಾ ಆಯೋಗ ವಶಪಡಿಸಿಕೊಂಡಿರುವ  ನಗದು, ಚಿನ್ನಾಭರಣ ಮೊತ್ತ 100 ಕೋಟಿ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ನಡೆಸಿದ ಪ್ರಚಾರ, ಅಭ್ಯರ್ಥಿಗಳ ಕಾರ್ಯಚಟುವಟಿಕೆ.  ಮತದಾರರಿಗೆ ನೀಡಿದ ಹಣ ಮೊದಲಾದ ಅಂದಾಜಿನ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com