
ಹೈದ್ರಾಬಾದ್ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಚುನಾವಣಾನೋತ್ತರ ಸಮೀಕ್ಷೆಗಳ ವರದಿ ಸುಳ್ಳಾಗಲಿದ್ದು, ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆಯಲಿದೆ ಎಂದು ಆ ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ನೋಡಿ ಜನರು ಮತ ಹಾಕಿದ್ದರೆ, ಅದರ ಲಾಭವಾಗಲಿದೆ. ಎಲ್ಲಾ ಸಾಧ್ಯತೆಗಳಿದ್ದು, ಸರಳ ಬಹುಮತ ಪಡೆಯಲಾಗುವುದು, ಒಂದು ವೇಳೆ ಕಡಿಮೆ ಸ್ಥಾನ ಬಂದರೆ ಪರ್ಯಾಯ ಮಾರ್ಗಗಳು ಪಕ್ಷದ ಮುಂದಿವೆ, ನಾಳೆಯ ಫಲಿತಾಂಶದ ನಂತರ ಎಲ್ಲವೂ ಹೊರಬರಲಿದೆ ಎಂದು ಅವರು ಹೇಳಿದರು.
ಒಂದು ವೇಳೆ ಜೆಡಿಎಸ್ ಕಿಂಗ್ ಮೇಕರ್ ಆದಲ್ಲೀ ಅವರೊಂದಿಗೆ ಕೈ ಜೋಡಿಸಲು ಸಿದ್ಧವಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮೋಯ್ಲಿ, ಕರ್ನಾಟಕ ಜಾತ್ಯತೀತ ನೆಲೆಯಾಗಿದ್ದು, ಬಿಜೆಪಿ ಸ್ವಾಭಾವಿಕವಾಗಿ ಬೆಳೆಯಲು ಸಾಧ್ಯವಿಲ್ಲ
ಬಿಜೆಪಿಯ ಆರೋಪಗಳು ಫಲಿತಾಂಶದಲ್ಲಿ ಸಕಾರಾತ್ಮಕವಾಗಿ ಪರಿಣಾಮ ಬೀರಲಿವೆ ಎಂದರು.
ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ದ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮೋಯ್ಲಿ, ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.
Advertisement