ರೂ.100 ಕೋಟಿ ಆಮಿಷ ಊಹಿಸಲಾದರೂ ಸಾಧ್ಯವೇ?; ಕುಮಾರಸ್ವಾಮಿ ಆರೋಪ ತಳ್ಳಿಹಾಕಿದ ಬಿಜೆಪಿ

ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ರೂ.100 ಕೋಟಿ ನೀಡುವ ಆಮಿಷವನ್ನು ನೀಡುತ್ತಿದೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ಮಾಡಿದ್ದಾರೆ. ರೂ.100 ಕೋಟಿ ಆಮಿಷವನ್ನು ಊಹಿಸಲಾದರೂ ಸಾಧ್ಯವೇ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಹೇಳಿದ್ದಾರೆ...
ಕೇಂದ್ರ ಸಚಿವ ಪ್ರಕಾಶ್ ಜವಡೇಕರ್
ಕೇಂದ್ರ ಸಚಿವ ಪ್ರಕಾಶ್ ಜವಡೇಕರ್
ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ರೂ.100 ಕೋಟಿ ನೀಡುವ ಆಮಿಷವನ್ನು ನೀಡುತ್ತಿದೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪ ಮಾಡಿದ್ದಾರೆ. ರೂ.100 ಕೋಟಿ ಆಮಿಷವನ್ನು ಊಹಿಸಲಾದರೂ ಸಾಧ್ಯವೇ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಹೇಳಿದ್ದಾರೆ. 
ಕುಮಾರಸ್ವಾಮಿಯವರ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರೂ.100, ರೂ.200 ಕೋಟಿ ಆಮಿಷವನ್ನು ಊಹಿಸಲಾದರೂ ಸಾಧ್ಯವೇ. ಬಿಜೆಪಿ ಯಾವುದೇ ರೀತಿಯ ಕುದುರೆ ವ್ಯಾಪಾರವನ್ನೂ ಮಾಡುತ್ತಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಈ ವಿಚಾರವನ್ನು ಹಿಡಿದು ರಾಜಕೀಯದಾಟ ಆಡುತ್ತಿದೆ ಎಂದು ಹೇಳಿದ್ದಾರೆ. 
ಜೆಡಿಎಸ್ ಹಾಗೂ ಕಾಂಗ್ರೆಸ್ ಅಪವಿತ್ರದ ಅರ್ಥದಲ್ಲಿ ಮೈತ್ರಿಗೊಂಡಿದೆ. ಕುದುರೆ ವ್ಯಾಪಾರ ಹವ್ಯಾಸ ನಮಗಿಲ್ಲ. ಸರ್ಕಾರ ರಚಿಸುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಂತೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯ್ ವಾಲಾ ಅವರು ನೀಡಿರುವ ಆಹ್ವಾನದ ವಿರುದ್ಧ ಜೆಡಿಎಸ್ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯದ ಮೊರೆ ಹೋಗುವುದು ಅಥವಾ ಇನ್ನಾವುದೇ ನಿರ್ಧಾರ ಕೈಗೊಂಡರೂ ಅದು ಪ್ರಜಾಪ್ರಭುತ್ವದ ಒಳಗಿರಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com