ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಯಾರೆಂದೇ ಗೊತ್ತಿಲ್ಲ; ಸೋಮಶೇಖರ ರೆಡ್ಡಿ

ತಾಜ್ ವೆಸ್ಟ್ ವೆಂಡ್ ನಲ್ಲಿ ನಾನು ನನ್ನ ಸಹೋದರನ ಜೊತೆಯಲ್ಲಿದ್ದೆ, ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿಯವರು ಶನಿವಾರ ಹೇಳಿದ್ದಾರೆ...
ಸೋಮಶೇಖರ ರೆಡ್ಡಿ
ಸೋಮಶೇಖರ ರೆಡ್ಡಿ
Updated on
ಬೆಂಗಳೂರು; ತಾಜ್ ವೆಸ್ಟ್ ವೆಂಡ್ ನಲ್ಲಿ ನಾನು ನನ್ನ ಸಹೋದರನ ಜೊತೆಯಲ್ಲಿದ್ದೆ, ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿಯವರು ಶನಿವಾರ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಸಹೋದರನ ಜೊತೆಗೆ ತಾಜ್ ವೆಸ್ಟ್ ಎಂಡ್ ನಲ್ಲಿದ್ದೆ. ನನ್ನ ಜೊತೆಗೆ ಯಾರೂ ಸಂಪರ್ಕದಲ್ಲಿರಲಿಲ್ಲ. ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಯಾರೆಂದೇ ನನಗೆ ಗೊತ್ತಿಲ್ಲ. ಗೋಲ್ಡ್'ಫಿಂಚ್ ಹೋಟೆಲ್ ನಾನು ಹೋಗಿಯೇ ಇಲ್ಲ ಎಂದು ಹೇಳಿದ್ದಾರೆ. 
ವಿಧಾನಸಭೆ ಅತಂತ್ರ ಪರಿಸ್ಥಿತಿ ಎದುರಾದಾಗಿನಿಂದಲೂ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಅವರು ನಾಪತ್ತೆಯಾಗಿದ್ದರು. ಇಬ್ಬರೂ ಶಾಸಕರೂ ಸೋಮಶೇಖರ ರೆಡ್ಡಿಯವರೊಂದಿಗಿದ್ದು, ಬಿಜೆಪಿ ಕುದುರೆ ವ್ಯಾಪಾರ ಮಾಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಇಬ್ಬರೂ ಶಾಸಕರೂ ವಿಧಾನಮಂಡಲಕ್ಕೆ ಆಗಮಿಸಿದ್ದು, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಂತಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com