ಅಂತಿಮ ಕ್ಷಣದಲ್ಲಿ ಬಿಎಸ್ ವೈ 'ಕೈ' ಕಟ್ಟಿಹಾಕಿದ ಬಿಜೆಪಿ ವರಿಷ್ಠರು?

ಕರ್ನಾಟಕ ವಿಶ್ವಾಸಮತ ಯಾಚನೆ ಪ್ರಹಸನ ಇದೀಗ ಮುಗಿದ ಅಧ್ಯಾಯ.. ಆದರೆ ಶನಿವಾರ ಮಧ್ಯಾಹ್ನದ ವರೆಗೂ ವಿಶ್ವಾಸಮತ ಗೆಲ್ಲುವ ಭರವಸೆಯಲ್ಲಿದ್ದ ಬಿಎಸ್ ಯಡಿಯೂರಪ್ಪ ಅಂತಿಮ ಕ್ಷಣದಲ್ಲಿ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು.
ಅಂತಿಮ ಕ್ಷಣದಲ್ಲಿ ಬಿಎಸ್ ವೈ 'ಕೈ' ಕಟ್ಟಿಹಾಕಿದ ಬಿಜೆಪಿ ವರಿಷ್ಠರು?
ಅಂತಿಮ ಕ್ಷಣದಲ್ಲಿ ಬಿಎಸ್ ವೈ 'ಕೈ' ಕಟ್ಟಿಹಾಕಿದ ಬಿಜೆಪಿ ವರಿಷ್ಠರು?
ಬೆಂಗಳೂರು: ಕರ್ನಾಟಕ ವಿಶ್ವಾಸಮತ ಯಾಚನೆ ಪ್ರಹಸನ ಇದೀಗ ಮುಗಿದ ಅಧ್ಯಾಯ.. ಆದರೆ ಶನಿವಾರ ಮಧ್ಯಾಹ್ನದ ವರೆಗೂ ವಿಶ್ವಾಸಮತ ಗೆಲ್ಲುವ ಭರವಸೆಯಲ್ಲಿದ್ದ ಬಿಎಸ್ ಯಡಿಯೂರಪ್ಪ ಅಂತಿಮ ಕ್ಷಣದಲ್ಲಿ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. 
ಆದರೆ ಬಿಎಸ್ ವೈ ಈ ನಿರ್ಧಾರದ ಹಿಂದೆ ಬಿಜೆಪಿ ಹೈಕಮಾಂಡ್ ನ ಖಡಕ್ ಸೂಚನೆಯೊಂದು ಕೆಲಸ ಮಾಡಿದೆ ಎಂದು  ಹೇಳಲಾಗುತ್ತಿದೆ. ಹೌದು...104 ಸದಸ್ಯ ಬಲವುಳ್ಳ ಬಿಜೆಪಿ ಬಹುಮತ ಪಡೆಯಲು ಸಾಕಷ್ಟು ಕಸರತ್ತು ನಡೆಸಿತ್ತು. ಮಾಜಿ ಗಣಿಧಣಿ ಜನಾರ್ಧನ ರೆಡ್ಡಿ, ಬಿಎಸ್ ವೈ ಪುತ್ರ ವಿಜಯೇಂದ್ರ, ಬಿಎಸ್ ವೈ ಆಪ್ತ ಬಿಜೆ ಪುಟ್ಟಸ್ವಾಮಿ, ಶ್ರೀರಾಮುಲು ಅಷ್ಟೇ ಏಕೆ ಖುದ್ಧು ಬಿಎಸ್ ಯಡಿಯೂರಪ್ಪ ಅವರೂ ಕೂಡ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದ್ದರು ಎಂಬ ಆರೋಪಗಳಿವೆ. 
ಇನ್ನು ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಗೋಲ್ಡನ್ ಫಿಂಚ್ ಹೊಟೆಲ್ ನಲ್ಲೇ ತಂಗಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಸದನಕ್ಕೆ ಗೈರಾಗುವಂತೆ ನೋಡಿಕೊಳ್ಳುವ ಸತತ ಪ್ರಯತ್ನ ಮಾಡಿದ್ದರು. ಅಲ್ಲದೆ ಮದ್ಯವರ್ತಿಗಳಾದಿಯಾಗಿ ಶಾಸಕರ ಸಂಪರ್ಕ ಸಾಧಿಸಿ ಶಾಸಕರನ್ನು ಸೆಳೆಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿತ್ತು. ಈ ಎಲ್ಲ ಪ್ರಹಸನಗಳು ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿ ಮತ್ತು ಚರ್ಚೆಗೆ ಗ್ರಾಸವಾಯಿತು. 
ಸತತ ಪ್ರಯತ್ನಗಳ ಹೊರತಾಗಿಯೂ ಯಾವುದೇ ರೀತಿಯ ಯಶ ಕಾಣದ ಹಿನ್ನಲೆಯಲ್ಲಿ ಮಧ್ಯ ಪ್ರವೇಶ ಮಾಡಿದ ಬಿಜೆಪಿ ಹೈಕಮಾಂಡ್ ಬಿಎಸ್ ವೈ ಗೆ ಒಂದು ಖಡಕ್ ಸೂಚನೆ ರವಾನೆ ಮಾಡಿತ್ತು. ವಿಶ್ವಾಸಮತ ಗೆಲ್ಲುವ ಭರದಲ್ಲಿ ಪಕ್ಷದ ಇಮೇಜಿಗೆ ಧಕ್ಕೆ ಬರುವಂತೆ ನಡೆದುಕೊಳ್ಳಬೇಡಿ. ವಾಮ ಮಾರ್ಗ ತುಳಿದು ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದು ವರಿಷ್ಛರು ಖಡಕ್ ಸೂಚನೆ ನೀಡಿದ್ದರು.  ಬಹುಮತ ಸಾಬೀತು ಸಂಬಂಧ ಬಿಜೆಪಿ ಪ್ರಯತ್ನಗಳು ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದ ಹಿನ್ನಲೆಯಲ್ಲಿ ಬಿಜೆಪಿ ವರಿಷ್ಠರು ಈ ಸೂಚನೆ ನೀಡಿದರು ಎನ್ನಲಾಗಿದೆ.
ಇದಕ್ಕೆ ಇಂಬು ನೀಡುವಂತೆ ಬಹುಮತ ಪರೀಕ್ಷೆಯಲ್ಲಿ ಪ್ರತಿಪಕ್ಷದ 10 ಶಾಸಕರು ಗೈರಾಗುವ ಮೂಲಕ ತನ್ನ ಕೈ ಹಿಡಿಯಲಿದ್ದಾರೆ ಎಂದು ಯಡಿಯೂರಪ್ಪ ನಂಬಿದ್ದರು.  ಆದರೆ ಮಿಸ್ಸಿಂಗ್ ಶಾಸಕರಾ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಎಲ್ಲ ಶಾಸಕರು ಸದನಕ್ಕೆ ಹಾಜರಾಗಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೆ ಪಕ್ಷಗದ ವಿಪ್ ಸಹ ತೆಗೆದು ಕೊಂಡ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಬಿಎಸ್ ವೈ ವಿಶ್ವಾಸ ಸಂಪೂರ್ಣ ಕುಸಿಯಿತು. ಇದೇ ಕಾರಣಕ್ಕೆ ಬಿಎಸ್ ವೈ ವಿಶ್ವಾಸ ಮತ ಯಾಚನೆಗೆ ಬದಲಾಗಿ ವಿದಾಯದ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಘೋಷಣೆ ಮಾಡಿದರು ಎಂದು ಹೇಳಲಾಗಿದೆ.
ಒಟ್ಟಾರೆ ಈ ಹಿಂದೆ ಮ್ಯಾಜಿಕ್ ಮಾಡಿದ್ದ ಆಪರೇಷನ್ ಕಮಲ ಇದೀಗ ಕೈ ಕೊಟ್ಟ ಪರಿಣಾಮ ಬಿಎಸ್ ವೈ ತಮ್ಮ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com