ಮಿಸ್ಸಿಂಗ್ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಅಂತಿಮ ಕ್ಷಣದಲ್ಲಿ ಪತ್ತೆಯಾಗಿದ್ದು ಹೇಗೆ?

ಕಮಲ ಪಾಳಯದ ತೆಕ್ಕಿಗೆ ಸಿಲುಕಿದ್ದ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಹಲವು ನಾಟಕೀಯ ಬೆಳವಣಿಗೆ ಹಾಗೂ ಕಣ್ಣಾಮುಚ್ಚಾಲೆ ಬಳಿಕ ಶನಿವಾರ ಕಾಂಗ್ರೆಸ್'ಗೆ ವಾಪಸ್ಸಾದರು...
ಮಿಸ್ಸಿಂಗ್ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಅಂತಿಮ ಕ್ಷಣದಲ್ಲಿ ಪತ್ತೆಯಾಗಿದ್ದು ಹೇಗೆ?
ಮಿಸ್ಸಿಂಗ್ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಅಂತಿಮ ಕ್ಷಣದಲ್ಲಿ ಪತ್ತೆಯಾಗಿದ್ದು ಹೇಗೆ?
ಬೆಂಗಳೂರು; ಕಮಲ ಪಾಳಯದ ತೆಕ್ಕಿಗೆ ಸಿಲುಕಿದ್ದ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಹಲವು ನಾಟಕೀಯ ಬೆಳವಣಿಗೆ ಹಾಗೂ ಕಣ್ಣಾಮುಚ್ಚಾಲೆ ಬಳಿಕ ಶನಿವಾರ ಕಾಂಗ್ರೆಸ್'ಗೆ ವಾಪಸ್ಸಾದರು. 
ಇಬ್ಬರೂ ಶಾಸಕರು ಕಾಂಗ್ರೆಸ್'ಗೆ ಹಿಂತಿರುಗುವಂತೆ ಮಾಡಲು ಕಾಂಗ್ರೆಸ್ ನಾಯಕರು ತೀವ್ರ ಕಸರತ್ತುಗಳನ್ನು ನಡೆಸಿದರೂ ಆಪರೇಷನ್ ಆನಂದ್-ಪ್ರತಾಪ್ ಯಶಸ್ವಿಯಾಗಿರಲಿಲ್. ಕಾಂಗ್ರೆಸ್ ಸಂಪರ್ಕಕ್ಕೂ ಸಿಗದೆ ಇಬ್ಬರೂ ಯಡಿಯೂರಪ್ಪ ಬಹುಮತ ಸಾಬೀತು ಮಾಡಲು ವಿಫಲರಾಗುತ್ತಿದ್ದಾರೆಂಬ ಮಾಹಿತಿ ಪಡೆದು ನಾಲ್ಕು ದಿನಗಳ ಭಾರೀ ಹೈಡ್ರಾಮಾ ಬಳಿಕ ಅಂತಿಮವಾಗಿ ಕಾಂಗ್ರೆಸ್ ಕೈ ಹಿಡಿದರು. 
ಮಧ್ಯಾಹ್ನದರವೆಗೂ ವಿಧಾನಸೌಧಕ್ಕೆ ಆಗಮಿಸಿದ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಬಿಜೆಪಿ ಪರ ಮತ ಚಲಾಯಿಸುವ ಸಾಧ್ಯತೆ ಮನಗಂಡು ಸಂಸದ ಡಿ.ಕೆ.ಸುರೇಶ್ ಹಾಗೂ ಹೆಚ್.ಎಂ. ರೇವಣ್ಣ ಅವರು ಹೋಟೆಲ್ ಗೆ ತೆರಳಿ ವಿಪ್ ಜಾರಿಗೆ ಮುಂದಾದರು. ಈ ವೇಳೆ ಪ್ರತಾಪ್ ಗೌಡ ಜತೆ ಸ್ಥಳದಲ್ಲಿ ಕಾಣಿಸಿಕೊಂಡ ರಾಯಚೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಬ್ಬರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಮುಂದಾದ ಘಟನೆ ಕೂಡ ನಡೆಯಿತು. 
ರಾಜ್ಯದಲ್ಲಿದ್ದರೆ ಶಾಸಕರನ್ನು ಉಳಿಸಿಕೊಳ್ಳುವುದು ಕಷ್ಟ ಎಂಬ ಅರಿವು ಬರುತ್ತಿದ್ದಂತೆಯೇ ಶಾಸಕರನ್ನು ಹೊರರಾಜ್ಯಕ್ಕೆ ಸಾಗಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದ್ದರು. ಅದನ್ನು ಜಾರಿಗೆ ತಂದಿದ್ದು ಕೂಡ ಶಿವಕುಮಾರ್ ಸಹೋದರರು. ಮತ್ತೆ ಶಾಸಕರನ್ನು ನಗರಕ್ಕೆ ಕರೆ ತಂದು ಅವರು ಮತ ಚಲಾಯಿಸುವವರೆಗೂ ಅವರ ಮೇಲೆ ಕಣ್ಗಾವಲಿಟ್ಟಿದ್ದು, ಯಾರೂ ಬಿಜೆಪಿಯ ಸಂಪರ್ಕಕ್ಕೆ ಬರದಂತೆ ತಡೆದಿದ್ದು ಹಾಗೂ ಬಿಜೆಪಿಯ ವಶದಲ್ಲಿದ್ದ ಕಾಂಗ್ರೆಸ್ ಶಾಸಕ ಆನಂತ್ ಸಿಂಗ್ ಅವರು ಪಕ್ಷದ ತೆಕ್ಕೆಗೆ ಹಿಂದಿರುಗಿದಾಗ ಅವರನ್ನು ಕರೆತಂದಿದ್ದು ಹಾಗೂ ವಿಪ್ ಜಾರಿಗೊಳಿಸಿದ್ದು ಡಿ.ಕೆ.ಶಿವಕುಮಾರ್. 
ಮಧ್ಯಾಹ್ನ 2.40ರ ಬಳಿಕ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ವಿಫಲರಾಗುತ್ತಿರುವ ಮಾಹಿತಿ ಪಡೆದ ಪ್ರತಾಪ್ ಗೌಡ ಪಾಟೀಲ್, ಮಧ್ಯಾಹ್ನ 2.40ಕ್ಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಈ ವೇಳೆ ಬಿಜೆಪಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪ್ರತಾಪ್ ಗೌಡ ಹೈ ಹಿಡಿದು ಎಳೆದಾಡಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಖೆ ಕಾಂಗ್ರೆಸ್ ಶಾಸಕರು ಹಾಗೂ ಪೊಲೀಸರ ರಕ್ಷಣೆಯಲ್ಲಿ ಪ್ರತಾಪ್ ಗೌಡ ವಿರೋಧ ಪಕ್ಷದ ಮೊಗಸಾಲೆಗೆ ಆಗಮಿಸಿದರು. 
ತೀವ್ರ ಮುಜುಗರಕ್ಕೆ ಒಳಗಾಗಿದ್ದ ಪ್ರತಾಪ್ ಗೌಡ ಯಾರಿಗೂ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಬಳಿಕ 3.40ಕ್ಕೆ ಆನಂದ್ ಸಿಂಗ್ ಕೂಡ ವಿಧಾನಸಭೆ ಪ್ರವೇಶಿಸಿದರು. ಆನಂದ್ ಸಿಂಗ್ ಅವರನ್ನು ಡಿ.ಕೆ.ಶಿವಕುಮಾರ್ ಸ್ವತಃ ಕೈಹಿಡಿದು ವಿಧಾನಸಭೆಗೆ ಕರೆತಂದು ಪಕ್ಕದಲ್ಲೇ ಕೂರಿಸಿಕೊಂಡರು. ಈ ಮೂಲಕ ಇಬ್ಬರೂ ಶಾಸಕರು ಮತ್ತೆ ಕಾಂಗ್ರೆಸ್ ಗೂಡಿಗೆ ಮರಳಿದಂತಾಯಿತು. 
ಕಾಂಗ್ರೆಸ್'ನ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಸಂಪರ್ಕಕ್ಕೆ ಸಿಗದೆ ಮಾಯವಾಗಿದ್ದರು. ಇಬ್ಬರನ್ನೂ ಶ್ರೀರಾಮುಲು ಆಪ್ತರು ಗೌಪ್ಯ ಸ್ಥಳದಲ್ಲಿಟ್ಟು ಕಾಂಗ್ರೆಸ್ ವಿರುದ್ಧ ಮತಚಲಾಯಿಸಲು ಆಮಿಷ ಒಡ್ಡಿದ್ದರು ಎಂದು ಹೇಳಲಾಗುತ್ತಿತ್ತು. ಅವರನ್ನು ಸಂಪರ್ಕಿಸಲು ಹಲವು ಸುತ್ತಿನ ಪ್ರಯತ್ನ ನಡೆಸಿದರೂ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಿರಲಿಲ್ಲ. ಕೊನೆಗೆ ಪಕ್ಷದ ವಿಪ್ ಜಾರಿಗೂ ಅವರು ಸಿಕ್ಕಿರಲಿಲ್ಲ. 
ಕುಟುಂಬ ಸಮೇತ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಟ ಪಾಟೀಲ್'ರನ್ನು ದೆಹಲಿಗೆ ಕರೆದೊಯ್ದಿದ್ದ ಸೋಮಶೇಖರ್ ರೆಡ್ಡಿ ಶನಿವಾರ ಎರಡು ಪ್ರತ್ಯೇಕ ವಿಮಾನಗಳಲ್ಲಿ ಬೆಂಗಳೂರಿಗೆ ಕರೆತಂದಿದ್ದರು. ಇಬ್ಬರನ್ನೂ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಉಳಿಸಿಕೊಂಡಿದ್ದ ಬಿಜೆಪಿ ಮಧ್ಯಾಹ್ನದವರೆಗೂ ವಿಧಾನಸೌದದತ್ತ ಸುಳಿಯರೂ ಬಿಟ್ಟಿರಲಿಲ್ಲ. ಇದರಿಂದ ಕಾಂಗ್ರೆಸ್ ನಾಯಕರ ಮುಖದಲ್ಲಿ ಆತಂಕ ಮನೆ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com