ಮೈತ್ರಿ ಸರ್ಕಾರಕ್ಕೆ ಭರ್ಜರಿ ಸಿದ್ಧತೆ: ಯಾರಿಗೆ ಯಾವ ಸ್ಥಾನ? ಎಲ್ಲೆಡೆ ಹರಿದಾಡುತ್ತಿದೆ ಸಂಭಾವ್ಯ ಮಂತ್ರಿಮಂಡಲ ಪಟ್ಟಿ

ವಿಶ್ವಾಸಯಾಚಿಸುವಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ವಿಫಲರಾದ ಹಿನ್ನಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವಾಸಯಾಚಿಸುವಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ವಿಫಲರಾದ ಹಿನ್ನಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿರುವ ಮೈತ್ರಿ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ ಹರಿದಾಡತೊಡಗಿದೆ. 
ವಿಧಾನಸಭಾ ಚುನಾವಣೆಯಲ್ಲಿ ಕೇವಲ 38 ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಸಂಪುಟ ರಚನೆಯಲ್ಲಿ ಜೆಡಿಎಸ್'ಗೆ ಸಿಂಹಪಾಲು ದೊರೆಯುವ ಸಾಧ್ಯತೆಗಳಿವೆ. 
ಸಂಭಾವ್ಯ ಮಂತ್ರಿ ಮಂಡಲ ಪಟ್ಟಿಯ ಪ್ರಕಾರ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸ್ಥಾನದ ಜೊತೆಗೆ 8 ಪ್ರಮುಖ ಖಾತೆಗಳನ್ನು ಜೆಡಿಎಸ್ ಪಡೆದುಕೊಳ್ಳಲಿದೆ. ಕಾಂಗ್ರೆಸ್ ಪಾಳಯದಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಜೊತೆಗೆ ಗೃಹ ಸಚಿವ ಸ್ಥಾನ ಹಾಗೂ ಆ ಪಕ್ಷದ ಇತರೆ 18 ಶಾಸಕರುಗಳಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತ ಪಕ್ಷ ಕಾಂಗ್ರೆಸ್ ನಾಯಕ ಸ್ಥಾನ ದೊರತಿದೆ. 
ಮೈತ್ರಿ ಸರ್ಕಾರದ ಸಂಭಾವ್ಯ ಸಚಿವರು ಯಾರು ಯಾರು ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವ್ಯಾವ ಶಾಸಕರಿಗೆ ಯಾವ ಯಾವ ಕಾತೆ ನೀಡಲಾಗುತ್ತದೆ ಎಂಬ ಅಂಶಗಳು ಈ ಪಟ್ಟಿಯಲ್ಲಿದ್ದು, ವಾಟ್ಸ್ ಅ್ಯಪ್ ಮತ್ತು ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡತೊಡಗಿದೆ. ಸರ್ಕಾರ ರಚನೆಗೂ ಮೊದಲೇ ಹರಿದಾಡುತ್ತಿರುವ ಈ ಪಟ್ಟಿ ಅಧಿಕೃತವೇ, ಅನಧಿಕೃತವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 
ಸಂಪುಟದಲ್ಲಿ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲ ನಾಯಕರಲ್ಲಿ ಅಸಮಾಧಾನ ಮೂಡುವುದು ಸಾಮಾನ್ಯ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com