ಉನ್ನತ ಸ್ಥಾನಕ್ಕೇರುವ ಸಲುವಾಗಿ ರಾಜಕೀಯ ಮುಖ್ಯವಾಹಿನಿಯಲ್ಲಿ ಇದ್ದೇನೆ: ಪರಮೇಶ್ವರ್

ಕೇವಲ ಎಂಎಲ್ಎ, ಎಂಎಲ್'ಸಿ ಅಥವಾ ಸಚಿವನಾಗುವ ಸಲುವಾಗಿ ನಾನು ರಾಜಕೀಯ ಮುಖ್ಯವಾಹನಿಗೆ ಬರಲಿಲ್ಲ, ಉನ್ನತ ಸ್ಥಾನಕ್ಕಾಗಿ ಬಂದಿದ್ದೆ. ಒಂದಲ್ಲ ಒಂದು ದಿನ ಉನ್ನತ ಸ್ಥಾನಕ್ಕೇರುವ ವಿಶ್ವಾಸ ನನಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ...
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅ
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅ
Updated on
ಬೆಂಗಳೂರು: ಕೇವಲ ಎಂಎಲ್ಎ, ಎಂಎಲ್'ಸಿ ಅಥವಾ ಸಚಿವನಾಗುವ ಸಲುವಾಗಿ ನಾನು ರಾಜಕೀಯ ಮುಖ್ಯವಾಹನಿಗೆ ಬರಲಿಲ್ಲ, ಉನ್ನತ ಸ್ಥಾನಕ್ಕಾಗಿ ಬಂದಿದ್ದೆ. ಒಂದಲ್ಲ ಒಂದು ದಿನ ಉನ್ನತ ಸ್ಥಾನಕ್ಕೇರುವ ವಿಶ್ವಾಸ ನನಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ. 
ತಮ್ಮ ಬೆಂಬಲಿಗರೊಂದಿಗೆ ನಡೆಸಿದ ಮಾತುಕತೆ ವೇಳೆ, ಪರಮೇಶ್ವರ್ ಅವರು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. 
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಪರಮೇಶ್ವರ್ ಅವರು ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಆಹ್ವಾನದ ಮೇರೆಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ದಾಖಲೆಗಳನ್ನು ಬರೆದಿದ್ದಾರೆ. 
ತುಮಕೂರಿನ ಗೊಲ್ಲಹಳ್ಳಿ (ಸಿದ್ಧಾರ್ಥನಗರ) ಗಂಗಮಲ್ಲಮ್ಮ ಹಾಗೂ ಗಂಗಾಧರಯ್ಯ ದಂಪತಿಗೆ ಜನಿಸಿದ ಪರಮೇಶ್ವರ್ ಅವರು ವಿದೇಶದಲ್ಲಿ ಅತ್ಯುನ್ನತ ವ್ಯಾಸಾಂಗ ಮಾಡಿದ್ದಾರೆ. ತಂದೆ ಮಾಜಿ ವಿಧಾನಪರಿಷತ್ ಸದಸ್ಯರೂ ಆದ ಗಂಗಾಧರ್ಯ್ಯ ಅವರ ಪ್ರೋತ್ಸಾಹದೊಂದಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಷಯದಲ್ಲಿ ಬಿಎಸ್'ಸಿ ಹಾಗೂ ಎಂಎಸ್'ಸಿ ಪದವಿ ಪಡೆದರು. ಬಳಿಕ ಆಸ್ಟ್ರೇಲಿಯಾದಲ್ಲಿ ಕೃಷಿ ವಿಜ್ಞಾನದಲ್ಲಿ ಪಿಹೆಚ್'ಡಿ ಪದವಿ ಪಡೆವ ಮೂಲಕ ಕೃಷಿ ವಿಜ್ಞಾನಿ ಎನಿಸಿಕೊಂಡರು. 
ಬಳಿಕ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಅವರು ರಾಜೀವ್ ಗಾಂಧಿ ಅವರ ಸೂಚನೆ ಮೇರೆಗೆ ಕೆಪಿಸಿಸಿ ಜಂಟಿ ಕಾರ್ಯದರ್ಶಿಯಾಗಿ ನೇಮಕವಾದರು. ಬಳಿಕ ಪರಮೇಶ್ವರ್ ಸಾಮರ್ಥ್ಯವನ್ನರಿತ ಸೋನಿಯಾ ಗಾಂಧಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಅಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಿದ್ದರು. ನಂತರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಪ್ರಚಾರ ಸಮಿತಿ ಅಧ್ಯಕ್ಷ ಸೇರಿ ವಿವಿಧ ಹುದ್ದೆ ಅಲಂಕರಿಸಿದ ಅವರು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದರು. 
ಕರ್ನಾಟಕದ ಇತಿಹಾಸದಲ್ಲಿಯೇ ಸತತ ಎರಡು ಬಾರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆದ ಕೀರ್ತಿ ಪರಮೇಶ್ವರ್ ಅವರದ್ದು. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ ಸ್ಥಾನ ಅಷ್ಟೇ ಅಲ್ಲ, ಮುಖ್ಯಮಂತ್ರಿ ಹುದ್ದೆಗೂ ಗೌರವ ತರಬಲ್ಲ ಅನುಭವಿ ಆಡಳಿತಗಾರರಾಗಿದ್ದಾರೆ. 
4 ಬಾರಿ ವಿಧಾನಸಬೆ ಚುನಾಯಿತರಾಗಿರುವ ಅವರು, 1989ರಲ್ಲಿ ಜನತಾದಳದ ಸಿ.ರಾಜವರ್ಧನ್ ಅವರನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದರು. 1999ರಲ್ಲಿ ಮಧುಗಿರಿಯಿಂದ 55 ಸಾವಿರ ಮತಗಳ ಭಾರೀ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದ್ದರು. ಇದು ಆ ವರ್ಷದ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಸಾಧಿಸಿದ್ದ ಅತೀದೊಡ್ಡ ಅಂತರದ ಗೆಲುವಾಗಿತ್ತು. 2004ರಲ್ಲೂ ಮಧುಗಿರಿಯಿಂದ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ ರಚನೆ ಬಳಿಕ 2008ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಗೆದ್ದಿದ್ದರು. 
2013ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ವಿರುದ್ಧ ಪರೀಜಿತರಾಗಿದ್ದರು. 2018ರ ಮೇ.ನಲ್ಲಿ ನಡೆದ ಚುನಾವಣೆಯಲ್ಲಿ ಸುಧಾಕರ್ ಲಾಲ್ ವಿರುದ್ಧ ಗೆದ್ದು 4ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 
1993-94ರಲ್ಲಿ ಎಂ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ, 1999-2004ರವರೆಗೆ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐಟಿ-ಬಿಟಿ ಸಚಿವರಾಗಿದ್ದ ಪರಮೇಶ್ವರ್ ಅವರು, 2015-17ರಲ್ಲಿ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 
2015ರ ಅಕ್ಟೋಬರ್ 30ರಂದು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ನೇಮಕಗೊಂಡಿದ್ದ ಅವರು, 2017ರ ಜೂನ್ ನಲ್ಲಿ ಚುನಾವಣಾ ಪ್ರಚಾರದ ಹೊಣೆ ಹೊತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2013ರ ಚುನಾವಣೆಯಲ್ಲಿ ಸೋತ ಬಳಿಕ 2014ರ ಜುಲೈ1ರಲ್ಲಿ ವಿಧಾನಪರಿಷತ್'ಗೆ ಆಯ್ಕೆಯಾಗಿ ಗೃಹ ಸಚಿವರೂ ಆಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com