2006ರಲ್ಲಿ 20 ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ರಾಜ್ಯವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಪಕ್ಷವನ್ನು ರಕ್ಷಣೆ ಮಾಡಿದ್ದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಒಪ್ಪಿಗೆ ನೀಡಿದ್ದು ರಾಜ್ಯದ ಒಳಿತಿಗಾಗಿಯೇ ವಿನಃ ವೈಯಕ್ತಿಕವಾಗಿ ನನ್ನ ಆಸೆ, ಆಕಾಂಕ್ಷೆಗಳಿಗಲ್ಲ. ಮುಖ್ಯಮಂತ್ರಿಯಾಗಿ ಮೆರೆಯೋದಕ್ಕಾಗಲೀ, ಅಟ್ಟಹಾಸ ಮಾಡುವುದಕ್ಕಾಗಲಿ ಈ ಪದವಿ ಸ್ವೀಕರಿಸಿಲ್ಲ. ಈ ಬಗ್ಗೆ ಯಾರೂ ಅನ್ಯತಾ ಭಾವಿಸುವುದು ಬೇಡ ಎಂದು ತಿಳಿಸಿದ್ದಾರೆ.
ವಿಶ್ವಾಸಮತಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ದೊಡ್ಡ ನಿರ್ಧಾರಕ್ಕೆ ನಾನು ಕೈ ಹಾಕುವುದಿಲ್ಲ. ಶುಕ್ರವಾರ ವಿಶ್ವಾಸಮತಯಾಚನೆಯನ್ನು ಎದುರಿಸುತ್ತೇನೆ. ಇದಾದ ಬಳಿಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆಂದಿದ್ದಾರೆ.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ತಾಯಿ ಚೆನ್ನಮ್ಮ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಅವರೆಲ್ಲಾ ರಾಜಕಾರಣದಲ್ಲಿ ಇರುವವರಲ್ಲ. ಆದ್ದರಿಂದ ಅವರ ಪ್ರತಿಕ್ರಿಯೆಗಳಿಗೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಹಲವಾರು ರೀತಿಯ ಪರ ಹಾಗೂ ವಿರೋಧ ಟೀಕೆಗಳು ಬರುವುದು ಸಹಜ. ಚುನಾವಣೆ ನಂತರ ನಮ್ಮ ಭಾವನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರಬೇಕು. ಅವೆಲ್ಲಾ ಮುಗಿದು ಹೋಗಿರುವ ಅಧ್ಯಾಯ ಎಂದು ತಿಳಿಸಿದ್ದಾರೆ.