ಉಪಚುನಾವಣೆ ಫಲಿತಾಂಶ: ಮೋದಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿದ ಸೂಚನೆ?

ಮಂಗಳವಾರ ಪ್ರಕಟವಾದ ಉಪ ಚುನಾವಣೆ ಫಲಿತಾಂಶ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ...
ಜಯ ಸಾಧಿಸಿದ ಮೈತ್ರಿ ಅಭ್ಯರ್ಥಿಗಳು
ಜಯ ಸಾಧಿಸಿದ ಮೈತ್ರಿ ಅಭ್ಯರ್ಥಿಗಳು
ಬೆಂಗಳೂರು: ಮಂಗಳವಾರ ಪ್ರಕಟವಾದ ಉಪ ಚುನಾವಣೆ ಫಲಿತಾಂಶ 2019ರ ಲೋಕಸಭೆ ಚುನಾವಣೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಮುಚ್ಚಿದೆ ಎಂಬ ಸಂದೇಶವನ್ನು ನೀಡುತ್ತಿದೆ  ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್ -25 ಗೆ ಸರಿಯಾದ ಪೆಟ್ಟು ನೀಡಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು 3 ಲೋಕಸಕ್ಷೆ ಕ್ಷೇತ್ರಗಳಲ್ಲಿ 2 ರಲ್ಲಿ ಜಯ ಸಾಧಿಸಿವೆ.ಜೊತೆ ಎರಡು ವಿಧಾನಸಭೆ ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸಿವೆ. ಜೊತೆಗೆ ಭಾರಿ ಬಹುಮತಗಳ ಅಂತರದಲ್ಲಿ ಮೈತ್ರಿ ಪಕ್ಷಗಳು ಗೆಲುವು ಸಾಧಿಸಿವೆ. ಇದು ಬಿಜೆಪಿ ನಾಯಕರ ನೈತಿಕ ಸ್ಥೈರ್ಯಕ್ಕೆ ಪೆಟ್ಟು ನೀಡಿದೆ.
ವಿ,.ಎಸ್ ಉಗ್ರಪ್ಪ ಗೆಲುವು ಸಾಧಿಸುವುದು ಮೂಲಕ 15 ವರ್ಷಗಳ ನಂತರ ಬಿಜೆಪಿಯಿಂದ ಕಾಂಗ್ರೆಸ್ ಬಳ್ಳಾರಿ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಮೈತ್ರಿ ಪಕ್ಷಗಳು ಬಿಜೆಪಿ ಜೆ,ಶಾಂತಾ ಅವರನ್ನ 2.28 ಲಕ್ಷ ಮತಗಳಿಂದ ಪರಾಭವಗೊಳಿಸಿದ್ದಾರೆ, 2014 ರ ಚುನಾವಣೆಯಲ್ಲಿ ಶ್ರೀರಾಮುಲು 84 ಸಾವಿರ ಮತಗಳಿಂದ ಗೆದ್ದಿದ್ದರು.
ಇನ್ನೂ ಶಿವಮೊಗ್ಗವನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಹರಸಾಹಸ ಮಾಡಿದ್ದಾರೆ. ಮಧು ಬಂಗಾರಪ್ಪ ವಿರುದ್ಧ ಬಿ.ವೈ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ, ಆದರೆ ಕೇವಲ 52 ಸಾವಿರ ಮತಗಳಿಂದ ಮಾತ್ರ, 2014 ರಲ್ಲಿ ಯಡಿಯೂರಪ್ಪ 3.50 ಲಕ್ಷ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದರು. ಇನ್ನೂ ಜಮಖಂಡಿ ವಿಧಾನಸಭೆ ಚುನಾವಣೆ ಫಲಿತಾಂಶ ಇವುಗಳಿಗಿಂತ ಭಿನ್ನವಾಗಿಲ್ಲ,  ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ 40 ಸಾವಿರ ಮತಗಳಿಂದ ಜಯ ಸಾಧಿಸಿದ್ದಾರೆ.
ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಬಿಜೆಪಿ ಇನ್ನೂ ತನ್ನ ಅಸ್ಥಿತ್ವ ಸ್ಥಾಪಿಸಿಕೊಳ್ಳಲು ಹೆಣಗಾಡುತ್ತಿರುವುದು ಪಲಿತಾಂಶದಿಂದ ಬಹಿರಂಗ ಗೊಂಡಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ ಬಲ ಗೊಳಿಸಲು ಕೇಂದ್ರ ನಾಯಕರು ಪ್ರಯತ್ನ ಪಡುತ್ತಿದ್ದಾರೆ, 2019ರ ಲೋಕಸಭೆ ಚುನಾವಣೆಯಲ್ಲಿ  28 ಲೋಕಸಭೆ ಕ್ಷೇತ್ರಗಳ ಪೈಕಿ 25 ಸೀಟುಗಳನ್ನು ಗೆಲ್ಲುವುದಾಗಿ ಬಿಜೆಪಿ ಭರವಸೆ ವ್ಯಕ್ತ ಪಡಿಸಿದೆ, ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿಜೆಪಿಯ ಮಿಷನ್ 25 ಗೆ ಬೆದರಿಕೆ ತಂದಿಟ್ಟಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು ಒಗ್ಗಟ್ಟಾಗಿ ಹೋರಾಡಿದರೆ ಎಲ್ಲಾ 28 ಕ್ಷೇತ್ರಗಳಲ್ಲೂ ಸಾಧಿಸುವ ಅವಕಾಶವಿದೆ ಎಂದು ಸಿಎಂ ಕುಮಾರ ಸ್ವಾಮಿ ಭರವಸೆ ವ್ಯಕ್ತ ಪಡಿಸಿದ್ದಾರೆ, ರಾಷ್ಟ್ರ ರಾಜಕಾರಣಜದಲ್ಲಿ ತಮ್ಮ ತಂದೆ ಎಚ್,ಡಿ ದೇವೇಗೌಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಂದಾಗಿ ಕೆಲಸ ಮಾಡುತ್ತೇವೆ, ರಾಹುಲ್ ಗಾಂಧಿ ಜೊತೆ ಕೈ ಜೋಡಿಸುತ್ತೇವೆ ಎಂದು ದೇವೇಗೌಡ ಕೂಡ ಹೇಳಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಸುಮಾರು 23 ಕ್ಷೇತ್ರಗಳಲ್ಲಿ ಜಯ ಸಾಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com